/newsfirstlive-kannada/media/media_files/2025/09/23/mohanlal_new_photo-2025-09-23-23-13-44.jpg)
ನವದೆಹಲಿ: ಮಾಲಿವುಡ್​ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದರು. ಕಳೆದ 4 ದಶಕಗಳಿಂದ ಭಾರತೀಯ ಚಿತ್ರರಂಗಕ್ಕೆ ಮೋಹನ್ ಲಾಲ್ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ.
ಸಿನಿ ರಂಗದ ಶ್ರೇಷ್ಠ ಪ್ರಶಸ್ತಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದಿರುವ ಮೋಹನ್ ಲಾಲ್ ಅವರ ನಿಜವಾದ ಹೆಸರು ಮೋಹನ್ ಲಾಲ್ ವಿಶ್ವನಾಥನ್. ಆದರೆ ಇಂಡಸ್ಟ್ರಿಗೆ ಮೋಹನ್ ಲಾಲ್ ಎಂದೇ ಪರಿಚಿತರು. ಇವರು ಒಬ್ಬ ಭಾರತೀಯ ನಟ ಹಾಗೂ ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿ ಸಿನಿಮಾಗಳಲ್ಲಿ ಅದ್ಭುತವಾಗಿ ಅಭಿನಯ ಮಾಡಿದ್ದಾರೆ. ಕೇವಲ ಮಲಯಾಳಂ ಮಾತ್ರವಲ್ಲ, ಬದಲಾಗಿ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಮೂವಿಗಳಲ್ಲೂ ಬಣ್ಣ ಹಚ್ಚಿ ಯಶಸ್ಸು ಕಂಡಿದ್ದಾರೆ.
ಮೋಹನ್ ಲಾಲ್ ಅವರು 1960, ಮೇ 21 ರಂದು ಕೇರಳದ ಪತ್ತನಂತಿಟ್ಟದಲ್ಲಿ ಜನಿಸಿದ್ದರು. ಸದ್ಯ ಇವರಿಗೆ 65 ವರ್ಷಗಳು ತುಂಬಿವೆ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಲಾಲ್​, ಲಾಲು ಹಾಗೂ ಲಾಲೆಟ್ಟೈನ್ ಎಂದು ಕರೆಯುತ್ತಾರೆ. ಮೋಹಲ್ ಲಾಲು ಸಿನಿ ರಂಗಕ್ಕೆ 1978ರಲ್ಲಿ ತಿರನೊತ್ತಮ್ ಎನ್ನುವ ಸಿನಿಮಾ ಮೂಲಕ ಡೆಬ್ಯೂ ಮಾಡಿದರು. ಅಲ್ಲಿಂದ ತಮ್ಮ ಸುದೀರ್ಘ 40 ವರ್ಷಗಳನ್ನು ಸಿನಿಮಾ ಕ್ಷೇತ್ರದಲ್ಲೇ ಕಳೆದಿದ್ದಾರೆ. ಚಿತ್ರರಂಗದಲ್ಲಿ ಎಲ್ಲವನ್ನು ಬಲ್ಲವರು ಆಗಿದ್ದಾರೆ. ಇವರು 40 ವರ್ಷಗಳಲ್ಲಿ ಸುಮಾರು 400 ಸಿನಿಮಾಗಳಲ್ಲಿ ಆ್ಯಕ್ಟಿಂಗ್ ಮಾಡಿದ್ದಾರೆ.
ಭಾರತ ಸರ್ಕಾರದಿಂದ ಸಿನಿಮಾ ಕ್ಷೇತ್ರದ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದಿರುವ ಮೋಹನ್ ಲಾಲ್ ಅವರು ಆವರ್ಡ್​ ಅನ್ನು ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಅರ್ಪಣೆ ಮಾಡಿದ್ದಾರೆ. ಕೇರಳದ ಸಿನಿಮಾ ಅಭಿಮಾನಿಗಳನ್ನು ಕೊಂಡಾಡಿದ್ದಾರೆ. ಮೋಹಲ್ ಲಾಲ್ ಅವರಿಗೆ ಈ ಮೊದಲು ಭಾರತ ಸರ್ಕಾರದಿಂದ 2001ರಲ್ಲಿ ಪದ್ಮಶ್ರೀ, 2019ರಲ್ಲಿ ಪದ್ಮಭೂಷಣ್ ಪ್ರಶಸ್ತಿ ನೀಡಲಾಗಿತ್ತು. ಸದ್ಯ 2025ರಲ್ಲಿ ಇದೀಗ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ