/newsfirstlive-kannada/media/media_files/2025/08/25/shivanna-2025-08-25-16-12-52.jpg)
ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ ಗಂಭೀರ ಆರೋಪಗಳನ್ನು ಹೊತ್ತು ಜೈಲುವಾಸ ಅನುಭವಿಸಿದ್ದ ಮಡೆನೂರು ಮನು ಶಿವಣ್ಣನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ:ಶಾಲೆಯ ಹೋಮ್ ವರ್ಕ್ ಒತ್ತಡ.. ಜೀವ ಕಳೆದುಕೊಂಡ SSLC ವಿದ್ಯಾರ್ಥಿನಿ, ಅನುಮಾನ
ಹೌದು, ಮಡೆನೂರು ಮನು ಬಂಧನದ ಬಳಿಕ ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನಲಾಗಿರುವ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಮನು ಶಿವಣ್ಣ ಮನೆ ಬಳಿ ಹೋಗಿದ್ದರು. ಆದ್ರೆ ಶಿವಣ್ಣ ಅವರನ್ನು ಭೇಟಿ ಆಗೋದಕ್ಕೆ ಆಗಿರಲಿಲ್ಲ.
ಆದ್ರೆ, ಇಂದು ಕಂಠೀರವ ಸ್ಟುಡಿಯೋಗೆ ಶಿವಣ್ಣ ಬರುವ ಸುದ್ದಿ ಕೇಳಿ ಅಲ್ಲಿಗೆ ಮಡೆನೂರು ಮನು ಹೋಗಿದ್ದಾರೆ. ಕಾರಿನಿಂದ ಇಳಿಯುತ್ತಿದ್ದಂತೆ ಶಿವಣ್ಣನ ಕಾಲಿಗೆ ಬಿದ್ದು ಮಡೆನೂರು ಮನು ಕ್ಷಮೆ ಕೇಳಿದ್ದಾರೆ. ಆಗ ಶಿವಣ್ಣನ ಬಳಿ ಮತ್ತೆ ನಾವು ಕುಲದಲ್ಲಿ ಕೀಳ್ಯಾವುದೋ ಸಿನಿಮಾವನ್ನು ರೀ ರಿಲೀಸ್ ಮಾಡಬೇಕು ಅಂತ ಅಂದುಕೊಂಡಿದ್ದೀವಿ. ನೀವು ಒಪ್ಪಿಗೆ ಕೊಟ್ಟರೆ ಸಿನಿಮಾ ರೀ ರಿಲೀಸ್ ಮಾಡುತ್ತೇವೆ ಅಣ್ಣ ಅಂತ ಕೇಳಿಕೊಂಡಿದ್ದಾರೆ. ಆಗ ಶಿವಣ್ಣ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರೀ ರಿಲೀಸ್ ಮಾಡಿ ಅಂತ ಒಪ್ಪಿಗೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ