/newsfirstlive-kannada/media/media_files/2025/10/10/health_coconuts-2025-10-10-17-06-45.jpg)
ಶಾಲಾ ಮಕ್ಕಳು ಸೇರಿದಂತೆ ಎಲ್ಲರಿಗೂ ಜ್ಞಾಪಕ ಶಕ್ತಿ ಕಾಡುತ್ತಿರುತ್ತದೆ. ಎಷ್ಟೋ ಬಾರಿ ಕೆಲವೊಂದು ಮುಖ್ಯವಾದ ಅಂಶಗಳನ್ನು ಮರೆತು ಬಿಡುತ್ತೇವೆ. ತಲೆಯಲ್ಲಿ ಇದ್ದರೂ ನೆನಪಿಗೆ ಬಾರದೇ ಪೇಚಿಗೆ ಸಿಲುಕಿಕೊಂಡಿಬಿಡುತ್ತೇವೆ. ಸದ್ಯ ಜ್ಞಾಪಕ ಶಕ್ತಿ ಹೆಚ್ಚಾಗಬೇಕು ಎಂದರೆ, ಆರೋಗ್ಯ ಚೆನ್ನಾಗಿರಬೇಕು ಎಂದರೆ, ನಾವು ಶಕ್ತಿಯುತವಾಗಿ ಇರಬೇಕು ಎಂದರೆ ಹಸಿ ಕೊಬ್ಬರಿ ತಿಂದರೆ ಸಾಕು. ಇದರಲ್ಲಿ ಯಾವ್ಯಾವ ಪೋಷಕಾಂಶಗಳು ಅಡಗಿವೆ ಗೊತ್ತಾ?.
ಕೊಬ್ಬರಿ ಎಂದು ತೆಗೆದು ಹಾಕಬೇಡಿ. 100 ಗ್ರಾಂ ಹಸಿ ಕೊಬ್ಬರಿಯಲ್ಲಿ 354 ಕ್ಯಾಲೋರಿ ಶಕ್ತಿ ಇರುತ್ತದೆ. ವಿಟಮಿನ್ಸ್​, ಅಮೈಲೋ ಆಮ್ಲಾ, ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನಿಷಿಯಂ, ಮ್ಯಾಂಗನಿಸ್​, ಕಾಪರ್ ಸೇರಿಂದತೆ ಇನ್ನು ಅನೇಕ ಖನಿಜಾಂಶಗಳು ಇದರಲ್ಲಿ ಅಡಗಿವೆ. ದೇಹಕ್ಕೆ ಎಳೆನೀರು ಎಷ್ಟು ಆರೋಗ್ಯಕರ ಆಗಿರುತ್ತೋ ಅಷ್ಟೇ ಅದರ ಕೊಬ್ಬರಿ ಕೂಡ ಆರೋಗ್ಯದ ಗಣಿಯಾಗಿದೆ.
ನಮ್ಮ ದೇಹದ ತೂಕ ಇಳಿಸಲು ಹಾಗೂ ಜೀರ್ಣಕ್ರಿಯೆಗೂ ಕೂಡ ಕೊಬ್ಬರಿ ಸಹಾಯವಾಗುತ್ತದೆ. ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುವಲ್ಲಿ ಇದರ ಪ್ರಭಾವ ಅಧಿಕ ಇರುತ್ತದೆ. ಇದರಲ್ಲಿರುವ ಫೈಬರ್​ ಅಂಶ ಜೀರ್ಣ ಕ್ರಿಯೆ ಸುಲಭಗೊಳಿಸಿ, ಮಲಬದ್ಧತೆ ನಿವಾರಣೆ ಮಾಡುತ್ತದೆ. ಕರುಳಿನ ಆರೋಗ್ಯ ಕಾಪಾಡುತ್ತದೆ. ಇದರಲ್ಲಿರುವ ಮಧ್ಯಮ ಸರಪಳಿ ಟ್ರೈಗ್ಲಿಜರೈಡ್ಸ್ (Medium Chain Triglycerides)​ ಎನ್ನುವ ಕೊಬ್ಬು ಶಕ್ತಿಯನ್ನ ಒದಗಿಸುತ್ತದೆ.
ಹೆಚ್ಚು ಜನರು ಕೊಬ್ಬರಿಯನ್ನು ಮಧ್ಯಾಹ್ನ ಸ್ನ್ಯಾಕ್ಸ್ ಮಾದರಿಯಲ್ಲಿ ಸೇವನೆ ಮಾಡುತ್ತಾರೆ. ಕೊಬ್ಬರಿಯಲ್ಲಿರುವ ವಿಟಮಿನ್ಸ್​, ಖನಿಜಗಳು ಹಾಗೂ ಆಂಟಿಆಕ್ಸಿಡೆಂಟ್ಸ್ (Antioxidants)​ ಹೆಚ್ಚು ಇರುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಕೊಬ್ಬರಿಯಲ್ಲಿರುವ ಆರೋಗ್ಯಕಾರಿ ಕೊಬ್ಬು ಹೃದಯಕ್ಕೆ ತುಂಬಾ ಒಳ್ಳೆಯದು. ಇದರ ಜೊತೆಗೆ ದೇಹದ ಮೂಳೆಗಳು, ಹಲ್ಲುಗಳು ಆರೋಗ್ಯವಾಗಿರುತ್ತವೆ. ಮಧುಮೇಹ ಕೂಡ ನಿಯಂತ್ರಣದಲ್ಲಿಡುತ್ತದೆ ಈ ಹಸಿ ಕೊಬ್ಬರಿ.
ದಕ್ಷಿಣ ಭಾರತದ ಹಲವಾರು ಭಾಗಗಳಲ್ಲಿ ಅಡುಗೆಯಲ್ಲಿ ಸಾಮಾನ್ಯವಾಗಿ ಕೊಬ್ಬರಿ ಬಳಕೆ ಮಾಡುತ್ತಾರೆ. ಬೆಂಗಳೂರಲ್ಲಿ ಕೊಬ್ಬರಿ ಇಲ್ಲದೇ ಅಡುಗೆ ಇರಲ್ಲ. ಕೊಬ್ಬರಿಯಿಂದ ಕೊಬ್ಬರಿಎಣ್ಣೆ ಕೂಡ ತೆಗೆಯಬಹುದು. ಈ ಎಣ್ಣೆ ತಲೆಗೂದಲು ಹಾಗೂ ಚರ್ಮವನ್ನು ಆರೋಗ್ಯವಾಗಿರುತ್ತವೆ ಕಾಪಾಡುತ್ತವೆ. ಇಷ್ಟೇ ಅಲ್ಲದೇ ಮೂತ್ರ ಸಮಸ್ಯೆಗಳನ್ನು ಕೊಬ್ಬರಿ ನಿವಾರಣೆ ಮಾಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ