/newsfirstlive-kannada/media/media_files/2025/10/15/bng_doctor-2025-10-15-15-44-25.jpg)
ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್​ ತನ್ನ ಪತ್ನಿಯನ್ನು ಕೊಲೆ ಮಾಡಿರುವುದು 6 ತಿಂಗಳ ಬಳಿಕ ಎಫ್​ಎಸ್​​ಎಲ್ ವರದಿ ಮೂಲಕ ಬಹಿರಂಗಗೊಂಡಿದೆ. ಸದ್ಯ ಈ ಸಂಬಂಧ ಬೆಂಗಳೂರು ಪೊಲೀಸರು ಡಾ. ಮಹೇಂದ್ರ ರೆಡ್ಡಿಯನ್ನು ಮಣಿಪಾಲದಲ್ಲಿ ಅರೆಸ್ಟ್ ಮಾಡಿದ್ದಾರೆ.
ಡಾ ಮಹೇಂದ್ರ ರೆಡ್ಡಿ ಹಾಗೂ ಕೃತಿಕಾ ರೆಡ್ಡಿ ಇಬ್ಬರು 2024ರ ಮೇ 26ರಂದು ಎರಡು ಕುಟುಂಬಗಳ ಒಪ್ಪಂದಂತೆ ಅದ್ಧೂರಿಯಾಗಿ ಮದುವೆಯಾಗಿದ್ದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೃತಿಕಾ ಡೆರ್ಮೆಟಾಲಜಿಸ್ಟ್ ಆಗಿದ್ದರೇ, ಈಕೆಯ ಗಂಡ ಡಾ ಮಹೇಂದ್ರ ರೆಡ್ಡಿ ಜನರಲ್ ಸರ್ಜನ್ ಆಗಿದ್ದರು. ಮೃತ ಕೃತಿಕಾಗೆ ಅಜೀರ್ಣತೆ, ಗ್ಯಾಸ್ಟ್ರಿಕ್ ಹಾಗೂ ಲೋ ಶುಗರ್ ಸಮಸ್ಯೆ ಇತ್ತು. ಆದರೆ ಇದನ್ನು ಮುಚ್ಚಿಟ್ಟು ಮನೆಯವರು ಮದುವೆ ಮಾಡಿದ್ದರು ಎನ್ನುವ ಆರೋಪ ಇದೆ.
ಮದುವೆಯಾದ ಬಳಿಕ ಡಾಕ್ಟರ್ ಗಂಡ ಇದನ್ನು ತಿಳಿದುಕೊಂಡಿದ್ದನು. ಕೃತಿಕಾಗೆ ನಿತ್ಯ ವಾಂತಿ ಹಾಗೂ ಇತರೆ ಅನಾರೋಗ್ಯದ ಸಮಸ್ಯೆಗಳು ಎದುರಾಗುತ್ತಿದ್ದವು. ಇದೇ ಕಾರಣಕ್ಕೆ ಆರೋಪಿ ಮಹೇಂದ್ರ ರೆಡ್ಡಿ ಕೊಲೆಗೆ ಸಂಚು ರೂಪಿಸಿದ್ದನು. ಹನ್ನೊಂದು ತಿಂಗಳ ನಂತರ ಪ್ಲಾನ್ ಮಾಡಿ, ಕುಟುಂಬಸ್ಥರು ಇದು ನ್ಯಾಚುರಲ್ ಡೆತ್ ಅಂತ ನಂಬುವಂತೆ ಕೊಲೆ ಮಾಡಿದ್ದನು.
ಕೃತಿಕಾ ಮನೆಯಲ್ಲಿ ಹುಷಾರಿಲ್ಲದೆ ಮಲಗುತ್ತಿದ್ದಳು. ತಂದೆ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದ ವೇಳೆ ಅಲ್ಲಿಗೆ ಗಂಡ ಬಂದಿದ್ದನು. ಬಳಿಕ ಹೆಂಡತಿಗೆ ಐವಿ ಇಂಜೆಕ್ಷನ್ ಮೂಲಕ ಒಂದಷ್ಟು ಮೆಡಿಸನ್ ನೀಡಿದ್ದನು. ಇವುಗಳನ್ನು 2 ದಿನ ನಿರಂತರ ನೀಡಲಾಗಿತ್ತು. ಬಳಿಕ 2025ರ ಏಪ್ರಿಲ್ 23 ರಂದು ಕೃತಿಕಾಗೆ ಮೂರ್ಚೆ ತಪ್ಪಿದ್ದರಿಂದ ಪೋಷಕರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಗ ವೈದ್ಯರು ಆಸ್ಪತ್ರೆಗೆ ಬರುವ ಮೊದಲೇ ಜೀವ ಹೋಗಿದೆ ಎಂದು ಹೇಳಿದ್ದರು.
ಇದಾದ ಮೇಲೆ ಅಸ್ಪತ್ರೆಯಿಂದ ಡೆತ್ ಮೆಮೊ ಬಂದಿತ್ತು. ಡೆತ್ ಮೆಮೊ ಬಂದಿದ್ದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಭೇಟಿ ನೀಡಿ ದೂರು ನೀಡುವಂತೆ ಆಕೆಯ ಕುಟುಂಬಕ್ಕೆ ತಿಳಿಸಿದ್ದರು. ಆದ್ರೆ ಕುಟುಂಬಸ್ಥರು ಸಹ ದೂರು ನೀಡಲು ಹಿಂದೇಟು ಹಾಕಿದ್ದರು. ಈ ನಡುವೆ ಅವರಿಂದ ದೂರು ಪಡೆದು ಮಾರತಹಳ್ಳಿ ಪೊಲೀಸರು ಯುಡಿಆರ್ ದಾಖಲು ಮಾಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹದ ಸ್ಯಾಂಪಲ್ ಪಡೆದು ಎಫ್ಎಸ್​ಎಲ್​ಗೆ ಕಳುಹಿಸಿದ್ದರು.
ಸದ್ಯ ಎಫ್​​ಎಸ್​ಎಲ್ ವರದಿ ಬಂದಿದ್ದು ವರದಿಯಲ್ಲಿ ಮೃತಳ ದೇಹದಲ್ಲಿ ಅನಸ್ತೇಶಿಯಾ ಅಂಶಗಳು ಕಂಡುಬಂದಿವೆ. ಸಾವಿಗೆ ಇದೇ ಅನಸ್ತೇಶಿಯಾ ಅಂಶಗಳೇ ಕಾರಣ ಎಂದು ವರದಿ ನೀಡಲಾಗಿದೆ. ಈ ವರದಿ ಆಧರಿಸಿ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸೂರ್ಯಕಾಂತಿ ನೋಡಲು ಎಷ್ಟು ಚಂದವೋ.. ನಮ್ಮ ಆರೋಗ್ಯಕ್ಕೂ ಅಷ್ಟೇ ಉಪಯೋಗ..!
ಆರು ತಿಂಗಳ ಬಳಿಕ ಯುಡಿಆರ್ ಆಗಿದ್ದ ಪ್ರಕರಣ ಇದೀಗ ಕೊಲೆ ಎಂದು ಕೇಸ್ ಪೊಲೀಸರು ದಾಖಲು ಮಾಡಿದ್ದಾರೆ. ಬೆಂಗಳೂರಿನಿಂದ ಮಣಿಪಾಲಕ್ಕೆ ಹೋಗಿದ್ದ ಮಹೇಂದ್ರ ರೆಡ್ಡಿಯನ್ನು ಪತ್ನಿ ಹತ್ಯೆ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ