ಟೀಮ್ ಇಂಡಿಯಾದಲ್ಲಿ ನಾಲ್ವರು ಆಲ್​ರೌಂಡರ್ಸ್​​.. ಪರ್ಫೆಕ್ಟ್​ ಪ್ಲೇಯರ್​ ಯಾರು..?

ಬ್ಯಾಟ್​​ ಹಿಡಿದು ಘರ್ಜಿಸುವ ಆಲ್​ರೌಂಡರ್ಸ್​, ಬೌಲಿಂಗ್​​ನಲ್ಲೂ ಕಮಾಲ್ ಮಾಡ್ತಾರೆ. ಇದೇ ಕಾರಣಕ್ಕೆ ಆಲ್​​ರೌಂಡರ್​​​ಗಳೇ ಗೇಮ್ ಚೇಂಜರ್ಸ್ & ಮ್ಯಾಚ್ ವಿನ್ನರ್ಸ್ ಎನ್ನುತ್ತಾರೆ. ಆದ್ರೀಗ ಏಷ್ಯಾಕಪ್​​ನಲ್ಲಿ ಟೀಮ್ ಇಂಡಿಯಾ ಆಲ್​ರೌಂಡರ್​ಗಳನ್ನೇ ಮಿಸ್ ಆಗ್ತಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ.

author-image
Bhimappa
TEAM_INDIA (6)
Advertisment

ಏಷ್ಯಾಕಪ್​​ಗೆ ಟೀಮ್ ಇಂಡಿಯಾ ಬಲಿಷ್ಠ ತಂಡವನ್ನೇ ಕಟ್ಟಿದೆ. ಏಷ್ಯಾಕಪ್​ ಗೆಲ್ಲುವ ಹಾಟ್ ಫೇವರಿಟ್ ಆಗಿಯೂ ಕಣಕ್ಕಿಳಿಯುತ್ತಿದೆ. ಆದ್ರೆ, ಇದೇ ಟೀಮ್ ಇಂಡಿಯಾ ಗೆಲುವಿಗೆ ಆಲ್​ರೌಂಡರ್​ಗಳೇ ಮುಪ್ಪಾಗ್ತಾರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಅಷ್ಟಕ್ಕೂ ಆಲ್​ರೌಂಡರ್​​​ಗಳಿಗೂ, ಏಷ್ಯಾಕಪ್​ಗೂ ಏನ್ ಸಂಬಂಧ?.

ಆಲ್​​ರೌಂಡರ್ಸ್​.. ಇವರು ಟೀಮ್​ಗಳ ಎಕ್ಸ್​ ಫ್ಯಾಕ್ಟರ್​ ಪ್ಲೇಯರ್ಸ್​, ಒಂದು ತಂಡದ ಗೆಲುವು ಸೋಲು ನಿರ್ಧರಿಸುವುದೇ ಈ ಆಲ್​ರೌಂಡರ್​​ಗಳು. ಆದ್ರೆ, ಬ್ಯಾಟ್​​ ಹಿಡಿದು ಘರ್ಜಿಸುವ ಆಲ್​ರೌಂಡರ್​ಗಳು, ಬೌಲಿಂಗ್​​ನಲ್ಲೂ ಕಮಾಲ್ ಮಾಡ್ತಾರೆ. ಇದೇ ಕಾರಣಕ್ಕೆ ಹೇಳುವುದು ಆಲ್​​ರೌಂಡರ್​​​ಗಳೇ ಗೇಮ್ ಚೇಂಜರ್ಸ್ & ಮ್ಯಾಚ್ ವಿನ್ನರ್ಸ್. ಆದ್ರೀಗ ಏಷ್ಯಾಕಪ್​​ನಲ್ಲಿ ಟೀಮ್ ಇಂಡಿಯಾ ಆಲ್​ರೌಂಡರ್​ಗಳನ್ನೇ ಮಿಸ್ ಆಗ್ತಿದೆಯಾ ಎಂಬ ಅನುಮಾನ ಹುಟ್ಟುಹಾಕಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿರುವ ಆಲ್​ರೌಂಡರ್​ಗಳ ಸಂಖ್ಯೆ.  

ABHISHEK_SHARMA (2)

ಏಷ್ಯಾಕಪ್ ಸಮರಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಟೀಮ್ ಇಂಡಿಯಾದಲ್ಲಿ ಒಂದಲ್ಲ, ಎರಡಲ್ಲ, ನಾಲ್ವರು ಆಲ್​ರೌಂಡರ್​ಗಳು ಇದ್ದಾರೆ. ಆದ್ರೆ, ಈ ನಾಲ್ವರಲ್ಲಿ GENUINE ಆಲ್​ರೌಂಡರ್​ಗಳ ಸಂಖ್ಯೆ ಮಾತ್ರವೇ ಹೊಸ ಟೆನ್ಶನ್ ಕ್ರಿಯೇಟ್ ಹಿಂದಿನ ರೀಸನ್.

2024ರ ಟಿ20 ವಿಶ್ವಕಪ್​ ಗೆಲುವಿನ ಹಿಂದಿತ್ತು ಆಲ್​ರೌಂಡರ್ಸ್ ಶಕ್ತಿ..!

2024ರ ಟಿ20 ವಿಶ್ವಕಪ್​.. ಈ ವಿಶ್ವಕಪ್​​​ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದೆ ರವೀಂದ್ರ ಜಡೇಜಾ, ಆಕ್ಷರ್ ಪಟೇಲ್ & ಹಾರ್ದಿಕ್ ಪಾಂಡ್ಯ ಬ್ಯಾಟ್​ ಹಿಡಿದು ರನ್ ಕೊಳ್ಳೆ ಹೊಡೆಯುತ್ತಿದ್ದ ಇವರು, ಬೌಲಿಂಗ್​ನಲ್ಲೂ ಕಮಾಲ್ ಮಾಡಿದ್ದರು. ಫಿಲ್ಡಿಂಗ್​ನಲ್ಲೂ ವಾವ್ ಎನಿಸಿದ್ದರು. ಟೀಮ್ ಇಂಡಿಯಾದ ಶಕ್ತಿಯಾಗಿ, ಆಪದ್ಬಾಂಧವರಾಗಿ ನಿಂತಿದ್ದೇ ಈ ತ್ರಿವಳಿ ಆಲ್​ರೌಂಡರ್​ಗಳು ಅನ್ನೋದ್ರಲ್ಲಿ ಡೌಟೇ ಇಲ್ಲ. ಆದ್ರೀಗ ಇದೇ ಆಲ್​ರೌಂಡರ್​​ಗಳ ಶಕ್ತಿ ಟೀಮ್ ಇಂಡಿಯಾಗೆ ಏಷ್ಯಾಕಪ್​​ನಲ್ಲಿ ಕಾಡಲಿದೆ. 

ನಾಲ್ವರು ಆಲ್​ರೌಂಡರ್ಸ್​.. ಇಬ್ಬರು ಆಟಕ್ಕುಂಟು ಲೆಕ್ಕಕ್ಕಿಲ್ಲ..!

ಏಷ್ಯಾಕಪ್​​ನಲ್ಲಿ ನಾಲ್ವರು ಆಲ್​ರೌಂಡರ್​ಗಳಿಗೆ ಸ್ಥಾನ ಸಿಕ್ಕಿದೆ. ಈ ಪೈಕಿ ಸ್ಪಿನ್ ಆಲ್​ರೌಂಡರ್ ಆಗಿ ಆಕ್ಷರ್ ಪಟೇಲ್, ಅಭಿಷೇಕ್ ಶರ್ಮಾ ಸ್ಥಾನ ಪಡೆದುಕೊಂಡಿದ್ರೆ. ಪೇಸ್​ ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಕಾಣಿಸಿಕೊಂಡಿದ್ದಾರೆ. ಆದ್ರೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಬಿಟ್ರೆ, ಇನ್ನಿಬ್ಬರು ಆಟಕ್ಕುಂಟು ಲೆಕ್ಕಕ್ಕಿಲ್ಲ. ಹೀಗಾಗಿ ಟೀಮ್ ಇಂಡಿಯಾ ಏಷ್ಯಾಕಪ್​​ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಆಕ್ಷರ್ ಪಟೇಲ್​​ರನ್ನೇ ಹೆಚ್ಚು ನಂಬಿಕೊಳ್ಳಬೇಕಾಗಿದ್ದು, ಒಬ್ಬ ನೈಜ ಆಲ್​ರೌಂಡರ್​​ನ ಕೊರತೆ ಟೀಮ್ ಇಂಡಿಯಾಗೆ ಕಾಡೋದ್ರಲ್ಲಿ ಡೌಟೇ ಇಲ್ಲ.   

ಶಿವಂ ದುಬೆ, ಅಭಿಷೇಕ್ ಪರ್ಫೆಕ್ಟ್​ ಆಲ್​ರೌಂಡರ್​ಗಳಾ..?

ಇಂಥದ್ದೊಂದು ಪ್ರಶ್ನೆ ಹುಟ್ಟದಿರಲ್ಲ. ಯಾಕಂದ್ರೆ, ಅಭಿಷೇಕ್ ಶರ್ಮಾ & ಶಿವಂ ದುಬೆ ಬ್ಯಾಟಿಂಗ್​​ಗಷ್ಟೇ ಸೀಮಿತ. ಬೌಲಿಂಗ್ ಮಾಡಿದರು. ಒಂದೆರೆಡು ಓವರ್​​, ಪಾರ್ಟ್​ ಟೈಮ್ ಬೌಲರ್​ಗಳಾಗಿ ಕಾಣಿಸಿಕೊಳ್ಳುವ ಇವರು, ಬೌಲಿಂಗ್​​ನಲ್ಲಿ ಹೇಳಿಕೊಳ್ಳುವಷ್ಟು ಎಫೆಕ್ಟ್​ ಅಲ್ಲ. ಹೀಗಾಗಿ ಇಬ್ಬರು ನೈಜ ಆಲ್​ರೌಂಡರ್​ಗಳೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್​ ಗೆಲ್ಲೋಕೆ ಸಾಧ್ಯನಾ ಎಂಬ ಪ್ರಶ್ನೆ ಸಹಜವಾಗೇ ಹುಟ್ಟುಕೊಳ್ಳುತ್ತೆ.

ಟೀಮ್ ಇಂಡಿಯಾಗೆ ಬೇಕಿತ್ತು ಸುಂದರ್​ರಂಥ ಆಲ್​ರೌಂಡರ್..!

ಖಂಡಿತ ಟೀಮ್ ಇಂಡಿಯಾ, ವಾಷ್ಟಿಂಗ್ಟನ್ ಸುಂದರ್​ರಂಥ ಎಕ್ಸ್​_ಫ್ಯಾಕ್ಟರ್​ ಆಲ್​ರೌಂಡರ್​ನ ಮಿಸ್ ಆಗುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಮಿಡಲ್ ಆರ್ಡರ್ & ಲೋವರ್ ಆರ್ಡರ್​ನಲ್ಲಿ ಬ್ಯಾಟ್ ಬೀಸಬಲ್ಲ ಸುಂದರ್, ಯುಎಇಯಂಥ ಸ್ಪಿನ್ ಫ್ರೆಂಡ್ಲಿ ಟ್ರ್ಯಾಕ್​​ನಲ್ಲಿ ಎದುರಾಳಿಯನ್ನು ಗಿರಗಿಳ್ಲೆ ಹೊಡಿಸಬಲ್ಲರು. ರವೀಂದ್ರ ಜಡೇಜಾ ಅಲಭ್ಯತೆ ತುಂಬಬಲ್ಲ ಸುಂದರ್, ಏಷ್ಯಾಕಪ್​​ನಲ್ಲಿ ಎಕ್ಸ್​ ಫ್ಯಾಕ್ಟರ್ ಪ್ಲೇಯರ್ ಆಗ್ತಿದ್ದರು. ಆದ್ರೀಗ ಇದೇ ಟೀಮ್ ಇಂಡಿಯಾಗೆ ಮುಳ್ಳಾದರು ಅಚ್ಚರಿ ಪಡಬೇಕಿಲ್ಲ. ಇದೇ ವಿಚಾರವನ್ನೇ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್​ ಉಲ್ಲೇಖಿಸಿದ್ದಾರೆ.

ಸುಂದರ್​​​ನ ಮಿಸ್ ಮಾಡಿಕೊಳ್ಳುತ್ತೆ..!

ರೋಹಿತ್ ನೇತೃತ್ವದ ಟೀಮ್ ಇಂಡಿಯಾ ಅಕ್ಷರ್, ಜಡೇಜಾ, ಹಾರ್ದಿಕ್​​​​ ಎಂಬ ತ್ರಿವಳಿ ಆಲ್‌ರೌಂಡರ್‌ಗಳೊಂದಿಗೆ ಟಿ20 ವಿಶ್ವಕಪ್ ಗೆದ್ದಿತ್ತು. ಇದರರ್ಥ 6 ಬೌಲಿಂಗ್ ಆಯ್ಕೆ, 8ರವರೆಗೆ ಬ್ಯಾಟಿಂಗ್​​ ಮಾಡುವ ತಂಡ ಇತ್ತು. ಏಷ್ಯಾಕಪ್‌ನಲ್ಲಿ ಹಾರ್ದಿಕ್, ಅಕ್ಷರ್​ ಮಾತ್ರವೇ ನೈಜ ಆಲ್​ರೌಂಡರ್​​​ಗಳಾಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ಹೊಸ ವಿನ್ನಿಂಗ್ ಕಾಂಬಿನೇಷನ್ ಕಂಡುಕೊಳ್ಳಬೇಕಿದೆ. ಖಂಡಿತ ಟೀಮ್ ಇಂಡಿಯಾ ವಾಷಿಂಗ್ಟನ್ ಸುಂದರ್​​​ನ  ಮಿಸ್ ಮಾಡಿಕೊಳ್ಳುತ್ತೆ.

ಮೊಹಮ್ಮದ್ ಕೈಫ್​, ಮಾಜಿ ಕ್ರಿಕೆಟರ್​

ಇದನ್ನೂ ಓದಿ: Asia Cup; ಪ್ರತಿ ಮ್ಯಾಚ್​ ಟೀಮ್ ಇಂಡಿಯಾ ಆಟಗಾರರಿಗೆ ಅತ್ಯಂತ ಮುಖ್ಯ.. ಯಾಕೆ ಗೊತ್ತಾ?

HARDHIK_PANDYA_AXAR

ಮೊಹಮ್ಮದ್ ಕೈಫ್ ಹೇಳಿದಂತೆ, ರೋಹಿತ್ & ದ್ರಾವಿಡ್​ ವಿಭಿನ್ನ ಸ್ಟ್ರಾಟರ್ಜಿಯೊಂದಿಗೆ ವಿಶ್ವಕಪ್​​ನಲ್ಲಿ ಕಣಕ್ಕಿಳಿದಿತ್ತು. ಅದಕ್ಕೆ ತಕ್ಕಂತೆ ವಿಶ್ವಕಪ್​ ಕೂಡ ಗೆದ್ದಿತ್ತು. ದ್ರಾವಿಡ್ & ರೋಹಿತ್ ಶರ್ಮಾಗೆ ಹೋಲಿಕೆ ಮಾಡಿದ್ರೆ, ಗಂಭೀರ್ & ಸೂರ್ಯ ಡಿಫರೆಂಟ್ ಸ್ಟ್ರಾಟರ್ಜಿಯೊಂದಿಗೆ ಕಣಕ್ಕಿಳಿಯುತ್ತಿದ್ದಾರೆ. ಸದ್ಯಕ್ಕೆ ಏಷ್ಯಾಕಪ್​​ನಲ್ಲಿ ವರ್ಕೌಟ್​ ಆದರು, ಮುಂದಿನ ಟಿ20 ವಿಶ್ವಕಪ್​​ ಎಂಬ ಪ್ರತಿಷ್ಠೆಯ ಟೂರ್ನಿಯಲ್ಲಿ ಮುಳ್ಳಾಗಲಿದೆ. ಯಾಕಂದ್ರೆ, 2026ರ ಟಿ20 ವಿಶ್ವಕಪ್ ನಡೀತಿರುವುದು ಭಾರತ ಹಾಗೂ ಶ್ರೀಲಂಕಾದಲ್ಲಿ ಸ್ಪಿನ್ನರ್​​ಗಳದ್ದೇ ಪ್ರಾಬಲ್ಯ. ಹೀಗಾಗಿ ಸ್ಪಿನ್ ಆಲ್​ರೌಂಡರ್​​ಗಳ ಪ್ರಾಬಲ್ಯ ಹೆಚ್ಚು ಅನ್ನೋದು ಮರೆಯಬಾರದು.

ಟಿ20 ಎಂಬ ಫಾಸ್ಟ್ ಗೇಮ್​​ನಲ್ಲಿ ಆಲ್​ರೌಂಡರ್​ಗಳ ಪಾತ್ರವೇ ಕ್ರೂಶಿಯಲ್. ಅಂಥದ್ರಲ್ಲಿ ನೈಜ ಆಲ್​ರೌಂಡರ್​​​ಗಳನ್ನೇ ಪಕ್ಕಕ್ಕಿಟ್ಟು ಏಷ್ಯಾನ್ ಸಮರಕ್ಕಿಳಿಯುತ್ತಿರುವ ಟೀಮ್ ಇಂಡಿಯಾ, ಆನ್​ಫೀಲ್ಡ್​ನಲ್ಲಿ ಯಾವ ರೀತಿಯ ಜಾದೂ ಮಾಡುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕು. 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Asia Cup 2025 Surya kumar Yadav Hardik Pandya
Advertisment