/newsfirstlive-kannada/media/media_files/2025/10/15/niveditha_gowda-2025-10-15-16-20-06.jpg)
ಬೆಂಗಳೂರು: ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಅವರ ಮಾಜಿ ಹೆಂಡತಿ ನಟಿ ನಿವೇದಿತಾ ಗೌಡ ಅವರು ಇದೇ ಮೊದಲ ಬಾರಿಗೆ ತಮ್ಮ ಎರಡನೇ ಮದುವೆ ಕುರಿತು ಮಾತನಾಡಿದ್ದಾರೆ. ಮದುವೆ ಎಂದರೆ ಭಯ ಆಗುತ್ತಿದೆ ಎಂದು ಹೇಳಿದ್ದಾರೆ.
ನ್ಯೂಸ್​ ಫಸ್ಟ್​ ಜೊತೆ ಮಾತನಾಡಿರುವ ನಟಿ ನಿವೇದಿತಾ ಗೌಡ ಅವರು, ಈಗ ಮದುವೆ ಎಂದರೆ ಭಯ ಆಗುತ್ತಿದೆ. ಮನೆಯಲ್ಲಿ ನನ್ನ ಮೇಲೆ ಏನು ಒತ್ತಡ ಹಾಕುತ್ತಿಲ್ಲ. ಎರಡನೇ ಮದುವೆ ಆಗಬೇಕು ಅನಿಸಿದಾಗ ಆಗುತ್ತೇನೆ. ಆದರೂ ಮದುವೆ ಎಂದರೆ ಭಯ ಇದೆ. ನನಗೆ ಸರಿ ಅನಿಸಿದ ಹುಡುಗ ಸಿಗುವ ತನಕ ಮದುವೆ ಆಗಲ್ಲ. ಒಳ್ಳೆಯ ಹುಡುಗ ಸಿಕ್ಕರೇ ಖಂಡಿತ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ.
ಒಳ್ಳೆಯ ಹುಡುಗ ಆಗಿರಬೇಕು, ನನಗೆ ಅವರು ಗೌರವ ಕೊಟ್ಟರೆ, ನಾನು ಅವರಿಗೆ ಗೌರವ ಕೊಡಬೇಕು. ಅಂದರೆ ಪರಸ್ಪರ ಗೌರವ ಕೊಡುವಂತಹ ಹುಡುಗ ಬೇಕು. ಜೀವನ ಖುಷಿಯಾಗಿ ಇರಬೇಕು. ಅಂತಹ ಟೈಂ ಬಂದಾಗ ಮದುವೆ ಆಗುತ್ತೇನೆ. ಆದರೆ ಈಗ ಸಿನಿಮಾ ಕಡೆಗೆ ಮಾತ್ರ ನನ್ನ ಗಮನ ಹರಿಸುತ್ತೇನೆ. ಚಂದನ್ ಶೆಟ್ಟಿ ಜೊತೆ ಸಂಪರ್ಕ ಇಲ್ಲ. ಯಾವುದು ಮಾತುಕತೆಗಳು ಕೂಡ ಇಲ್ಲ ಎಂದು ನಿವೇದಿತಾ ಹೇಳಿದ್ದಾರೆ.
ಇನ್ನು ಇಷ್ಟು ದಿನ ಕಿರುತೆರೆಯಲ್ಲಿ ಎಲ್ಲರನ್ನು ನಗಿಸಿದ್ದ ನಿವೇದಿತಾ ಗೌಡ ಅವರು ಸ್ಯಾಂಡಲ್​ವುಡ್​ನ ಬೆಳ್ಳಿತೆರೆಗೆ ಎಂಟ್ರಿಯಾಗಿದ್ದಾರೆ. ಐ ಆ್ಯಮ್ ಗಾಡ್ ಎನ್ನುವ ಸಿನಿಮಾದಿಂದ ಕನ್ನಡ ಸಿನಿ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಹಾಡೊಂದರಲ್ಲಿ ನಟ ದಿಗಂತ್ ಜೊತೆಗೆ ನಿವೇದಿತಾ ಅವರು ಸೊಂಟ ಬಳುಕಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ