/newsfirstlive-kannada/media/media_files/2025/09/04/by_vijayendra_cm_siddu-2025-09-04-08-36-20.jpg)
ಧರ್ಮಸ್ಥಳದ ನೇತ್ರಾವತಿ ತೀರದಲ್ಲಿ ಬುರುಡೆ ಮಿಸ್ಟ್ರಿ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಪಾತ್ರಧಾರಿಗಳು, ಸೂತ್ರಧಾರಿಗಳ ಬಣ್ಣ ಕಳಚಿ ಬೀಳುತ್ತಿದೆ. ಎಸ್ಐಟಿ ತನಿಖೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು ಮಹತ್ವದ ಮಾಹಿತಿಗಳು ಸಿಗುತ್ತಿವೆ. ಇದರ ಮಧ್ಯೆ ಸೌಜನ್ಯ ಪ್ರಕರಣದಲ್ಲಿ ರಾಜಕೀಯ ಶುರುವಾದಂತೆ ಕಾಣ್ತಿದೆ. ಇದೇ ವಿಚಾರಕ್ಕೆ ರಾಜಕೀಯವೂ ಜೋರಾಗಿದೆ.
ಬುರುಡೆ ರಹಸ್ಯ.. ಈ ಕಥೆಯ ದಿಗ್ದರ್ಶಕರು ಸೂತ್ರಧಾರಿಗಳು. ಷಡ್ಯಂತ್ರಿಗಳು ಹೆಣೆದ ಸ್ಟೋರಿ ರಣರೋಚಕ. ಸದ್ಯ ಪ್ರಕರಣ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು ಷಡ್ಯಂತ್ರಿಗಳ ಬಣ್ಣ ಬಯಲಾಗಿದೆ. ಇತ್ತ ಮಂಜುನಾಥನ ಪ್ರಸಾದ ತಿಂದ ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಹೋರಾಟಕ್ಕೆ ನಿಂತಿವೆ. ಇದರ ಮಧ್ಯೆ ಸೌಜನ್ಯ ಪ್ರಕರಣದ ವಿಚಾರದಲ್ಲೂ ರಾಜಕೀಯ ಶುರುವಾಗಿದೆ.
ಸರ್ಕಾರವನ್ನ ಧರ್ಮ ಸಂಕಟಕ್ಕೆ ಸಿಲುಕಿಸುವ ಪ್ರಯತ್ನ
ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲಾಗ್ತಿದೆ ಅಂತ ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಮಾಡಿದ್ರು. ಬುರುಡೆ ಗ್ಯಾಂಗ್ ವಿರುದ್ಧ ಹೋರಾಟ ಮಾಡುತ್ತಾ ಸರ್ಕಾರವನ್ನ ಧರ್ಮ ಸಂಕಟಕ್ಕೆ ಸಿಲುಕಿಸುವ ಪ್ರಯತ್ನ ಮಾಡಿದ್ರು. ಇದಷ್ಟೇ ಅಲ್ಲ, ಸೌಜನ್ಯ ಮನೆಗೂ ಭೇಟಿ ನೀಡಿ ಹೊಸ ಚರ್ಚೆಗೆ ಕಾರಣವಾಗಿದ್ರು. ಇದಷ್ಟೇ ಅಲ್ಲ, ಸೌಜನ್ಯ ಕೇಸ್ ಮರು ತನಿಖೆ ನಡೆದ್ರೆ ಸುಪ್ರೀಂಕೋರ್ಟ್‌ನ ಕಾನೂನು ಹೋರಾಟದ ವೆಚ್ಚವನ್ನ ಬಿಜೆಪಿಯೇ ಬರಿಸುವುದಾಗಿ ಬಿ.ವೈ ವಿಜಯೇಂದ್ರ ಹೇಳಿಕೆ ಕೊಟ್ಟಿದ್ರು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷರ ಮಾತಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. CBI ಯಾರ ಬಳಿ ಇದೆ, ಯಾರ ಅವಧಿಯಲ್ಲಿ ಕೊಲೆ ಆಗಿದ್ದು, ಈಗ ಸುಪ್ರೀಂ ಕೋರ್ಟ್ ವೆಚ್ಚ ಬರಿಸ್ತೀನಿ ಅಂದ್ರೆ ಹೇಗೆ.? ಅಂತ ಪ್ರಶ್ನಿಸಿದ್ದಾರೆ.
ಸಿಬಿಐ ಯಾರ ಅಧಿನದಲ್ಲಿ ಇರೋದು?. ಈಗ ಸುಪ್ರೀಂ ಕೋರ್ಟ್ಗೆ ಹೋಗಿ ಖರ್ಚು ಕೊಡುತ್ತೇವೆ ಎಂದರೆ ಹೇಗೆ?. ಸೌಜನ್ಯ ಅವರ ತಾಯಿ ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ಧರ್ಮಸ್ಥಳ ಚಲೋ ಮಾಡಿದರು ಅಲ್ವಾ, ಅದು ಬಿಜೆಪಿ, ಜೆಡಿಎಸ್ ರಾಜಕೀಯ ಚಲೋ.
ಸಿದ್ದರಾಮಯ್ಯ, ಮುಖ್ಯಮಂತ್ರಿ
/filters:format(webp)/newsfirstlive-kannada/media/media_files/2025/08/08/cm-siddaramaiah-2025-08-08-16-35-30.jpg)
ಸೌಜನ್ಯ ಕುಟುಂಬಕ್ಕೆ ನಿಖಿಲ್ ಕುಮಾರಸ್ವಾಮಿ ಬೆಂಬಲ!
ಸೌಜನ್ಯ ಪ್ರಕರಣದ ಬಗ್ಗೆ ಈಗ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಧ್ವನಿ ಎತ್ತಿದ್ದಾರೆ. ಸೌಜನ್ಯ ಕುಟುಂಬಕ್ಕೆ ಬೆಂಬಲ ಸೂಚಿಸಿ ನಿಖಿಲ್ ಕುಮಾರಸ್ವಾಮಿ ಬಹಿರಂಗ ಪತ್ರ ಬರೆದಿದ್ದಾರೆ.
‘ಜಸ್ಟೀಸ್ ಫಾರ್ ಸೌಜನ್ಯ’
ಕು.ಸೌಜನ್ಯ ಗೌಡಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ,ಜವಾಬ್ದಾರಿಯೂ ಹೌದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷದಿಂದಾಗಲಿ, ಸಿದ್ಧಾಂತದಿಂದಾಗಲಿ, ಬೀದಿ ಹೋರಾಟಗಳಿಂದಾಗಲಿ, ಡಿಬೆಟ್ ಗಳಿಂದಾಗಲಿ ನ್ಯಾಯ ಸಿಗಲ್ಲ. ಈ ದೇಶದ ನ್ಯಾಯಾಂಗದಿಂದಲೇ ಅಪರಾಧಿಯನ್ನು ಶಿಕ್ಷಿಸಬೇಕು ಅವರ ತಾಯಿ ಅಥವಾ ಕುಟುಂಬದ ಸದಸ್ಯರು ಸುಪ್ರೀಂ ಕೋರ್ಟ್ನಲ್ಲಿ ಮರು ತನಿಖೆಗಾಗಿ ಅರ್ಜಿ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ಈ ತನಿಖೆಯನ್ನು ಯಾವುದಾದರೂ ತನಿಖಾ ಸಂಸ್ಥೆ, ಅಥವಾ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ. ಸೌಜನ್ಯ ತಾಯಿ ಅಥವಾ ಅವರ ಕುಟುಂಬ ವರ್ಗದವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ನಿರೀಕ್ಷೆಯಲ್ಲಿ ನೀವೆಲ್ಲರೂ ಇದ್ದಂತೆ ನಾನೂ ಕೂಡ ಇದ್ದೇನೆ.
ನಿಖಿಲ್, ಜೆಡಿಎಸ್ ಯುವ ನಾಯಕ
ಇದನ್ನೂ ಓದಿ: ದಸರಾ, ದೀಪಾವಳಿಗೆ ಮೋದಿ ಸರ್ಕಾರದಿಂದ ಗುಡ್ನ್ಯೂಸ್.. ನವರಾತ್ರಿ ಮೊದಲ ದಿನದಿಂದ ಜಾರಿ
ಧರ್ಮಸ್ಥಳ ರಾಜಕೀಯ ವಸ್ತು ಅಲ್ಲ.. ಡಿ.ಕೆ. ಸುರೇಶ್ ಕಿಡಿ
ಧರ್ಮಸ್ಥಳದ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಮಾಡ್ತಿವೆ ಅಂತ ಕಾಂಗ್ರೆಸ್ ನಾಯಕರು ಕಿಡಿಕಾರುತ್ತಲೇ ಇದ್ದಾರೆ. ಇದೀಗ ಬಿಜೆಪಿ-ಜೆಡಿಎಸ್ ವಿರುದ್ಧ ಮಾಜಿ ಸಂಸದ ಡಿ.ಕೆ. ಸುರೇಶ್ ಮಾತಿನ ಮಳೆ ಸುರಿಸಿದ್ದಾರೆ. ಧರ್ಮಸ್ಥಳ ರಾಜಕೀಯ ವಸ್ತು ಅಲ್ಲ. ಅಲ್ಲಿ ರಾಜಕಾರಣ ಮಾಡಲು ಹೊರಟವರಿಗೆ ನಾಚಿಕೆ ಆಗಬೇಕು ಅಂತ ಗುಡುಗಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಸೂತ್ರಧಾರಿ, ಪಾತ್ರಧಾರಿಗಳ ಬಣ್ಣ ಬಯಲಾಗಿದ್ದು, ಎಸ್ಐಟಿ ತನಿಖೆ ಮುಂದುವರಿದಿದೆ. ಆದ್ರೆ, ಧರ್ಮ ಸಂಕಟ ತಂದವಱರು ಅನ್ನೋದನ್ನು ಕಾಲವೇ ನಿರ್ಧರಿಸಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ