ರಾಜಮೌಳಿ ಬಿಗ್ ಪ್ಲಾನ್; ಮಹೇಶ್ ಬಾಬು ಸಿನಿಮಾ ಪ್ಯಾನ್ ಇಂಡಿಯಾವಲ್ಲ, ಪ್ಯಾನ್ ವರ್ಲ್ಡ್ ಮೂವಿ

ಮಹೇಶ್ ಬಾಬು ಹಾಗೂ ಸ್ಟಾರ್ ಡೈರೆಕ್ಟರ್ ರಾಜಮೌಳಿ ಕಾಂಬೋದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಬಗ್ಗೆ ನಿರೀಕ್ಷೆ ದೊಡ್ಡ ಮಟ್ಟದಲ್ಲಿವೆ. ಈ ಮೂವಿಯಿಂದ ಭಾರತದ ಸಿನಿಮಾ ರಂಗವನ್ನ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಜಕ್ಕಣ್ಣನ ಬಿಗ್ ಪ್ಲಾನ್ ಆಗಿದೆ.

author-image
Bhimappa
MAHESH_BABU_RAJAMOULI
Advertisment

ಟಾಲಿವುಡ್​ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಸ್ಟಾರ್ ಡೈರೆಕ್ಟರ್ ರಾಜಮೌಳಿ ಕಾಂಬೋದಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಬಗ್ಗೆ ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿವೆ. ಈ ಮೂವಿಯಿಂದ ಭಾರತದ ಸಿನಿಮಾ ರಂಗವನ್ನ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಜಕ್ಕಣ್ಣನ ಬಿಗ್ ಪ್ಲಾನ್ ಆಗಿದೆ. ಇದರ ಮಧ್ಯೆ ಈ ಸಿನಿಮಾ ಎಷ್ಟು ದೇಶಗಳಲ್ಲಿ ರಿಲೀಸ್​ ಆಗಲಿದೆ ಎನ್ನುವುದು ಕೇಳಿದರೆ ಶಾಕ್ ಆಗೋದು ಗ್ಯಾರಂಟಿ. 

ದಕ್ಷಿಣದ ಸ್ಟಾರ್ ನಿರ್ದೇಶಕರು ಆಗಿರುವ ರಾಜಮೌಳಿ ಅವರು ಮಹೇಶ್ ಬಾಬು ಜೊತೆ ಬಿಗ್ ಬಜೆಟ್  ಸಿನಿಮಾ ಮಾಡುತ್ತಿದ್ದಾರೆ. ಈ ಮೂವಿಯ ಶೂಟಿಂಗ್ ಕೂಡ ಶರವೇಗದಲ್ಲಿ ಸಾಗಿದೆ. ಮಹೇಶ್ ಬಾಬು ಅಭಿಮಾನಿಗಳ ಕುತೂಹಲ ಕೂಡ ಹೆಚ್ಚಿದೆ. ಏಕೆಂದರೆ ಅಂದಾಜು 1200 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ರಾಜಸ್ತಾನ್ ಹಾಗೂ ಹೈದ್ರಾಬಾದ್​ನಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗಿದೆ. 

ಇದನ್ನೂ ಓದಿ: ಕಿರುತೆರೆ ನಟ ಆಶಿಶ್​ನನ್ನು ಅರೆಸ್ಟ್ ಮಾಡಿದ ಪೊಲೀಸರು.. ಕಾರಣವೇನು?

ರಾಜಮೌಳಿ ಮತ್ತೊಂದು ದೃಶ್ಯ ಕಾವ್ಯಕ್ಕೆ ಭರ್ಜರಿ ಸೆಟ್; ಮಹೇಶ್​ ಬಾಬು ಸಿನಿಮಾದ ಆ ಸೀಕ್ರೆಟ್ ಲಿಂಕ್​!

ಸದ್ಯ ಈ ಮೂವಿಯ ಶೂಟಿಂಗ್ ಕೀನ್ಯಾಯದಲ್ಲಿ ನಡೆಯುತ್ತಿದ್ದು ನಿರ್ದೇಶಕ ರಾಜಮೌಳಿ ಅವರು ಕೀನ್ಯಾ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಅಲ್ಲಿ ದಟ್ಟ ಅರಣ್ಯದ ನಡುವೆ ಮಹೇಶ್ ಬಾಬು ಸೇರಿದಂತೆ ಸಿನಿಮಾದ ಇತರೆ ನಟರು ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ಕೀನ್ಯಾದಲ್ಲೂ ಶೂಟಿಂಗ್ ಮುಗಿಯುವ ಹಂತಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. 

ಇನ್ನು ನಿರ್ದೇಶಕ ರಾಜಮೌಳಿ ಅವರು ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ಅಲ್ಲದೇ, ಪ್ಯಾನ್ ವರ್ಲ್ಡ್​​​ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಯೋಜನೆಯಲ್ಲಿದ್ದಾರೆ. ಭಾರತೀಯ ಭಾಷೆಗಳ ಜೊತೆಗೆ ಇಂಗ್ಲಿಷ್​ನಲ್ಲೂ ಈ ಸಿನಿಮಾ ತೆರೆಗೆ ಬರಲಿದೆ. ಹೀಗಾಗಿ ವಿಶ್ವದ್ಯಾಂತ ಒಟ್ಟು 120ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಒಂದೇ ಬಾರಿಗಿ ಈ ಸಿನಿಮಾವನ್ನು ರಿಲೀಸ್ ಮಾಡುವ ಪ್ಲಾನ್​ನಲ್ಲಿದ್ದಾರೆ ಎನ್ನಲಾಗುತ್ತಿದೆ.    

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SS Rajamouli
Advertisment