/newsfirstlive-kannada/media/media_files/2025/09/23/mohanlal-2025-09-23-18-43-46.jpg)
ಬಹು ನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ ದೃಶ್ಯಂ ಸಿನಿಮಾದ ಎರಡು ಭಾಗಗಳು ಕೂಡ ಈಗಾಗಲೇ ಫುಲ್ ಹಿಟ್ ಆಗಿದ್ದವು. ಎರಡು ಭಾಗಗಳಲ್ಲಿ ತೆರೆ ಕಂಡಿದ್ದ ಈ ಸಿನಿಮಾ ಮೂರನೇ ಭಾಗ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಯಾರಿಗೂ ಅಧಿಕೃತವಾದ ಮಾಹಿತಿ ಇರಲಿಲ್ಲ. ಇದೀಗ ಸ್ವತಹ ಮಾಲಿವುಡ್​ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಬಿಗ್ ಅಪ್​ಡೇಟ್ ಕೊಟ್ಟಿದ್ದಾರೆ.
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಅಭಿನಯ ಮಾಡಿದ ಹಿಟ್ ಸಿನಿಮಾಗಳಲ್ಲಿ ಕ್ರೈಮ್ ಥ್ರಿಲ್ಲರ್ ದೃಶ್ಯಂ ಸಿನಿಮಾ ಕೂಡ ಒಂದಾಗಿದೆ. ಕುಟುಂಬ ರಕ್ಷಣೆಗಾಗಿ ತಂದೆ ಮಾಡುವ ಸನ್ನಿವೇಶಗಳು ಸಿನಿಮಾದ ಮೂಲವಾಗಿವೆ. ಸಿನಿ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ದೃಶ್ಯಂ ಫ್ಯಾಮಿಲಿ ಪ್ರೇಕ್ಷರನ್ನು ಥಿಯೇಟರ್​ಗೆ ಬರುವಂತೆ ಮಾಡಿತ್ತು.
ಇದನ್ನೂ ಓದಿ: 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಶಾರುಖ್​ ಖಾನ್, ವಿಕ್ರಾಂತ್ ಮ್ಯಾಸಿ, ರಾಣಿ ಮುಖರ್ಜಿ
ನಿರ್ದೇಶಕ ಜೀತು ಜೋಸೆಫ್ ಡೈರೆಕ್ಷನ್​ನಲ್ಲಿ 2013ರಲ್ಲಿ ದೃಶ್ಯಂ ಸಿನಿಮಾ ಬೆಳ್ಳಿ ತೆರೆಗೆ ಅಪ್ಪಳಿಸಿತ್ತು. 2ನೇ ಭಾಗ 2021ರಲ್ಲಿ ರಿಲೀಸ್ ಆಗಿತ್ತು. ಸದ್ಯ 2025ರಲ್ಲಿ ದೃಶ್ಯಂ-3 ಮೂವಿ ಸೆಟ್ಟೇರಿದೆ. ಇತ್ತೀಚೆಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಣೆಯಿಂದ ಫ್ಯಾನ್ಸ್​ ಸಂತಸಕ್ಕೆ ಕಾರಣವಾಗಿರುವ ಮೋಹನ್ ಲಾಲ್ ಅವರು ದೃಶ್ಯಂ-3 ಸಿನಿಮಾ ಸೆಟ್ಟೇರಿದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 22 ರಂದು ಮುಹೂರ್ತ ನೆರವೇರಿದೆ.
ಶೂಟಿಂಗ್ ಆರಂಭವಾಗಲಿದ್ದು ದೃಶ್ಯಂ-3 ಸಿನಿಮಾಕ್ಕೆ ಆಶೀರ್ವಾದ ಸಿನಿಮಾಸ್​ನವರು ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಮೋಹನ್​​ ಲಾಲ್​​ ಅವರಿಗೆ ಮತ್ತೆ ನಿರ್ದೇಶಕ ಜೀತು ಜೋಸೆಫ್ ಅವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕ್ರೈಮ್ ಥ್ರಿಲ್ಲಿಂಗ್ ಸಿನಿಮಾವಾಗಿದ್ದ ಇದು ಎಲ್ಲ ಭಾಷೆಗಳಲ್ಲೂ ಸೂಪರ್ ಹಿಟ್ ಆಗಿತ್ತು. ಸ್ಯಾಂಡಲ್​ವುಡ್​ನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಭಿನಯ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ