Advertisment

ಮಲ್ಲಿಗೆ ಮುಡಿದಿದ್ದಕ್ಕೆ ಭಾರೀ ದಂಡ.. ಗಜ ಸಿನಿಮಾ ಖ್ಯಾತಿಯ ನವ್ಯಾ ನಾಯರ್​ಗೆ ಬಿಗ್ ಶಾಕ್!

ಜಾಜಿ ಮಲ್ಲಿಗೆಯಿಂದ ಕನ್ನಡದ ಗಜ ಸಿನಿಮಾ ಖ್ಯಾತಿಯ ನಟಿ ನವ್ಯಾ ನಾಯರ್​ಗೆ ಸಂಕಷ್ಟ ಎದುರಾಗಿದೆ. ಓಣಂ ಹಬ್ಬದ ಆಚರಣೆಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ನಟಿ ನವ್ಯಾ ನಾಯರ್ ಜಾಜಿ ಮಲ್ಲಿಗೆ ಮುಡಿದಿದ್ದ ಕಾರಣ ಭಾರೀ ದಂಡ ಕಟ್ಟಿದ್ದಾರೆ.

author-image
Bhimappa
DELHI_NAVYA
Advertisment

ಜಾಜಿ ಮಲ್ಲಿಗೆಯಿಂದ ಕನ್ನಡದ ಗಜ ಸಿನಿಮಾ ಖ್ಯಾತಿಯ ನಟಿ ನವ್ಯಾ ನಾಯರ್​ಗೆ ಸಂಕಷ್ಟ ಎದುರಾಗಿದೆ. ಓಣಂ ಹಬ್ಬದ ಆಚರಣೆಗಾಗಿ ಆಸ್ಟ್ರೇಲಿಯಾಗೆ ತೆರಳಿದ್ದ ನಟಿ ನವ್ಯಾ ನಾಯರ್ ಜಾಜಿ ಮಲ್ಲಿಗೆ ಮುಡಿದಿದ್ದ ಕಾರಣ 1.14 ಲಕ್ಷ ದಂಡ ಕಟ್ಟಿದ್ದಾರೆ. ಇದು ವಿಚಿತ್ರವಾದರೂ ಸತ್ಯ. 

Advertisment

ಇತ್ತೀಚೆಗೆ ಆಸ್ಟ್ರೇಲಿಯಾದ ಮೇಲ್ಬೋರ್ನ್​ನಲ್ಲಿ ವಿಕ್ಟೋರಿಯಾದ ಮಲಯಾಳಿ ಅಸೋಸಿಯೇಶನ್  ಓಣಂ ಹಬ್ಬ ಆಚರಣೆಯನ್ನ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ನಟಿ ನವ್ಯಾ ನಾಯರ್​ರವರನ್ನ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಹೀಗಾಗಿ ಕೇರಳದ ಕೊಚ್ಚಿಯಿಂದ ನವ್ಯಾ ನಾಯರ್​, ಆಸ್ಟ್ರೇಲಿಯಾಗೆ ವಿಮಾನ ಪ್ರಯಾಣ ಮಾಡಿದ್ದರು. 

ಇದನ್ನೂ ಓದಿ:ಮದ್ದೂರು ಗಣೇಶೋತ್ಸವ ಕೇಸ್; ಯುವತಿ ಮೇಲೆ ಪುರುಷ ಕಾನ್​​ಸ್ಟೆಬಲ್​ನಿಂದ​ ಲಾಠಿ ಚಾರ್ಜ್

DELHI_NAVYA_1

ವಿಮಾನ ಬೋರ್ಡಿಂಗ್ ಮೊದಲು ನವ್ಯಾ ನಾಯರ್ ತಂದೆ, ಓಣಂ ಹಬ್ಬದ ಆಚರಣೆಗೆ ತೆರಳುತ್ತಿರುವ ಕಾರಣ ಮಲ್ಲಿಗೆ ಮುಡಿದು ತೆರಳುವುದು ಅತ್ಯವಶ್ಯಕ ಎಂದು ಹೇಳಿದ್ದಾರೆ. ಜೊತೆಗೆ ಜಾಜಿ ಮಲ್ಲಿಗೆಯನ್ನು ನವ್ಯಾ ನಾಯರ್‌ಗೆ ನೀಡಿದ್ದಾರೆ. ಹೀಗಾಗಿ ನಟಿ ನವ್ಯಾ ಹೂವುಗಳನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು  ಮೆಲ್ಬೋರ್ನ್ ಏರ್‌ಪೋರ್ಟ್‌ಗೆ ಬಂದಿಳಿದ್ದಾರೆ.

Advertisment

ಆದ್ರೆ ಆಸ್ಟ್ರೇಲಿಯಾದ ನಿಯಾಮಾವಳಿಗಳ ಪ್ರಕಾರ, ಕೀಟಗಳು, ರೋಗಕಾರಕಗಳಂತಹ ಜೈವಿಕ ಅಪಾಯಗಳನ್ನು ತಡೆಯವ ಉದ್ದೇಶದಿಂದ ಯಾವುದೇ ಸಸ್ಯದ ಭಾಗವನ್ನಾದರೂ ವಿದೇಶಗಳಿಂದ ಆಸ್ಟ್ರೇಲಿಯಾಗೆ ತರುವ ಬಗ್ಗೆ ಮೊದಲೇ ಮಾಹಿತಿ ನೀಡಬೇಕು. ಆದರೆ ನಟಿ ನವ್ಯಾ ನಾಯರ್ ಯಾವುದೇ ಮಾಹಿತಿ ನೀಡದೆ ಮಲ್ಲಿಗೆ ಹೂವನ್ನ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಬರೋಬ್ಬರಿ 1.14 ಲಕ್ಷ ದಂಡ ಕಟ್ಟಿದ್ದಾರೆ. ಈ ಬಗ್ಗೆ ಸ್ವತಃ ನಟಿ ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada Movies
Advertisment
Advertisment
Advertisment