/newsfirstlive-kannada/media/media_files/2025/08/20/jogi_prem-2025-08-20-10-35-11.jpg)
ಬೆಂಗಳೂರು: ಖ್ಯಾತ ನಿರ್ದೇಶಕರಾದ ಜೋಗಿ ಪ್ರೇಮ್ ಅವರಿಗೆ ವ್ಯಕ್ತಿಯೊಬ್ಬರು ಎರಡು ಎಮ್ಮೆ ಕೊಡುವುದಾಗಿ ಹೇಳಿ 4.5 ಲಕ್ಷ ರೂಪಾಯಿ ವಂಚನೆ ಮಾಡಿದ್ದಾನೆ. ಸದ್ಯ ಈ ಸಂಬಂಧ ಪ್ರೇಮ್ ಅವರು ತಮ್ಮ ಮ್ಯಾನೇಜರ್ ಮೂಲಕ ದೂರು ದಾಖಲು ಮಾಡಿದ್ದಾರೆ.
ಪ್ರೇಮ್ ಅವರು ಹೈನುಗಾರಿಕೆ ಮಾಡಲು ಎರಡು ಎಮ್ಮೆ ಖರೀದಿ ಮಾಡಬೇಕು ಎಂದು ಗುಜರಾತ್ ಮೂಲದ ವನರಾಜ್ ಭಾಯ್ ಎನ್ನುವರ ಜೊತೆ ಮಾತನಾಡಿದ್ದರು. ಇದಕ್ಕಾಗಿ ಮುಂಡಗವಾಗಿ ವನರಾಜ್ಗೆ 25 ಸಾವಿರ ಹಣ ನೀಡಿದ್ದರು. ಇದಾದ ಮೇಲೆ ವಾಟ್ಸ್ಪ್ ಮೂಲಕ ಎರಡು ಎಮ್ಮೆಗಳ ವಿಡಿಯೋಗಳನ್ನು ವಂಚಕ ಕಳಿಸಿದ್ದನು.
ಇದನ್ನೂ ಓದಿ:ಮುಂಬೈನಲ್ಲಿ ಭೀಕರ ಮಳೆಗೆ ಜೀವ ಬಿಟ್ಟ 21 ಜನ.. ಶಾಲೆಗಳಿಗೆ ರಜೆ, ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್!
ವಿಡಿಯೋ ನೋಡಿದ ಮೇಲೆ ಎಮ್ಮೆಗಳು ಬರುತ್ತವೆ ಎಂದು ಪ್ರೇಮ್ ಅವರು 4.5 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಈ ಹಣವನ್ನು ಹಂತ ಹಂತವಾಗಿ ಆನ್ಲೈನ್ ಮೂಲಕ ಪಾವತಿ ಮಾಡಿದ್ದರು. ಆದರೆ ವಂಚಕನು ಎಮ್ಮೆಗಳನ್ನು ನೀಡದೇ, ಅತ್ತ ಹಣವನ್ನು ವಾಪಸ್ ನೀಡದೇ ಎಸ್ಕೇಪ್ ಆಗಿದ್ದಾನೆ. ಒಂದು ವಾರದಲ್ಲಿ ಎಮ್ಮೆ ತಂದು ಕೊಡುತ್ತೇನೆ ಎಂದವನು ದುಡ್ಡು ತೆಗೆದುಕೊಂಡು ಪರಾರಿಯಾಗಿದ್ದಾನೆ.
ಎಮ್ಮೆ ನೀಡದಿದ್ದಕ್ಕೆ ಪ್ರೇಮ್ ಅವರು, ತಮ್ಮ ಆಪ್ತರಲ್ಲಿ ಒಬ್ಬರನ್ನು ಆ ವ್ಯಕ್ತಿಯ ವಿಳಾಸದ ಪರಿಶೀಲನೆಗೆ ಕಳುಹಿಸಿದ್ದರು. ಆದರೆ ವಂಚಕ ತಪ್ಪು ವಿಳಾಸ ನೀಡಿರುವುದು ಗೊತ್ತಾಗಿದೆ. ಫೋನ್ ಮೂಲಕ ಸಂಪರ್ಕ ಮಾಡಬೇಕು ಎಂದರೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಹೀಗಾಗಿ ಎಮ್ಮೆಗಳನ್ನ ನೀಡದೆ ವಂಚಿಸಿದವನ ವಿರುದ್ಧ ಪ್ರೇಮ್ ಅವರು ತಮ್ಮ ಮ್ಯಾನೇಜರ್ ಕಮ್ ನಟ ದಶಾವರ ಚಂದ್ರು ಅವರ ಮೂಲಕ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ