Asia Cup; ಪ್ರತಿ ಮ್ಯಾಚ್​ ಟೀಮ್ ಇಂಡಿಯಾ ಆಟಗಾರರಿಗೆ ಅತ್ಯಂತ ಮುಖ್ಯ.. ಯಾಕೆ ಗೊತ್ತಾ?

ಈ ಏಷ್ಯಾನ್ ಸಮರ ಟೀಮ್ ಇಂಡಿಯಾ ಪಾಲಿಗೆ ಮೋಸ್ಟ್​ ಇಂಪಾರ್ಟೆಂಟ್​ ಸಿರೀಸ್. ಇದು ಕೇವಲ ತಂಡಕ್ಕೆ, ಆಟಗಾರರಿಗೆ ಅಲ್ಲ, ಹೆಡ್ ಕೋಚ್ ಪಾಲಿಗೂ ಪ್ರತಿಷ್ಠೆಯ ಬ್ಯಾಟಲ್. ಅದ್ಯಾಕೆ ಏನ್ ಕಥೆ?.

author-image
Bhimappa
SURYA_KUMAR (2)
Advertisment

ಏಷ್ಯನ್ ಮಿನಿ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದೆ. ಇಂದಿನಿಂದ ಮಿನಿ ವಿಶ್ವಕಪ್ ಆರಂಭವಾಗಲಿದ್ದು, ಈ ಏಷ್ಯಾನ್ ಸಮರ ಟೀಮ್ ಇಂಡಿಯಾ ಪಾಲಿಗೆ ಮೋಸ್ಟ್​ ಇಂಪಾರ್ಟೆಂಟ್​ ಸಿರೀಸ್. ಇದು ಕೇವಲ ತಂಡಕ್ಕೆ, ಆಟಗಾರರಿಗೆ ಅಲ್ಲ, ಹೆಡ್ ಕೋಚ್ ಪಾಲಿಗೂ ಪ್ರತಿಷ್ಠೆಯ ಬ್ಯಾಟಲ್. ಅದ್ಯಾಕೆ ಏನ್ ಕಥೆ?. 

ಏಷ್ಯಾಕಪ್ ಬ್ಯಾಟಲ್​​ಗೆ ವೇದಿಕೆ ಸಜ್ಜಾಗಿದೆ. ಇಂದು ರಾತ್ರಿ 8 ಗಂಟೆಯಿಂದ ಯುಎಇನಲ್ಲಿ ಆರಂಭಗೊಳ್ಳಲಿರುವ ಏಷ್ಯಾನ್​ ಕಲಿಗಳ ಕಾಳಗದಲ್ಲಿ ಕಿಂಗ್ ಯಾರ್ ಆಗ್ತಾರೆ ಎಂಬ ಕೌತುಕತೆಗೆ 28ರಂದು ತೆರೆ ಬೀಳಲಿದೆ. ಆದ್ರೆ, ಇದೇ ಏಷ್ಯಾಕಪ್ ಟೂರ್ನಿ ಟೀಮ್ ಇಂಡಿಯಾಗೆ ಅಗ್ನಿಪರೀಕ್ಷೆಯ ಕಣವಾಗಿದೆ. ಪ್ರತಿಷ್ಠೆಯ ಸಮರವಾಗಿದೆ. ಹಾಲಿ ಚಾಂಪಿಯನ್ಸ್ ಆಗಿ ಟೀಮ್ ಇಂಡಿಯಾಗೆ ಮಾತ್ರವಲ್ಲ, ವೈಯಕ್ತಿಕವಾಗಿಯೂ ಆಟಗಾರರ ಪಾಲಿಗೆ ಮೋಸ್ಟ್​ ಇಂಪಾರ್ಟೆಂಟ್ ಟೂರ್ನಿ.  

gautam_gambhir (2)

ಹಾಲಿ ಚಾಂಪಿಯನ್ಸ್​ಗೆ ಟ್ರೋಫಿ ಉಳಿಸಿಕೊಳ್ಳುವ ಪ್ರತಿಷ್ಠೆ.!

2023ರ ಏಷ್ಯಾಕಪ್​​ನಲ್ಲಿ ಟೀಮ್ ಇಂಡಿಯಾನೇ ಏಷ್ಯಾನ್​ ಕಿಂಗ್ ಆಗಿ ಮೆರೆದಾಡಿತ್ತು. ಇದೀಗ ಹಾಲಿ ಚಾಂಪಿಯನ್ಸ್ ಆಗಿ ರಣರಂಗಕ್ಕಿಳಿಯುತ್ತಿರುವ ಟೀಮ್ ಇಂಡಿಯಾ, ಚಾಂಪಿಯನ್ ಪಟ್ಟ ಉಳಿಸಿಕೊಳ್ಳಬೇಕಾದ ಸವಾಲು ಇದೆ. ಇದು ಸಾಧ್ಯವಾಗಬೇಕಾದ್ರೆ, ಲೀಗ್ ಸ್ಟೇಜ್​​ಗಿಂತ ಸೂಪರ್-4 ಮ್ಯಾಚ್​ಗಳಲ್ಲಿ ವೀರ ಯೋಧರಂತೆ ಹೋರಾಡಬೇಕಿದೆ. ಮೋಸ್ಟ್ ಇಂಪಾರ್ಟೆಂಟ್ಲಿ ಪಾಕಿಸ್ತಾನ್, ಅಫ್ಗಾನಿಸ್ತಾನ್, ಬಾಂಗ್ಲಾ, ಶ್ರೀಲಂಕಾ ತಂಡಗಳನ್ನು ಹಗುರವಾಗಿ ಪರಿಗಣಿಸಲೇಬಾರದು. ಇಲ್ಲ ಚಾಂಪಿಯನ್ ಆಗಿ ಉಳಿಯುವುದು ಕಷ್ಟ. 

ಟಿ20 ವಿಶ್ವಕಪ್ ದೃಷ್ಟಿಯಿಂದ ಟ್ರೋಫಿ ಗೆಲುವು ಅನಿವಾರ್ಯ..!

2026ರ ಟಿ20 ವಿಶ್ವಕಪ್​ ಪ್ರಿಪರೇಷನ್​​​ಗೆ ಪಕ್ಕಾ ವೇದಿಕೆ ಅಂದ್ರೆ, ಅದು ಏಷ್ಯಾಕಪ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಐಸಿಸಿ ಟೂರ್ನಿಯ ಭಾಗವಾಗಿ ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಲು, ಒತ್ತಡದಲ್ಲಿ ಆಡುವ ಕಲೆ ಕರಗತ ಮಾಡಿಕೊಳ್ಳಲು ಏಷ್ಯಾಕಪ್ ಟೂರ್ನಿಯೇ ಪ್ರಮುಖ. ಅಷ್ಟೇ ಅಲ್ಲ, ಮ್ಯಾಚ್​ ವಿನ್ನಿಂಗ್ ಟೀಮ್ & ಬೆಸ್ಟ್ ಟೀಮ್ ಕಾಂಬಿನೇಷನ್​ ಸೆಟ್ ಮಾಡುವ ದೃಷ್ಟಿಯಿಂದ ಏಷ್ಯಾಕಪ್ ಮೋಸ್ಟ್ ಇಂಪಾರ್ಟೆಂಟ್. ಇದಲ್ಲಕ್ಕಿಂತ ಮಿಗಿಲಾಗಿ ಟ್ರೋಫಿ ಗೆಲ್ಲುವ ಹವ್ಯಾಸ ಬೆಳೆಸಿಕೊಳ್ಳಲು ಏಷ್ಯಾಕಪ್ ಗೆಲುವು ಬಹು ಮುಖ್ಯ.

ಸೂರ್ಯಕುಮಾರ್ ನಾಯಕತ್ವಕ್ಕೆ ಸವಾಲಿನ ಟೂರ್ನಿ..!

ಟಿ20 ಸರಣಿಗಳಲ್ಲಿ ಸೋಲಿಲ್ಲದ ಸರದಾರ ಸೂರ್ಯಕುಮಾರ್. ನಾಯಕನಾಗಿ ಇದುವರೆಗೆ ಟಿ20 ಸರಣಿಗಳಲ್ಲಿ ಸೋಲನ್ನೇ ಕಾಣದ ಸೂರ್ಯನಿಗೆ, ಈಗ ಏಷ್ಯಾಕಪ್ ಬಿಗೆಸ್ಟ್ ಟೂರ್ನಮೆಂಟ್. ಹೀಗಾಗಿ ಸೂರ್ಯ ನಾಯಕತ್ವಕ್ಕೆ ಮೊದಲ ಅಗ್ನಿಪರೀಕ್ಷೆಯ ಕಣವಾಗಿದೆ. ಟಿ20 ಸರಣಿಗಳಲ್ಲಿ ಸೋಲಿಲ್ಲದ ಸರದಾರ ಸೂರ್ಯ, ಏಷ್ಯಾನ್ ಸಮರದಲ್ಲಿ ಗೆಲುವಿನ ನಾಗಲೋಟ ಮುಂದುವರಿಸಬೇಕಿದೆ. ಟ್ರೋಫಿ ಗೆಲ್ಲುಬೇಕಿದೆ. ಇದಿಷ್ಟೇ ಅಲ್ಲ, ನಾಯಕನಾದ ಬಳಿಕ ಸೈಲೆಂಟ್ ಆಗಿರುವ ಸೂರ್ಯನ ಬ್ಯಾಟ್​, ಮತ್ತೊಮ್ಮೆ ವೈಲೆಂಟ್ ಆಗಬೇಕಿದೆ. ಇಲ್ಲ ಸೂರ್ಯ ಸ್ಥಾನಕ್ಕೆ ಮಾತ್ರವಲ್ಲ, ನಾಯಕತ್ವದ ಸ್ಥಾನಕ್ಕೂ ಕುತ್ತು ಗ್ಯಾರಂಟಿ.

ಟೀಮ್ ಇಂಡಿಯಾ ಆಟಗಾರರಿಗೆ ಅಗ್ನಿಪರೀಕ್ಷೆಯ ಕಣ..!

ಸೂರ್ಯಕುಮಾರ್​ ನಾಯಕತ್ವಕ್ಕೆ ಮಾತ್ರವಲ್ಲ, ಟೀಮ್ ಇಂಡಿಯಾದ ಪ್ರತಿ ಆಟಗಾರನಿಗೂ ಮೋಸ್ಟ್ ಇಂಪಾರ್ಟೆಂಟ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಮುಂದಿನ 6 ತಿಂಗಳಲ್ಲೇ ಟಿ20 ವಿಶ್ವಕಪ್ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ತಂಡದಲ್ಲಿರುವ ಆಟಗಾರರು ಸ್ಥಾನ ಗಟ್ಟಿ ಮಾಡಿಕೊಳ್ಳಬೇಕಾದ್ರೆ. ಸಿಕ್ಕ ಒಂದೊಂದು ಅವಕಾಶ ಬಾಚಿಕೊಳ್ಳಬೇಕಿದೆ. ಪ್ರಮುಖವಾಗಿ ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ಅಭಿಷೇಕ್ ಶರ್ಮಾ, ಶಿವಂ ದುಬೆ, ತಿಲಕ್ ವರ್ಮ, ರಿಂಕು ಸಿಂಗ್ ಪಾಲಿಗೆ ಡು ಆರ್ ಡೈ. ಹೀಗಾಗಿ ಈ ಅಗ್ನಿಪರೀಕ್ಷೆ ಗೆಲ್ಲದಿದ್ರೆ. ಇಂಜುರಿಯಿಂದ ದೂರ ಉಳಿದಿವರು, ಸ್ಥಾನ ಆಕ್ರಮಿಸಿಕೊಳ್ಳುವುದರಲ್ಲಿ ಡೌಟೇ ಇಲ್ಲ.

ಇದನ್ನೂ ಓದಿ:ಕರ್ನಾಟಕಕ್ಕೆ ಜಾಕ್​ಪಾಟ್​​! ಈ ಜಿಲ್ಲೆಯಲ್ಲಿ ಟನ್​ ಗಟ್ಟಲೇ ಚಿನ್ನದ ನಿಕ್ಷೇಪ ಪತ್ತೆ..!

SURYAKUMAR_GILL

ಹೆಡ್ ಕೋಚ್ ಗಂಭೀರ್​ಗೆ ಇಂಪಾರ್ಟೆಂಟ್ ಟೂರ್ನಿ..!

ಹೆಡ್ ಕೋಚ್​ ಗೌತಮ್ ಗಂಭೀರ್ ಅಂಡರ್​​ನಲ್ಲಿ ಟೀಮ್ ಇಂಡಿಯಾ, ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆದ್ದಿದೆ. ಆದ್ರೆ, ಇದರ ಕಂಪ್ಲೀಟ್ ಕ್ರೆಡಿಟ್​ ರೋಹಿತ್ ಶರ್ಮಾ & ಟೀಮ್​ಗೆ ಸೇರುತ್ತೆ. 2023ರ ಏಕದಿನ ವಿಶ್ವಕಪ್​ ಕೋರ್​​​​ ಟೀಮ್​ನಿಂದಲೇ 2025ರ ಚಾಂಪಿಯನ್ಸ್​ ಟ್ರೋಫಿ ಗೆಲ್ಲುವಂತಾಯ್ತು. ಆದ್ರೆ, ಏಕದಿನ ಫಾರ್ಮೆಟ್​ಗೆ ಹೋಲಿಸಿದ್ರೆ. ಟಿ20 ಟೀಮ್ ಕಂಪ್ಲೀಟ್ ಡಿಫರೆಂಟ್. ಹೀಗಾಗಿ ಹೆಡ್ ಕೋಚ್ ಆಗಿ ಗಂಭೀರ್, ಯಾವೆಲ್ಲಾ ಸ್ಟ್ರಾಟರ್ಜಿ ಬಳಸಿಕೊಂಡು ಚಾಂಪಿಯನ್ ಪಟ್ಟಕ್ಕೇರಿಸ್ತಾರೆ ಅನ್ನೋದೇ ಕ್ಯೂರಿಯಾಸಿಟಿ.

ಟಿ20 ಕಾ ಚಾಂಪಿಯನ್ ಆಗಿರುವ ಟೀಮ್ ಇಂಡಿಯಾ, ವರ್ಲ್ಡ್​ ಚಾಂಪಿಯನ್ ಆಗಿ ಏಷ್ಯಾಕಪ್ ಉಳಿಸಿಕೊಳ್ಳುತ್ತಾ..? ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಾ..? ಅನ್ನೋದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

Gautam Gambhir Surya kumar Yadav Asia Cup 2025
Advertisment