/newsfirstlive-kannada/media/media_files/2025/12/13/pakisthan-sanskrit-2025-12-13-10-38-56.jpg)
ವಿಭಜನೆಯ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಶೈಕ್ಷಣಿಕ ಪಠ್ಯಕ್ರಮದಲ್ಲಿ ಸಂಸ್ಕೃತ ಭಾಷೆಯನ್ನು ಸೇರಿಸಲಾಗಿದೆ. ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ (LUMS) ಈ ಶಾಸ್ತ್ರೀಯ ಭಾಷೆಯಲ್ಲಿ ನಾಲ್ಕು-ಕ್ರೆಡಿಟ್ ಕೋರ್ಸ್ ಪ್ರಾರಂಭಿಸಿದೆ.
ಈ ಕೋರ್ಸ್ ಅಡಿಯಲ್ಲಿ, ಮಹಾಭಾರತ ದೂರದರ್ಶನ ಸರಣಿಯ ಪ್ರಸಿದ್ಧ ಥೀಮ್ ‘ಹೈ ಕಥಾ ಸಂಗ್ರಾಮ್ ಕಿ’ನ (Hai katha sangram ki) ಉರ್ದು ಆವೃತ್ತಿಯನ್ನು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ. ಗುರ್ಮಾನಿ ಕೇಂದ್ರದ ನಿರ್ದೇಶಕ ಡಾ. ಅಲಿ ಉಸ್ಮಾನ್ ಖಾಸ್ಮಿ ಈ ಬಗ್ಗೆ ಪ್ರತಿಕ್ರಿಯಿಸಿ.. ಪಂಜಾಬ್ ವಿಶ್ವವಿದ್ಯಾಲಯದ ಗ್ರಂಥಾಲಯಗಳಲ್ಲಿ ಅತ್ಯಂತ ಶ್ರೀಮಂತ. ಆದರೆ ಹೆಚ್ಚು ನಿರ್ಲಕ್ಷಿಸಲ್ಪಟ್ಟ ಸಂಸ್ಕೃತ ಸಂಗ್ರಹಗಳಲ್ಲಿ ಒಂದನ್ನು ಹೊಂದಿದೆ ಎಂದಿದ್ದಾರೆ.
ಇದನ್ನೂ ಓದಿ:ಭಾರತಕ್ಕೆ ಲಿಯೋನೆಲ್ ಮೆಸ್ಸಿ ಭೇಟಿ.. ‘ಸೆಲ್ಫಿ ವಿತ್ ಮೆಸ್ಸಿ’ಗೆ 9.95 ಲಕ್ಷ ರೂಪಾಯಿ ನಿಗಧಿ
ಸಂಸ್ಕೃತ ತಾಳೆಗರಿ ಹಸ್ತಪ್ರತಿಗಳ ಒಂದು ಪ್ರಮುಖ ಸಂಗ್ರಹವನ್ನು ವಿದ್ವಾಂಸ ಜೆ.ಸಿ.ಆರ್. ವೂಲ್ನರ್ 1930 ರ ದಶಕದಲ್ಲಿ ಪಟ್ಟಿ ಮಾಡಿದ್ದಾರೆ. 1947 ರಿಂದ ಯಾವುದೇ ಪಾಕಿಸ್ತಾನಿ ವಿದ್ವಾಂಸರು ಈ ಸಂಗ್ರಹದಲ್ಲಿ ತೊಡಗಿಸಿಕೊಂಡಿಲ್ಲ. ವಿದೇಶಿ ಸಂಶೋಧಕರು ಮಾತ್ರ ಇದನ್ನು ಬಳಸುತ್ತಾರೆ. ಸ್ಥಳೀಯ ವಿದ್ವಾಂಸರಿಗೆ ತರಬೇತಿ ನೀಡುವುದರಿಂದ ಇದನ್ನು ಬದಲಾಯಿಸಬಹುದು ಎಂದು ಅವರು ಹೇಳಿದ್ದಾರೆ.
ಮಹಾಭಾರತ ಮತ್ತು ಭಗವದ್ಗೀತೆಯ ಕುರಿತು ಮುಂಬರುವ ಕೋರ್ಸ್‌ಗಳ ಮೂಲಕ ವಿಶ್ವವಿದ್ಯಾಲಯವು ವಿಸ್ತರಿಸಲು ಯೋಜಿಸಿದೆ ಎಂದು ಡಾ. ಖಾಸ್ಮಿ ತಿಳಿಸಿದ್ದಾರೆ. 10-15 ವರ್ಷಗಳಲ್ಲಿ ಪಾಕಿಸ್ತಾನ ಮೂಲದ ಗೀತಾ ಮತ್ತು ಮಹಾಭಾರತದ ವಿದ್ವಾಂಸರನ್ನು ನಾವು ನೋಡಬಹುದು ಎಂದಿದ್ದಾರೆ. ಪಾಕಿಸ್ತಾನದಲ್ಲಿ ಸಂಸ್ಕೃತದ ಪುನರುಜ್ಜೀವನವಾಗುತ್ತಿದ್ದು, ಭಾಷೆಯ ಕುರಿತು ಮೂರು ತಿಂಗಳ ಕಾರ್ಯಾಗಾರಕ್ಕೆ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಂದ ಅಗಾದ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ.
ಇದನ್ನೂ ಓದಿ:ಹೆದ್ದಾರಿಯನ್ನೇ ಕಿಚನ್ ಮಾಡಿಕೊಂಡ ದಂಪತಿ.. VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us