/newsfirstlive-kannada/media/media_files/2025/11/05/kiran-raj-jockey-42-2-2025-11-05-12-16-15.jpg)
ಕನ್ನಡ ಕಿರುತೆರೆಯ ಸ್ಟಾರ್ ನಟ ಕಿರಣ್ ರಾಜ್, ಸಿನಿಮಾ ರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ರು. ಆದ್ರೆ ಮೊದಲ ಎರಡು ಸಿನಿಮಾಗಳು ನಿರೀಕ್ಷೆಯಂತೆ ದೊಡ್ಡ ಗೆಲುವು ಸಿಕ್ಕಿರಲಿಲ್ಲ. ಇದೀಗ ‘ಜಾಕಿ 42’ ಸಿನಿಮಾ ಮೂಲಕ ಗೆಲ್ಲುವ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ವಿರಾಟ್​ ಕೊಹ್ಲಿ ಅಂದ್ರೆ ಎಲ್ಲರಿಗೂ ಯಾಕಿಷ್ಟ..? Birthday special!
/filters:format(webp)/newsfirstlive-kannada/media/media_files/2025/11/05/kiran-raj-jockey-42-1-2025-11-05-12-13-37.jpg)
ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ತುಂಬಾ ಇಂಟರೆಸ್ಟಿಂಗ್ ಆಗಿದೆ. ಕುದುರೆ ರೇಸ್ ಸುತ್ತಲ್ಲೂ ಇರೋ ಸಿನಿಮಾವಾಗಿದ್ದು, ಕಿರಣ್ ವಿಭಿನ್ನ. ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.
ಗುರುತೇಜ್ ಶೆಟ್ಟಿ, ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ವಿನೀದ್ ಯಜಮಾನ್ಯ ಸಂಗೀತ ನೀಡಿದ್ದು ರಾಗವೇಂದ್ರ ಬಿ ಕೋಲಾರ ಛಾಯಾಗ್ರಹಣ ಉಮೇಶ್ ಆರ್ ಬಿ ಸಂಕಲ ಸತೀಶ್ ಕಲಾ ನಿರ್ದೇಶನವಿದೆ, ಕಾಂತಾರ ಕ್ಯಾತಿಯ ದೀಪಕ್ ರೈ, ರಾಜೇಂದ್ರ ಕಾರಂತ್, ಮಧುಸೂದನ್, ಶಾಂತಲಾ ಕಮತ್, ಬಾಲರಾಜ್ ವಾಡಿ, ಯಶ್ ಶೆಟ್ಟಿ, ಚೇತನ್ ರೈ ಮಾಣಿ ಮುಂತಾದ ಹೆಸರಾಂತ ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ:
/filters:format(webp)/newsfirstlive-kannada/media/media_files/2025/11/05/kiran-raj-jockey-42-2025-11-05-12-17-29.jpg)
ಹಾರ್ಸ್ ರೇಸ್ ಸುತ್ತ ನಡೆಯುವ ಕಥೆಯಾದರೂ ಇಲ್ಲಿ ಫ್ಯಾಮಿಲಿ, ಲೈವ್, ಆಕ್ಷನ್ ಎಲ್ಲವೂ ಒಳಗೊಂಡಿದೆ. ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ನಟಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us