ಧನರಾಜ್​ ಆಚಾರ್ ಮನೆಗೆ ಬಂದ ತಂಗಿ ಜಿಂಕೆ.. ಮಂಗಳೂರು ಬನ್​​ ತಿಂದು ಭವ್ಯಗೌಡ ಹೇಳಿದ್ದೇನು?

ಭವ್ಯಗೌಡ ಹಾಗೂ ಧನರಾಜ್ ಆಚಾರ್​ ಇಬ್ಬರೂ ಬಿಗ್​ ಬಾಸ್​ನಲ್ಲಿ ಅಣ್ಣ-ತಂಗಿ ಜೋಡಿ. ಜೊತೆಗೆ ಸಖತ್ ಎಂಟರ್​ಟೈನ್ಮೆಂಡ್ ಕೂಡ ಕೊಟ್ಟಿದ್ದರು. ಬಿಗ್​ಬಾಸ್​ ಸೀಸನ್​ 11ರಲ್ಲಿ ಅಣ್ಣ ಜಿಂಕೆಯಾಗಿ ಧನು ಆಚಾರ್​ ಹಾಗೂ ತಂಗಿ ಜಿಂಕೆಯಾಗಿ ಭವ್ಯಗೌಡ ಹರಟೆ ಮಾತು, ಜಗಳ ಎಲ್ಲವೂ ಪ್ರೇಕ್ಷಕರನ್ನು ರಂಜಿಸಿತ್ತು.

author-image
Bhimappa
BHAVYA_GOWDA_DHANU
Advertisment

ಬಿಗ್​ಬಾಸ್​ ಬೆಡಗಿ ಭವ್ಯಗೌಡ ಹಾಗೂ ಧನರಾಜ್ ಆಚಾರ್​ ಇಬ್ಬರೂ ಬಿಗ್​ ಬಾಸ್​ನಲ್ಲಿ ಅಣ್ಣ-ತಂಗಿ ಜೋಡಿ. ಜೊತೆಗೆ ಸಖತ್ ಎಂಟರ್​ಟೈನ್ಮೆಂಡ್ ಕೂಡ ಕೊಟ್ಟಿದ್ದರು. ಬಿಗ್​ಬಾಸ್​ ಸೀಸನ್​ 11ರಲ್ಲಿ ಅಣ್ಣ ಜಿಂಕೆಯಾಗಿ ಧನು ಆಚಾರ್​ ಹಾಗೂ ತಂಗಿ ಜಿಂಕೆಯಾಗಿ ಭವ್ಯಗೌಡ ಹರಟೆ ಮಾತು, ಜಗಳ ಎಲ್ಲವೂ ಪ್ರೇಕ್ಷಕರನ್ನು ರಂಜಿಸಿತ್ತು. 

ಸಾಮಾನ್ಯವಾಗಿ ಬಿಗ್​ಬಾಸ್​ ಮುಗಿದ ಮೇಲೂ ಕೆಲ ಸ್ಪರ್ಧಿಗಳು ಆ ಬಾಂಡಿಂಗ್ ಮುಂದುವರೆಸಿದ್ದಾರೆ. ಅದರಲ್ಲೂ ಭವ್ಯಗೌಡ ಮತ್ತು ಧನರಾಜ್ ಆಚಾರ್ ಮಧ್ಯೆ ಬಿಗ್​ಬಾಸ್​ ಸ್ನೇಹ ಹಾಗೇ ಇರುವ ಕಾರಣ ಧನು ಆಚಾರ್ ಮನೆಗೆ ಭವ್ಯಗೌಡ ಭೇಟಿ ನೀಡಿದ್ದಾರೆ. ಈ ವೇಳೆ ಕೆಲ ತಮಾಷೆಗಳು ನಡೆದಿದ್ದು ಇವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ನೆಟ್ ಬೌಲರ್ಸ್​​ಗೆ ಬೆಂಡೆತ್ತಿದ ಯಂಗ್ ಬ್ಯಾಟರ್.. 30 ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ

BHAVYA_GOWDA

ಅಣ್ಣ ಜಿಂಕೆ ಧನುಗೆ ಸರ್​ಪ್ರೈಸ್

ಭವ್ಯಗೌಡ ಮನೆಗೆ ಬರುತ್ತಿದ್ದಾರೆ ಅನ್ನೋ ವಿಚಾರ ಧನುಗೆ ಗೊತ್ತಿರಲ್ಲಿಲ್ಲ. ಬಿಗ್​ಬಾಸ್ ಅಣ್ಣನಿಗೆ ಸರ್​ಪ್ರೈಸ್ ಕೊಡಬೇಕು ಅಂತಾನೆ ಭವ್ಯಗೌಡ ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದರು. ಭವ್ಯಗೌಡ ಏರ್​ಪೋರ್ಟ್​​ಗೆ ಬಂದಿಳಿಯುತ್ತಿದ್ದಂತೆ ವೆಲ್ಕಮ್​ ಮಾಡಿಕೊಂಡು ಮನೆಗೆ ಕರೆದುಕೊಂಡು ಹೋದರು. 

ಪ್ರಸಿದ್ಧಿ ಜೊತೆ ಭವ್ಯಗೌಡ ಜಾಲಿ ಜಾಲಿ!

ಇನ್ನೂ ಧನರಾಜ್​ ಅವರ ಮುದ್ದಿನ ಮಗಳು, ಪುಟ್ಟ ಕಂದ ಪ್ರಸಿದ್ಧಿಯನ್ನ ಪ್ರೀತಿಯಿಂದ ಮುದ್ದಾಡಿದ ಭವ್ಯಗೌಡ ಥೈಲ್ಯಾಂಡ್​ನಿಂದ ಕ್ಯೂಟ್ ಡ್ರೆಸ್​ ಒಂದನ್ನ ತೊಗೊಂಡು ಬಂದಿದ್ದರು. ಅದೇ ಡ್ರೆಸ್​ನ್ನ ಪ್ರಸಿದ್ಧಿಗೆ ತೊಡಿಸಿದ್ದ ಧನು ಆಚಾರ್​ ಫುಲ್ ಖುಷಿ ಪಟ್ಟಿದ್ದಾರೆ.

ಮಂಗಳೂರು ಬನ್​ ತಿಂದು ಏನಂದ್ರು ಭವ್ಯಾ?

ಮಂಗಳೂರು ಅಂದ್ರೆ ಏನ್ ಫೇಮಸ್ ಹೇಳಿ, ಮಂಗಳೂರು ಬನ್ ಅಲ್ವಾ. ಸೋ ಧನು ಆಚಾರ್ ಕೂಡ ಭವ್ಯಗೌಡ ಬಿಸಿ ಬಿಸಿ ಮಂಗಳೂರು ಬನ್​ ಕೊಡಿಸಿದರು. ಮೆತ್ತಗಿನ ರುಚಿಕರ ಬನ್ ತಿಂದ ಭವ್ಯಗೌಡ ಬನ್​ ಹೀಗೆ ಉಂಟು ಅಂತೇಳಿದರು. ಬಳಿಕ ಧನರಾಜ್​ ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡಿದ ತಂಗಿ ಜಿಂಕೆ ಮಂಗಳೂರಿನ ಹಚ್ಚ ಹಸಿರಿನಲ್ಲಿ ಬೈಕ್ ಸ್ಕೂಟಿ ಓಡಿಸಿ ಖುಷಿ ಪಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧನರಾಜ್ ಆಚಾರ್, DHANRAJ S R, bigg boss Gouthamii Jadav, bigg boss 11 Dhanraj Achar
Advertisment