/newsfirstlive-kannada/media/media_files/2025/09/10/abhishek_sharma-3-2025-09-10-18-24-42.jpg)
ಅಭಿಷೇಕ್ ಶರ್ಮಾ ಎಂದರೆ ಟಿ20 ಕ್ರಿಕೆಟ್​ನಲ್ಲಿ ಹೊಡಿಬಡಿ ಬ್ಯಾಟಿಂಗ್​ಗೆ ಖ್ಯಾತಿ ಪಡೆದವರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದರೆ ಸಾಕು ಎದುರಾಳಿ ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಯುವ ಬ್ಯಾಟ್ಸ್​ಮನ್​. ಸದ್ಯ ಏಷ್ಯಾಕಪ್​ನಲ್ಲೂ ಸ್ಥಾನ ಗಿಟ್ಟಿಸಿಕೊಂಡಿರುವ ಅಭಿಷೇಕ್ ಶರ್ಮಾ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರ್ಭಟಿಸಲು ಎಲ್ಲ ತಯಾರಿ ನಡೆಸಿದ್ದಾರೆ. ಆದರೆ ಯುಎಇ ಪಂದ್ಯದ ಆರಂಭಕ್ಕೂ ಮೊದಲೇ ನಡೆದ ಅಭ್ಯಾಸದ ವೇಳೆ 30 ಸಿಕ್ಸರ್​ಗಳನ್ನ ಬಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಓಪನರ್​ ಆಗಿ ಅಭಿಷೇಕ್​ ಶರ್ಮಾ ಅಖಾಡಕ್ಕೆ ಧುಮುಕಿದರೆ ಸಿಕ್ಸರ್, ಬೌಂಡರಿಗಳಿಗೆ ಏನು ಕಡಿಮೆ ಇರಲ್ಲ. ಈಗಾಗಲೇ ತಮ್ಮ ಬ್ಯಾಟಿಂಗ್ ಬಲ ಸಾಭೀತು ಪಡಿಸಿದ್ದಾರೆ. ಅಪ್ಪಟ ಯುವರಾಜ್​ ಸಿಂಗ್​ ಶಿಷ್ಯರಾಗಿರುವ ಅಭಿಷೇಕ್​ ಭಾರತಕ್ಕೆ ಹೇಳಿ ಮಾಡಿಸಿದಂತಹ ಬ್ಯಾಟ್ಸ್​ಮನ್ ಆಗಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ವಿಜೃಂಭಿಸಲು ಸಿದ್ಧವಾಗಿರುವ ಅವರು ಹೊಸ ಇತಿಹಾಸ ಏನದರೂ ಬರೆಯಲಿದ್ದಾರಾ ಎನ್ನುವುದು ಕುತೂಹಲ ಮೂಡಿಸಿದೆ. ಏಕೆಂದರೆ..
/filters:format(webp)/newsfirstlive-kannada/media/media_files/2025/09/09/suryakumar-yadav-abhishek-sharma-2025-09-09-08-21-23.jpg)
ದುಬೈನಲ್ಲಿ ನಡೆದ ಅಭ್ಯಾಸದ ವೇಳೆ ನೆಟ್​ ಬೌಲರ್​ಗಳಿಗೆ ಅಭಿಷೇಕ್ ಶರ್ಮಾ ಬೆವರಿಳಿಸಿದ್ದಾರೆ. ಹೊಡಿಬಡಿ ಬ್ಯಾಟಿಂಗ್ ಮಾಡಿರುವ ಯಂಗ್ ಬ್ಯಾಟರ್​, 25 ರಿಂದ 30 ಸಿಕ್ಸರ್​ಗಳನ್ನು ಸಿಡಿಸಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ. ಅಭಿಷೇಕ್ ಶರ್ಮಾ ಅವರ ಇದೇ ಬ್ಯಾಟಿಂಗ್, ಕ್ಯಾಪ್ಟನ್ ಸೂರ್ಯಕುಮಾರ್ ಹಾಗೂ ಕೋಚ್​ ಗಂಭೀರ್​ಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಿದೆ ಎನ್ನಲಾಗಿದೆ.
ಈ ಮೊದಲೇ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಸೂರ್ಯಕುಮಾರ್ ಅವರು, ಯಾವುದೇ ಆಟಗಾರನ ಆಟಕ್ಕೆ ಅಡ್ಡಿಪಡಿಸುವುದಿಲ್ಲ. ಅವರನ್ನು ಪ್ರಶಂಸಿಸುವ ಕಡೆಗೆ ಹೆಚ್ಚಿನ ಹೊತ್ತು ಕೊಡಲಾಗುತ್ತದೆ. ಟ್ರೋಫಿಯ ಕಡೆಗೆ ನಮ್ಮೆಲ್ಲರ ಗುರಿಯಾಗಿರುತ್ತದೆ. ಮೈದಾನದಲ್ಲಿ ಪ್ಲೇಯರ್​ಗಳಿಗೆ ಧೈರ್ಯ ತುಂಬಲಾಗುವುದು ಎಂದಿದ್ದರು. ಹೀಗಾಗಿ ಅಭಿಷೇಕ್ ಶರ್ಮಾ ಫ್ರೀ ಬರ್ಡ್​ ಆಗಿದ್ದು ಬ್ಯಾಟಿಂಗ್​​ನಲ್ಲಿ ಘರ್ಜನೆ ಗ್ಯಾರಂಟಿ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us