/newsfirstlive-kannada/media/media_files/2025/09/09/gold-prospects-chikkamagalore-2025-09-09-08-56-17.jpg)
ರಾಜ್ಯಕ್ಕೆ ಶುಭ ಸುದ್ದಿ ಸಿಗುವ ಬಗ್ಗೆ ಗುಲ್ ಎದ್ದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ 10 ಸಾವಿರ ಎಕರೆ ಅರಣ್ಯದಲ್ಲಿ ಬಂಗಾರದ ನಿಕ್ಷೇಪ ಪತ್ತೆ ಆಗಿದೆಯಂತೆ!
10 ಸಾವಿರ ಎಕರೆಯಲ್ಲಿ ಟನ್‌ಗಟ್ಟಲೇ ಚಿನ್ನವಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ಚಿನ್ನದ ನಿಕ್ಷೇಪ ಇರುವ ಬಗ್ಗೆ ಯಾವುದೇ ಐಡಿಯಾ ಇಲ್ಲ. ಮಾಹಿತಿಗಳ ಪ್ರಕಾರ, ತರೀಕೆರೆಯಲ್ಲಿ ಚಿನ್ನದ ನಿಕ್ಷೇಪ ಇರೋದು ಪತ್ತೆಯಾಗಿದೆ. 2024ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೆಂಚೇನಹಳ್ಳಿ ಭಾಗದಲ್ಲಿ ಚಿನ್ನದ ನಿಕ್ಷೇಪ ಇರುವುದು ಪತ್ತೆ ಮಾಡಿಕೊಂಡಿದೆ. ಪತ್ತೆ ಆಗಿರುವ ಜಾಗದಲ್ಲಿ ಸಂಯೋಜಿತ ಪರೀಕ್ಷೆ ನಡೆಸುವ ಉದ್ದೇಶದಿಂದ ಹರಾಜು ಪ್ರಕ್ರಿಯೆ ನಡೆದಿದೆ.
ಇದನ್ನೂ ಓದಿ:ಇವತ್ತು ಮದ್ದೂರು ಬಂದ್‌ಗೆ ಹಿಂದೂ ಸಂಘಟನೆಗಳಿಂದ ಕರೆ!
ಈ ಹರಾಜು ಪ್ರಕ್ರಿಯೆಯಲ್ಲಿ ಬೆಂಗಳೂರಿನ ಆರಮ್ ಕಂಪನಿ (Aram company) ಬರೋಬ್ಬರಿ 1.50 ಕೋಟಿ ರೂಪಾಯಿ ಪಾವತಿಸಿ ಹರಾಜನ್ನು ತನ್ನದಾಗಿಸಿಕೊಂಡಿದೆ. ಇದೀಗ ಅಲ್ಲಿ ಪರೀಕ್ಷೆ ನಡೆಸಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ ಇದೆ. ಹೀಗಾಗಿ ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ಕೋರಿ ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆದಿದೆ. ಆದರೆ ಅರಣ್ಯ ಇಲಾಖೆಯಿಂದ ಅನುಮತಿ ಇದುವರೆಗೆ ಸಿಕ್ಕಿಲ್ಲ.
ಯಾವೆಲ್ಲ ಭಾಗದಲ್ಲಿ ಚಿನ್ನ..?
ತರೀಕೆರೆ ತಾಲೂಕಿನ ಕೆಂಚೇನಹಳ್ಳಿ ವ್ಯಾಪ್ತಿಯ ಮುಂಡ್ರೆ, ಬೆಟ್ಟದಹಳ್ಳಿ, ಲಿಂಗದಹಳ್ಳಿ ಭಾಗದಲ್ಲಿ ಪತ್ತೆ ಆಗಿದೆ. ಪತ್ತೆ ಆಗಿರುವ ಜಾಗ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಒಳಪಡಲಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಪ್ರದೇಶವಾಗಿದೆ.
ಇದನ್ನೂ ಓದಿ:ಬಾಗಲಕೋಟೆ ಜಿಲ್ಲೆಯಲ್ಲಿ ಶಾಲಾ ಕಾಲೇಜಿಗೆ ಹೋಗಲು ಬಸ್ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ