/newsfirstlive-kannada/media/media_files/2025/09/25/darshan-chandru-2025-09-25-16-17-08.jpg)
ನಟ ದರ್ಶನ್ Photograph: (ನಟ ದರ್ಶನ್)
ಮೈಸೂರು: ಸ್ನೇಹಿತನ ಬಿಸಿನೆಸ್​ಗೆ ನಟ ದರ್ಶನ್​ (Darshan)ಅಕ್ಕನ ಮಗ ಚಂದ್ರುಕುಮಾರ್ (chandrukumar)ಕೈ ಜೋಡಿಸಿದ್ದಾರೆ. ಮೈಸೂರಿನ ದಸರಾ ಆಹಾರ ಮೇಳದಲ್ಲಿ ಚಂದ್ರುಕುಮಾರ್ ಸ್ನೇಹಿತ ತೆರೆದಿರುವ ಸ್ಟಾಲ್​ಗೆ ಮಾವ ಅಂದರೆ ದರ್ಶನ್​ನ ಡೆವಿಲ್ ಸಿನಿಮಾದ ಸಾಂಗ್ ಅನ್ನೇ ಬಳಸಿಕೊಂಡು ಸ್ಟಾಲ್​ಗೆ ಹೆಸರಿಡಲಾಗಿದೆ. ಸ್ಟಾಲ್​ ಹೆಸರು ಏನಾಪ್ಪ ಅಂದ್ರೆ ನೆಮ್ಮದಿಯಾಗಿ ಊಟ ಮಾಡಿ ಎಂದು ಹೆಸರಿಡಲಾಗಿದೆ.
ಚಂದ್ರುಕುಮಾರ್​ ಸ್ವತಃ ತಾನೇ ಮುಂದೆ ನಿಂತು ಸ್ಟಾಲ್​ ನೋಡಿಕೊಳ್ತಿದ್ದಾರೆ. ಮಾವನ ಡೆವಿಲ್ ಸಿನಿಮಾದ ಸಾಂಗ್ ಅನ್ನೇ ಬಳಸಿಕೊಂಡು ಸ್ಟಾಲ್​ಗೆ ಹೆಸರಿಟ್ಟಿದ್ದಾರೆ. ದರ್ಶನ್ ತಾಯಿ ಮೀನಾ ತೂಗುದೀಪ್ ಸ್ಟಾಲ್ ಉದ್ಘಾಟನೆ ಮಾಡಿದ್ದರು.ಚಂದ್ರುಕುಮಾರ್​ ಸ್ನೇಹಿತ ಕಿಶೋರ್, ದರ್ಶನ್ ಕುಟುಂಬಕ್ಕೆ ಹತ್ತಿರವಾಗಿದ್ದು, ಈತನ ಈ ಬಿಸಿನೆಸ್​ಗೆ ದರ್ಶನ್ ಅಕ್ಕನ ಮಗನಾದ ಚಂದ್ರು ಕುಮಾರ್​ ಸಹಾಯ ಮಾಡಿದ್ದರು. ನೆಮ್ಮದಿಯಾಗಿ ಊಟ ಮಾಡಿ ಸ್ಟಾಲ್​ನಲ್ಲಿ ಆಂಧ್ರ ಪಲಾವ್, ಚಿಕನ್ ಮಟನ್ ಪಲಾವ್ ಆಹಾರ ಪ್ರಿಯರನ್ನ ಸೆಳೆಯುತ್ತಿದೆ. ದರ್ಶನ್ ಅಕ್ಕನ ಮಗನೊಂದಿಗೆ ಸೆಲ್ಪಿಗಾಗಿ ಜನರು ಮುಗಿಬಿದ್ದಿದ್ದಾರೆ.
ಇನ್ನು, ಈ ಬಗ್ಗೆ ಚಂದ್ರುಕುಮಾರ್ ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ್ದು ಫ್ರೆಂಡ್‌ಗೆ ಸಪೋರ್ಟ್ ಆಗಿ ನಿಂತಿದ್ದೇನೆ. ನಮ್ಮ ಮಾವನ ಸಿನಿಮಾದ ಸಾಂಗ್ ರಿಲೀಸ್ ಆಗಿದೆ.ಇದ್ರೆ ನೆಮ್ಮದಿಯಾಗಿರಬೇಕು ಸಾಂಗ್ ಟೈಟಲ್ ತಕೊಂಡು ಸ್ಟಾಲ್ ಗೆ ಹೆಸರಿಟ್ಟಿದ್ದೇವೆ. ನೆಮ್ಮದಿಯಾಗಿ ಊಟ ಮಾಡಿ ಅಂತ ಹೆಸರಿಟ್ಟಿದ್ದೇವೆ ಎಂದು ಹೇಳಿದ್ದಾರೆ. ಜನರು ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ವಿಚಾರಕ್ಕೆ ಅದು ನಮ್ಮ ಮಾವನ ಮೇಲಿರುವ ಪ್ರೀತಿಗೆ ಜನರು ಸೆಲ್ಫಿ ಫೋಟೋಗೆ ಬರ್ತಿದ್ದಾರೆ ಎಂದಿದ್ದಾರೆ.
ಇತ್ತ ಸ್ನೇಹಿತ ಕಿಶೋರ್ ಕೂಡ ಮಾತನಾಡಿ ಮೀನಾ ತೂಗುದೀಪರವರು ಹೋಟೇಲ್ ಉದ್ಘಾಟನೆ ಮಾಡಿದ್ದು ಖುಷಿಯಿದೆ. ಸ್ನೇಹಿತ ಚಂದು ದೊಡ್ಡ ವ್ಯಕ್ತಿಯಾದ್ರು ಡೌಂಟ್ ಟು ಅರ್ತ್ ರೀತಿ ಇದ್ದಾನೆ ಎಂದು ಚಂದ್ರು ಸ್ನೇಹಿತ ಕಿಶೋರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪೊಲೀಸರಿಗೆ 2 ಕಂಪ್ಲೇಂಟ್ ಕೊಟ್ಟು , ಹೇಳಿಕೆ ನೀಡದೇ ಸೈಲೆಂಟ್ ಆದ ವಿಜಯಲಕ್ಷ್ಮಿ ದರ್ಶನ್: ಪೊಲೀಸರು ಈಗ ಏನ್ ಮಾಡ್ತಾರೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ