/newsfirstlive-kannada/media/media_files/2025/09/10/surya_kumar_uae-2025-09-10-17-54-56.jpg)
ಟಿ20 ಏಷ್ಯಾ ಕಪ್ ಅದ್ಧೂರಿಯಾಗಿ ಆರಂಭಗೊಂಡಿದ್ದು ಇಂದು ಟೀಮ್ ಇಂಡಿಯಾ ಹಾಗೂ ಯುಎಇ ನಡುವೆ ಮೊದಲ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಆಗಿರುವ ಟೀಮ್ ಇಂಡಿಯಾ ಇಂದಿನ ಪಂದ್ಯ ಗೆಲ್ಲುವ ಫೆವರೀಟ್ ಟೀಮ್ ಎನಿಸಿದರೂ ತವರಲ್ಲಿ ಯುಎಇ ಪ್ರಾಬಲ್ಯ ಹೊಂದಬಹುದು. 2016ರ ಬಳಿಕ ಇದೇ ಮೊದಲ ಬಾರಿಗೆ ಎರಡು ತಂಡಗಳು ಅಖಾಡಕ್ಕೆ ಧುಮುಕುತ್ತಿವೆ. ಇದು ಹೀಗಿದ್ರೆ ದುಬೈ ಇಂಟರ್​​ನ್ಯಾಷನಲ್ ಕ್ರಿಕೆಟ್​ ಸ್ಟೇಡಿಯಂನ ಪಿಚ್ ರಿಪೋರ್ಟ್​ ಹೇಗಿದೆ?.
ಸೂರ್ಯಕುಮಾರ್ ಅವರು ಟಿ20 ನಾಯಕತ್ವ ವಹಿಸಿಕೊಂಡ ನಂತರ ಇದು ಅವರಿಗೆ ಅತ್ಯಂತ ಮುಖ್ಯವಾದ ಟೂರ್ನ್​ಮೆಂಟ್ ಆಗಿದೆ. ಮುಂದಿನ ವರ್ಷ ಟಿ20 ವರ್ಲ್ಡ್​ಕಪ್​ ನಡೆಯುತ್ತಿದ್ದು ಇದಕ್ಕೆ ಪೂರ್ವ ತಯಾರಿ ಎನ್ನುವಂತೆ ಜಸ್​ಪ್ರಿತ್​ ಬೂಮ್ರಾ ಹಾಗೂ ಶುಭ್​ಮನ್​ ಗಿಲ್ ಟೀಮ್​ ಇಂಡಿಯಾಗೆ ಕಮ್​ಬ್ಯಾಕ್​ ಮಾಡಿದ್ದಾರೆ. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ತಿಲಕ್ ವರ್ಮಾ ಸೇರಿ 15 ಆಟಗಾರರು ಇದ್ದು ಇಂದು ಪ್ಲೇಯಿಂಗ್-11 ರಲ್ಲಿ ಯಾರು ಯಾರು ಸ್ಥಾನ ಪಡೆಯುತ್ತಾರೆ ಎನ್ನುವುದು ಕುತೂಹಲ ಹುಟ್ಟಿಸಿದೆ.
ಟೀಮ್ ಇಂಡಿಯಾಗೆ ಹೋಲಿಕೆ ಮಾಡಿದರೆ ಯುಎಇ ಅಂತಹ ದೊಡ್ಡ ತಂಡವಲ್ಲ ಎನ್ನಬಹುದು. ಆದರೆ ಟಿ20 ಕ್ರಿಕೆಟ್​ನಲ್ಲಿ ಇಂತಹ ತಂಡವೇ ಗೆಲ್ಲುತ್ತದೆ ಎಂದು ಜಡ್ಜ್​​ ಮಾಡುವುದು ಕಷ್ಟ. ಏಕೆಂದರೆ ಇತ್ತೀಚೆಗೆ 3 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶಕ್ಕೆ ಯುಎಇ ಟಕ್ಕರ್ ಕೊಟ್ಟಿತ್ತು. ಅಲ್ಲದೇ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ, ಅಫ್ಘಾನ್​ ವಿರುದ್ಧ ಒಂದು ಪಂದ್ಯ ಗೆಲ್ಲದಿದ್ದರೂ ಅತ್ಯುತ್ತಮ ಪೈಪೋಟಿ ಕೊಟ್ಟಿತ್ತು. ಹೀಗಾಗಿ ಹಾಲಿ ಚಾಂಪಿಯನ್ ಆಗಿರುವ ಟೀಮ್ ಇಂಡಿಯಾ ವಿರುದ್ಧ ಬೆಸ್ಟ್​ ಫರ್ಪಾಮೆನ್ಸ್​ಗೆ ಯುಎಇ ತಂಡ ಮುಂದಾಗಬಹುದು.
/filters:format(webp)/newsfirstlive-kannada/media/media_files/2025/09/10/hardhik_pandya_gill-2025-09-10-17-55-22.jpg)
ಕೆಲವು ವರ್ಷಗಳಿಂದ ದುಬೈ ಕ್ರಿಕೆಟ್ ಮೈದಾನದಲ್ಲಿ ಟಿ20 ಪಂದ್ಯಗಳನ್ನು ಆಡಿಸಲಾಗುತ್ತಿದ್ದು ಇಲ್ಲಿವರೆಗೆ 110 ಪಂದ್ಯಗಳ ಫಲಿತಾಂಶ ಔಟ್ ಆಗಿದೆ. ಮೈದಾನದಲ್ಲಿ ಹುಲ್ಲು ಹೆಚ್ಚು ಇರುವುದರಿಂದ ಚೆಂಡಿನ ವೇಗಕ್ಕೆ ಅಡ್ಡಿಯಾಗುತ್ತದೆ. ಇದರಿಂದ ಬೌಂಡರಿ ಬಾರಿಸಲು ಸಾಕಷ್ಟು ಶಕ್ತಿ ಬೇಕು. ಈ ಪಿಚ್​​ನಲ್ಲಿ ಯಾವುದೇ ಟೀಮ್ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಮೊದಲ ಇನ್ನಿಂಗ್ಸ್​ನಲ್ಲಿ ಅಬ್ಬಾಬ್ಬ ಎಂದರೆ 139 ರನ್​ ಗಳಿಸಬಹುದು. ಪಿಚ್​ ಉತ್ತಮವಾಗಿ ವರ್ತಿಸಿದರೆ 170 ಅಥವಾ 180 ರನ್​ ಬಾರಿಸಬಹುದು. ಮೈದಾನ ದೊಡ್ಡದಾಗಿ ಇದ್ದಿದ್ದರಿಂದ ಈ ಪಿಚ್​ನಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವುದು ಅಷ್ಟೊಂದು ಸುಲಭವಲ್ಲ ಎಂದು ಹೇಳಲಾಗುತ್ತಿದೆ.
ದುಬೈ ಮೈದಾನದಲ್ಲಿ ಟಿ20 ಪಂದ್ಯಗಳ ವಿವರ
- ಒಟ್ಟು ಪಂದ್ಯಗಳು ನಡೆದಿರುವುದು- 110
- ಮೊದಲ ಬ್ಯಾಟಿಂಗ್​ನಿಂದ ಗೆಲುವು- 51
- ಮೊದಲ ಬೌಲಿಂಗ್​​ನಿಂದ ಗೆಲುವು- 58
- ಅತಿ ಹೆಚ್ಚು ರನ್​- 212 (ಭಾರತ-ಅಫ್ಘಾನ್)
- ಅತಿ ಹೆಚ್ಚು ಚೇಸಿಂಗ್- 184 ರನ್​ (ಶ್ರೀಲಂಕಾ-ಬಾಂಗ್ಲಾ)
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us