/newsfirstlive-kannada/media/media_files/2025/10/11/sunflower-2025-10-11-13-56-10.jpg)
ಹೊಲದಲ್ಲಿ ಸೂರ್ಯಕಾಂತಿ, ಸೂರ್ಯನ ನೋಡುತ್ತಿರುತ್ತೋ ಅಥವಾ ಸೂರ್ಯನೇ ಸೂರ್ಯಕಾಂತಿನ ನೋಡುತ್ತಿರುತ್ತಾನೋ ಎನ್ನುವ ಕುತೂಹಲ ಈಗಲೂ ಎಲ್ಲರಲ್ಲೂ ಇದ್ದೇ ಇದೆ. ಏಕೆಂದರೆ ಆಕಾಶದಲ್ಲಿ ಹೊಳೆಯುವ ಸೂರ್ಯ ಭೂಮಿನ ಮೇಲಿನ ಸೂರ್ಯಕಾಂತಿ ಪರಸ್ಪರ ನೋಡಿಕೊಳ್ಳುವುದು ಹಾಗೇ ಇರುತ್ತದೆ. ಸದ್ಯ ಇದನ್ನು ಪಕ್ಕಕ್ಕಿಟ್ಟು, ಸೂರ್ಯಕಾಂತಿ ಬೀಜಗಳಿಂದ ನಮಗೆಲ್ಲಾ ಏನೆಲ್ಲಾ ಉಪಯೋಗ ಇದೆ ಎಂದು ಸ್ವಲ್ಪ ತಿಳಿದುಕೊಳ್ಳೋಣ.
ಸೂರ್ಯಕಾಂತಿ ಬೀಜಗಳಲ್ಲಿ ಹಲವಾರು ಆರೋಗ್ಯಕರವಾದ ಅಂಶಗಳು ಅಡಗಿವೆ. ಇವುಗಳನ್ನು ತಿನ್ನುವುದರಿಂದ ನಮಗೆ ಹಲವಾರು ಪ್ರಯೋಜನಾಗಳು ಲಭಿಸುತ್ತವೆ. ಇವುಗಳಿಂದ ಹೃದಯದ ಆರೋಗ್ಯ ಸುಧಾರಣೆ, ಮೂಳೆಗಳ ಬಲವರ್ಧನೆ, ಚರ್ಮದ ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿ ಅಧಿಕ ಮಾಡುವುದು ಸೇರಿದಂತೆ ಇನ್ನು ಹಲವಾರು ಉಪಯೋಗಗಳು ಇವೆ. ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ E, ಮೆಗ್ನೀಷಿಯಮ್, ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು ಹಾಗೂ ಫೈಟೊಸ್ಟೆರಾಲ್​ಗಳಂತ (Phytosterols) ಪೋಷಕಾಂಶಗಳು ಸಮೃದ್ಧವಾಗಿವೆ.
ಸೂರ್ಯಕಾಂತಿ ಬೀಜಗಳಲ್ಲಿರುವ ವಿಟಮಿನ್ ಬಿ6, ಐರನ್, ಸೆಲೆನಿಯಂ ಇವು ಕೂದಲು ಉದುರದಂತೆ ನೋಡಿಕೊಳ್ಳುತ್ತವೆ. ಕೂದಲುಗಳು ಒತ್ತೊತ್ತಾಗಿ ಬೆಳೆಯುವಂತೆ, ಬಲಿಷ್ಠವಾಗುವಂತೆ ಬದಲಾವಣೆ ಮಾಡುತ್ತವೆ. ಈ ಬೀಜಗಳನ್ನು ತಿನ್ನುತ್ತಿದ್ರೆ ಬೇಗ ಹಸಿವು ಆಗುವುದಿಲ್ಲ. ಇದರಿಂದ ದೇಹದ ತೂಕ ಕಡಿಮೆಯಾಗಲು ಸಹಾಕವಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ನಿಮಗೆ ಜ್ಞಾಪಕ ಶಕ್ತಿ ಕಾಡುತ್ತಿದೆಯೇ.. ಇದಕ್ಕೆ ಮದ್ದು ಎಂದರೆ ಹಸಿ ಕೊಬ್ಬರಿ ಮಾತ್ರ..!
ಇಷ್ಟೇ ಅಲ್ಲದೇ ಇವುಗಳಿಂದ ನಮ್ಮ ದೇಹದ ಮೂಳೆಗಳು ಬಲವಾಗಿ ಆರೋಗ್ಯಕರವಾಗಿ ಇರುತ್ತವೆ. ಫೈಬರ್​, ಪ್ರೋಟಿನ್​ ಇವುಗಳಲ್ಲಿ ಅಧಿಕವಾಗಿರುವುದರಿಂದ ರಕ್ತದಲ್ಲಿ ಶುಗರ್​ ಲೆವೆಲ್​ ಅನ್ನು ನಿಯಂತ್ರಣದಲ್ಲಿ ಇಡಬಹುದು. ಹೈಬಿಪಿ ಇರುವವರು ಈ ಬೀಜಗಳನ್ನು ತಿಂದರೆ ಎಷ್ಟೋ ಉಪಯೋಗವಿದೆ. ಮೆಗ್ನಿಷಿಯಂ ಕೂಡ ಹೆಚ್ಚಿದ್ದು ಮೆದುಳಿನ ಕೆಲಸ ಚುರುಗೊಳಿಸುತ್ತದೆ. ಇವುಗಳಲ್ಲಿನ ವಿಟಮಿನ್ ಇ ಚರ್ಮವನ್ನು ಫ್ರೀ ರಾಡಿಕಲ್ಸ್​ನಿಂದ ನಷ್ಟವಾಗುವುದನ್ನು ಕಾಪಾಡುತ್ತದೆ. ಇದರಿಂದ ಚರ್ಮ ಮೃದುವಾಗಿ, ಕಾಂತಿಮಯವಾಗಿ ಬದಲಾಗುತ್ತದೆ.
ಸೂರ್ಯಕಾಂತಿ ಬೀಜಗಳಲ್ಲಿರುವ ಮೆಗ್ನೀಷಿಯಂ ನಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಇದರ ಜೊತೆ ವಿಟಮಿನ್ -ಇ ಹಾಗೂ ಫೈಟೊಸ್ಟೆರಾಲ್​ಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಿ ಅಪಧಮನಿಕಾಠಿಣ್ಯವನ್ನು ತಡೆಯಲು ಸಹಾಯಕವಾಗಿವೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ