/newsfirstlive-kannada/media/media_files/2025/08/20/mumbai_rain-1-2025-08-20-09-15-02.jpg)
ಮಳೆರಾಯನ ದರ್ಬಾರ್ಗೆ ಉತ್ತರ ಭಾರತದ ರಾಜ್ಯಗಳು ತಲ್ಲಣಿಸಿವೆ. ಮಹಾ ಮಳೆಗೆ ಮಹಾರಾಷ್ಟ್ರ ರಾಜಧಾನಿ ಮುಂಬೈ ಸೇಫ್ ಅಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಮಳೆ ವಿರಾಮ ನೀಡದ ಹೊರತು ನೆಮ್ಮದಿ ಇಲ್ಲ ಎನ್ನುವಂತಾಗಿದೆ.
ಗಾಜು ಕತ್ತರಿಸಿ.. ಪ್ರಯಾಣಿಕರ ರಕ್ಷಣೆ
ರೆಡ್ ಅಲರ್ಟ್ ಕಳೆದ ಮೂರು ದಿನಗಳಿಂದ ಮುಂಬೈನಲ್ಲಿ ಹವಾಮಾನ ಇಲಾಖೆ ಕೊಟ್ಟ ಸೂಚನೆ ಇದು. ಅವರು ಕೊಟ್ಟ ಸೂಚನೆಯಂತೆ ಮುಂಬೈನಲ್ಲಿ 100 ವರ್ಷಗಳ ಬಳಿಕ ಇಂತಹ ಮಳೆಯನ್ನ ಅಲ್ಲಿನ ಜನ ಕಂಡಿದ್ದಾರೆ. ಕೇವಲ 6 ಗಂಟೆಗಳಲ್ಲಿ 200 ಮಿಲಿ ಮೀಟರ್ನಷ್ಟು ಮಳೆ ಆಗಿದ್ದು, ಮುಂಬೈ ಮಹಾನಗರವೇ ಮುಳುಗೋಗಿದೆ. ಅಲ್ಲದೇ ಕಳೆದ ಐದು ದಿನಗಳಲ್ಲಿ ಈ ಭೀಕರ ವರುಣಾರ್ಭಟದಿಂದ ನಗರದಲ್ಲಿ 5 ಜನರು ಉಸಿರು ಚೆಲ್ಲಿದ್ದಾರೆ ಎಂದು ಹೇಳಲಾಗಿದೆ.
ರೈಲು ಸಂಚಾರವನ್ನೇ ನಂಬಿಕೊಂಡಿರೋ ಮುಂಬೈ ಜನಕ್ಕೆ ಮಳೆ ಶಾಕ್ ಕೊಟ್ಟಿದೆ. ನಿರಂತರ ಮಳೆಗೆ ಮುಂಬೈನಲ್ಲಿ ಕರೆಂಟ್ ವ್ಯತ್ಯಯವಾಗಿದೆ. ಕರೆಂಟ್ನಿಂದ ಚಲಿಸೋ ರೈಲುಗಳಲ್ಲಿ ಒಂದಾದ ಮೊನೋ ರೈಲ್ ಎರಡು ನಿಲ್ದಾಣಗಳ ನಡುವೆ ನಿಂತ ಪರಿಣಾಮ ಅದರಲ್ಲಿದ್ದ ಪ್ರಯಾಣಿಕರು ಪರದಾಡುವಂತೆ ಮಾಡಿತ್ತು. ಮುಂಬೈನ, ಮೈಸೂರು ಕಾಲೋನಿ ಮತ್ತು ಭಕ್ತಿ ಪಾರ್ಕ್ ನಿಲ್ದಾಣಗಳ ನಡುವೆ ಮೊನೋ ರೈಲು ಕೈ ಕೊಟ್ಟಿದೆ. ವಿದ್ಯುತ್ ಇಲ್ಲದ ಕಾರಣ ರೈಲಿನ ಒಳಗೆ ಎಸಿ ಕೂಡ ವರ್ಕ್ ಆಗದೆ ಪರದಾಡ ಬೇಕಾಯಿತು. ಇನ್ನು ವಿಚಾರ ಗೊತ್ತಾಗುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಸ್ಪಾಟ್ಗೆ ಎಂಟ್ರಿ ಕೊಟ್ರು. ಕ್ರೇನ್ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.
ಸುಮಾರು 800 ಪ್ರಯಾಣಿಕರ ರಕ್ಷಣೆ
ಅಗ್ನಿಶಾಮಕ ದಳ ಪೊಲೀಸರ ಮೂರು ಗಂಟೆಗಳ ನಿರಂತರ ಪ್ರಯತ್ನಕ್ಕೆ ಫಲ ಸಿಕ್ಕಿದೆ. ರೈಲಿನೊಳಗೆ ಸಿಲುಕಿದ್ದ ಸುಮಾರು ಸುಮಾರು 800 ಪ್ರಯಾಣೀಕರನ್ನ ರಕ್ಷಿಸಲಾಗಿದೆ. ಎಸಿ ವರ್ಕ್ ಆಗಿಲ್ಲ, ಜನದಟ್ಟಣೆ ಕಾರಣ ಕೆಲವರಿಗೆ ಹುಸಿರಾಟಕ್ಕೆ ತೊಂದರೆ ಆಗಿತ್ತು. ಸದ್ಯ ಎಲ್ಲರೂ ಸೇಫ್ ಆಗಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾಕಾರ ಮಳೆಗೆ ರೈಲು ಸಂಚಾರ, ವಿಮಾನ ಯಾನ ವ್ಯತ್ಯಯ
ಮುಂಬೈನಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುಂಬೈನ ಏರ್ಪೋಟ್ಗೂ ನೀರು ನುಗ್ಗಿದ್ದು, ವಿಮಾನಯಾನ ವ್ಯತ್ಯಯದಿಂದ ಪ್ರಯಾಣಿಕರು ಪರಿತಪ್ಪಿಸಿದ್ರು.. ಇನ್ನು ರೈಲು ಸಂಚಾರವನ್ನು ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ:KL ರಾಹುಲ್ ಅದ್ಭುತ ಬ್ಯಾಟಿಂಗ್.. ಆದರೂ ಏಷ್ಯಾ ಕಪ್ನಲ್ಲಿ ಕನ್ನಡಿಗನಿಗೆ ಅವಕಾಶವಿಲ್ಲ..!
ನಗರದಲ್ಲಿ ಸಂಚಾರ ಮಾಡುವುದು ಕಷ್ಟ
ಧಾರಾಕಾರ ಮಳೆಯಿಂದಾಗಿ ಮುಂಬೈ ನಗರ ಸ್ತಬ್ಧವಾಗಿದೆ. ಮುಂಬೈನ ಬಹುತೇಕ ರಸ್ತೆಗಳು ಜಲಮಯವಾಗಿದ್ದು, ಸಂಚಾರ ಮಾಡೋಕು ಕಷ್ಟವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ. ಮುಂಜಾಗ್ರತ ಕ್ರಮವಾಗಿ ಮುಂಬೈ ಸೇರಿ ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಖಾಸಗಿ ಕಂಪನಿಗಳು, ವರ್ಕ್ ಫ್ರಮ್ ಹೋಮ್ ಮೊರೆ ಹೋಗಿವೆ.
ಕಳೆದ ಐದು ದಿನಗಳಿಂದ ಮಹಾರಾಷ್ಟ್ರದಲ್ಲಿ ಮಹಾ ಮಳೆ ಭಾರೀ ಗಂಡಾಂತರವನ್ನೇ ಸೃಷ್ಟಿಸಿದೆ. ಐದು ದಿನಗಳಿಂದ ಮಳೆ ಅನಾಹುತದಲ್ಲಿ 21 ಜನರು ಅಸುನೀಗಿದ್ದಾರೆ. ಬಿಟ್ಟೂ ಬಿಡದೇ ಒಯ್ಯಾರ ತೋರುತ್ತಿರೋ ಮಳೆರಾಯ ಕೊಂಚ ಗ್ಯಾಪ್ ಕೊಡಪ್ಪ ಎನ್ನುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ