/newsfirstlive-kannada/media/media_files/2025/08/19/kiccha-sudeep-vishnuvardhan-2025-08-19-07-00-13.jpg)
ನಟ ವಿಷ್ಣುವರ್ಧನ್ ಸ್ಮಾರಕ ನೆಲಸಮ.. ಇದು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಆಘಾತ ತಂದ ವಿಚಾರ.. ಹಲವು ಸ್ಯಾಂಡಲ್ವುಡ್ ನಟ-ನಟಿಯರೂ ಈ ಘಟನೆ ಬೇಸರ ವ್ಯಕ್ತಪಡಿಸಿದ್ದರು. ಈ ಮಧ್ಯೆ ವಿಷ್ಣು ಫ್ಯಾನ್ಸ್ ಹಾಗೂ ಕುಟುಂಬದ ಮಧ್ಯೆ ಎಲ್ಲವೂ ಸರಿ ಇಲ್ಲ ಅನ್ನೋ ಮಾತು ಮತ್ತಷ್ಟು ಗೊಂದಲ ಸೃಷ್ಟಿಸಿತ್ತು. ಆದ್ರೀಗ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಗುಡ್ನ್ಯೂಸ್ ಸಿಕ್ಕಿದೆ. ಈ ಸುದ್ದಿ ಸಿಕ್ಕಿದ್ದು ಕಿಚ್ಚ ಸುದೀಪ್ ಕಡೆಯಿಂದ.
ಆಗಸ್ಟ್ 8.. ಇಡೀ ರಾಜ್ಯ ವರಮಹಾಲಕ್ಷ್ಮೀ ಪೂಜೆಯ ಸಂಭ್ರಮದಲ್ಲಿತ್ತು. ಈ ಮಧ್ಯೆಯೇ ಒಂದು ಘಟನೆ ಬಿರುಗಾಳಿಯಂತೆ ಸದ್ದು ಮಾಡ್ತು.. ಅದೇ, ವಿಷ್ಣುವರ್ಧನ್ ಸ್ಮಾರಕ ನೆಲಸಮ. ರಾತ್ರೋ ರಾತ್ರಿ ವಿಷ್ಣು ಸ್ಮಾರಕಾನೇ ನೆಲಸಮ ಮಾಡ್ಬಿಟ್ಟಿದ್ರು ಕಿಡಿಗೇಡಿಗಳು. ಇದು ವಿಷ್ಣು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಕಣ್ಣೀರು, ಆಕ್ರೋಶ, ಗಲಾಟೆ, ಉದ್ವೇಗಕ್ಕೂ ಈ ಘಟನೆ ಕಾರಣವಾಗಿತ್ತು. ಈ ನಡುವೆ ಇದೀಗ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಗುಡ್ನ್ಯೂಸ್ ಸಿಕ್ಕಿದೆ.
ಇದನ್ನೂ ಓದಿ: ದೇಗುಲ ಒಡೆದಾಗ ಎಷ್ಟು ನೋವಾಗುತ್ತೋ ಅಷ್ಟೇ ಸಂಕಟ ಆಗಿದೆ - ಕಿಚ್ಚ ಸುದೀಪ್ ಭಾವುಕ
25 ಅಡಿ ಪುತ್ಥಳಿ ನಿರ್ಮಾಣ.. ದಾದಾ ಜನ್ಮದಿನದಂದೇ ಅಡಿಗಲ್ಲು
ವಿಷ್ಣುವರ್ಧನ್ ಸ್ಮಾರಕ ಕೆಡವಿದಾಗ ಬೇಸರಪಟ್ಟವರಲ್ಲಿ ಸುದೀಪ್ ಕೂಡ ಒಬ್ಬರು. ಅಂದು ಮಾತನಾಡಿದ್ದ ಸುದೀಪ್ ಮುಂದೆ ನಾವೇನ್ ಮಾಡ್ಬೇಕು ಗೊತ್ತಿದೆ.. ಮಾಡೇ ಮಾಡ್ತೀವಿ ಅಂತ ಕಿಡಿನುಡಿ ಸಿಡಿಸಿದ್ದರು. ಇದು ಕೇವಲ, ಆವೇಶದಲ್ಲಿನ ಆಕ್ರೋಶದ ಮಾತಾಗಿರಲಿಲ್ಲ.. ಬದಲಾಗಿ ಸುದೀಪ್ ಮಾಡಿದ ಸಂಕಲ್ಪವಾಗಿತ್ತು. ತಮ್ಮ ನೆಚ್ಚಿನ ನಟ ವಿಷ್ಣುವರ್ಧನ್‌ಗಾಗಿ ಏನಾದ್ರೂ ಮಾಡಲೇಬೇಕು ಅಂತಾ ಪಣ ತೊಟ್ಟಿದ್ದ ಸುದೀಪ್, ಆ ನಿಟ್ಟಿನಲ್ಲಿ ಇಡೀ ಕರುನಾಡು ಮೆಚ್ಚುವಂತ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಡಾ.ವಿಷ್ಣುವರ್ಧನ್ ವಿರೋಧಿಗಳಿಗೆ ಬಸವಣ್ಣನವರ ವಚನದ ಮೂಲಕ ಉಪೇಂದ್ರ ತಿರುಗೇಟು
ವಿಷ್ಣುದಾದಗಾಗಿ ಕಿಚ್ಚನ ‘ಅಭಿಮಾನ’!
- ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಪುಣ್ಯಭೂಮಿ ನೆಲಸಮ
- ವಿಷ್ಣುದಾದಾ ದರ್ಶನ ಕೇಂದ್ರ ಸ್ಥಾಪಿಸೋದಕ್ಕೆ ಅಭಿಮಾನಿಗಳು ತಯಾರಿ
- ಕೆಂಗೇರಿ ಬಳಿ ಅರ್ಧ ಎಕರೆ ಭೂಮಿ ಖರೀದಿಸಿರೋ ನಟ ಕಿಚ್ಚ ಸುದೀಪ್
- ಈ ಜಾಗದಲ್ಲಿ 25 ಅಡಿ ಎತ್ತರದ ವಿಷ್ಣು ಪುತ್ಥಳಿ ನಿರ್ಮಾಣಕ್ಕೂ ಪ್ಲಾನ್
- ವಿಷ್ಣು ಪುತ್ಥಳಿಯ ಜೊತೆಗೆ ದರ್ಶನ ಕೇಂದ್ರ ನಿರ್ಮಾಣ ಮಾಡಲಾಗುತ್ತೆ
- ಸೆಪ್ಟೆಂಬರ್ 18ರ ವಿಷ್ಣುವರ್ಧನ್ ಜನ್ಮ ದಿನಕ್ಕೆ ಅಡಿಗಲ್ಲು ಹಾಕಲು ಪ್ಲಾನ್
- ಸೆ.2ಕ್ಕೆ ಸುದೀಪ್ ಹುಟ್ಟುಹಬ್ಬದಂದು ಸ್ಮಾರಕದ ಬ್ಲ್ಯೂಪ್ರಿಂಟ್ ಅನಾವರಣ
- ಸೆಪ್ಟೆಂಬರ್ 18ರಂದು ವಿಷ್ಣುದಾದ ಜನ್ಮದಿನದಂದು ಸ್ಮಾರಕಕ್ಕೆ ಅಡಿಗಲ್ಲು
ಒಟ್ಟಿನಲ್ಲಿ ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಸಾಹಸ ಸಿಂಹನ 75 ನೇ ವರ್ಷದ ಜನ್ಮ ದಿನಾಚರಣೆ ಹಿನ್ನೆಲೆ ಅಮೃತ ಮಹೋತ್ಸವ ಮಾಡಲಾಗ್ತಿದ್ದು, ಈ ಕಾರ್ಯಕ್ರಮದಲ್ಲಿ ಇಡೀ ಚಿತ್ರರಂಗ ಭಾಗಿಯಾಗಲಿದೆ. ಇದೀಗ ದರ್ಶನ ಕೇಂದ್ರ ನಿರ್ಮಾಣಕ್ಕೆ ತಯಾರಿ ಶುರುವಾಗಿದೆ. ಈ ಎಲ್ಲಾ ಬೆಳವಣಿಗೆ ವಿಷ್ಣುದಾದ ಅಭಿಮಾನಿಗಳಿಗೆ ಒಂದು ಸಿಕ್ಕಿ ಸುದ್ದಿ ಸಿಕ್ಕಂತಾಗಿದೆ.
ಇದನ್ನೂ ಓದಿ:ಡಾ.ವಿಷ್ಣುವರ್ಧನ್ ಅಸ್ಥಿ ಇರೋದು ಎಲ್ಲಿ?, ಆ ಒಂದು ಸ್ಥಳದಲ್ಲಿ ಮಾತ್ರ ಇದೆ- ಅನಿರುದ್ಧ ಜಟ್ಕರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ