ಕಿರುತೆರೆ ನಟ ಆಶಿಶ್​ನನ್ನು ಅರೆಸ್ಟ್ ಮಾಡಿದ ಪೊಲೀಸರು.. ಕಾರಣವೇನು?

ಆಶಿಶ್​ ಕಪೂರ್ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದ್ದ ಮಹಿಳೆಯನ್ನು ಪಾರ್ಟಿಗೆ ಅಹ್ವಾನ ಮಾಡಿದ್ದನು. ಸ್ನೇಹಿತನ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಸ್ನೇಹಿತ, ಆತನ ಪತ್ನಿ ಹಾಗೂ ಇಬ್ಬರು ಅಪರಿಚಿತರು ಭಾಗವಹಿಸಿದ್ದರು.

author-image
Bhimappa
Ashish_Kapoor
Advertisment

ನವದೆಹಲಿ: ಕಿರುತೆರೆಯ ನಟ ಆಶಿಶ್​ ಕಪೂರ್​ನನ್ನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದ್ದ ಮಹಿಳೆಯೊಬ್ಬರ ಮೇಲೆ ಅ*ಚಾರ ಎಸಗಿದ ಆರೋಪದ ಮೇಲೆ ನಟನನ್ನು ಪೊಲೀಸರು ಬಂಧಿಸಿದ್ದಾರೆ. 

ಆಶಿಶ್​ ಕಪೂರ್ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದ್ದ ಮಹಿಳೆಯನ್ನು ಪಾರ್ಟಿಗೆ ಅಹ್ವಾನ ಮಾಡಿದ್ದನು. ಮಹಾರಾಷ್ಟ್ರದ ಪುಣೆಯ ಸ್ನೇಹಿತನ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಸ್ನೇಹಿತ, ಆತನ ಪತ್ನಿ ಹಾಗೂ ಇಬ್ಬರು ಅಪರಿಚಿತರು ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸಿದ್ದ ಮಹಿಳೆ ವಾಶ್​ ರೂಮ್​ಗೆ ಹೋಗಿದ್ದ ವೇಳೆ ಆಶಿಶ್​ ಫಾಲೋ ಮಾಡಿ ಅ*ಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ. 

ಇದನ್ನೂ ಓದಿ:ಸೌಜನ್ಯ ಕೇಸ್; ಕಾಂಗ್ರೆಸ್-ಬಿಜೆಪಿ ರಾಜಕೀಯ.. BY ವಿಜಯೇಂದ್ರ ಮಾತಿಗೆ ಸಿಎಂ ಸಿದ್ದರಾಮಯ್ಯ ಕೆಂಡ!

Ashish_Kapoor_1

ಪಾರ್ಟಿಯಲ್ಲಿ ಭಾಗಿಯಾಗಿದ್ದ ಇತರರು ಏನು ಮಾಡಿಲ್ಲ. ಆಶಿಶ್​ ಮಾತ್ರ ಹೀಗೆ ಮಾಡಿದ್ದಾನೆ. ಈ ಬಗ್ಗೆ ವಿಡಿಯೋ ರೆಕಾರ್ಡ್​ ಕೂಡ ಇದೆ. ಆದರೆ ಪೊಲೀಸರು ವಿಡಿಯೋವನ್ನು ವಶಕ್ಕೆ ಪಡೆದುಕೊಂಡಿಲ್ಲ. ವಾಶ್​ ರೂಮ್​ನಿಂದ ಹೊರ ಬಂದ ಮೇಲೆ ಸ್ನೇಹಿತ, ಆತನ ಪತ್ನಿ ನನ್ನನ್ನು ಹೊಡೆದಿದ್ದಾರೆ ಎಂದು ಮಹಿಳೆ ದೂರಿದ್ದಾಳೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

serial actor
Advertisment