/newsfirstlive-kannada/media/media_files/2025/09/10/chiranjeevi-2025-09-10-22-04-00.jpg)
ಟಾಲಿವುಡ್​ನ ಮೆಗಾ ಫ್ಯಾಮಿಲಿಯಲ್ಲಿ ಸದ್ಯ ಸಂಭ್ರಮ, ಸಡಗರ ಏರ್ಪಟ್ಟಿದೆ. ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಂತಸದ ಕ್ಷಣಗಳಿಂದ ಹಬ್ಬದ ವಾತಾವರಣ ಮೂಡಿದೆ. ತೆಲುಗು ಸಿನಿ ರಂಗದ ಸ್ಟಾರ್ ಕಪಲ್ಸ್ ಆಗಿರುವ ವರಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಅವರು ಮೊದಲ ಮಗುವಿಗೆ ಪೋಷಕರು ಆಗಿದ್ದಾರೆ. ಸೆಪ್ಟೆಂಬರ್ 10 ರಂದು ರೈಂಬೋ ಆಸ್ಪತ್ರೆಯಲ್ಲಿ ಲಾವಣ್ಯ ತ್ರಿಪಾಠಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರ ನಾಗಬಾಬು ಅವರ ಮಗ ವರುಣ್​ ತೇಜ್ ತಂದೆ ಆಗಿದ್ದಾರೆ. ವರುಣ್​ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಅವರಿಗೆ ಗಂಡು ಮಗು ಜನಿಸಿದ್ದರಿಂದ ಇಡೀ ಮೆಗಾ ಫ್ಯಾಮಿಲಿಯಲ್ಲಿ ಖುಷಿ ಡಬಲ್ ಆಗಿದೆ. ಹೈದರಾಬಾದ್​ನ ರೈಂಬೋ ಆಸ್ಪತ್ರೆಯಲ್ಲಿ ಲಾವಣ್ಯ ತ್ರಿಪಾಠಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷ್ಯ ತಿಳಿಯುತ್ತಿದ್ದಂತೆ ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಮೆಗಾಸ್ಟಾರ್ ಚಿರಂಜೀವಿ ಅವರು ಮೊಮ್ಮಗನನ್ನು ನೋಡಲು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/09/10/varuntej_lavanya-2025-09-10-22-04-31.jpg)
ಸದ್ಯ ಮೆಗಾಸ್ಟಾರ್ ಚಿರಂಜೀವಿ ಅವರು ಅನಿಲ್ ರಾವಿಪುಡಿ ನಿರ್ದೇಶನದಲ್ಲಿ ಮನ ಶಂಕರವರಪ್ರಸಾದಗಾರು ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಇದೇ ಸಿನಿಮಾದ ಸೆಟ್​ನಲ್ಲಿ ಶೂಟಿಂಗ್ ಮಾಡುವಾಗ ಚಿರಂಜೀವಿಗೆ ವಿಷಯ ಗೊತ್ತಾಗಿದೆ ಅಷ್ಟೇ. ಶೂಟಿಂಗ್ ಅನ್ನು ಅರ್ಧಕ್ಕೆ ಬಿಟ್ಟು ಆಸ್ಪತ್ರೆಗೆ ಭೇಟಿ ನೀಡಿ ಮೊಮ್ಮಗನ ಮುಖ ನೋಡಿದ್ದಾರೆ. ಅಷ್ಟೇ ಅಲ್ಲ, ಮೊಮ್ಮಗನನ್ನು ಎತ್ತುಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ವರುಣ್​ ತೇಜ್​ ದಂಪತಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಬೆಡ್​ ಮೇಲೆ ಲಾವಣ್ಯ ತ್ರಿಪಾಠಿ ಮಗು ಜೊತೆ ಇದ್ದರೇ, ಅಜ್ಜಿ, ತಾತಾನಾಗಿ ಪದ್ಮಜಲು, ನಾಗಬಾಬು ಅವರು ಬಡ್ತಿ ಪಡೆದಿದ್ದಾರೆ. ಅಲ್ಲೇ ಪಕ್ಕದಲ್ಲೇ ನಿಂತು ಮೊಮ್ಮಗನಿಗೆ ಹಾಯ್ ಹೇಳಿದ್ದಾರೆ. ಮೊಮ್ಮಗನನ್ನು ನೋಡಿದ ನಾಗಬಾಬು ದಂಪತಿಯ ಖುಷಿ ಹೇಳತೀರದು. ಅಲ್ಲದೇ ಮಗಳು ನಿಹಾರಿಕ ಕೂಡ ಇದ್ದಾರೆ. ಇನ್ನು ಚಿರಂಜೀವಿ ಅವರು ಮೊಮ್ಮಗನನ್ನು ಎತ್ತುಕೊಂಡಿರುವ ಫೋಟೋ ಸಖತ್ ವೈರಲ್ ಆಗಿದ್ದು ಎಲ್ಲರೂ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us