/newsfirstlive-kannada/media/media_files/2025/10/07/fruets_health-2025-10-07-18-58-52.jpg)
ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಹಣ್ಣುಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ವೈದ್ಯರು ಹೆಚ್ಚು ಬಾರಿ ಹಣ್ಣುಗಳನ್ನು ತಿನ್ನುವಂತೆ ನಿಮಗೆ ಈಗಾಗಲೇ ಸಲಹೆ ನೀಡಿರಬಹುದು. ಏಕೆಂದರೆ ಹಣ್ಣುಗಳಲ್ಲಿ ಅಷ್ಟೊಂದು ಪೋಷಕಾಂಶಗಳು, ಜೀವಸತ್ವಗಳು ಇರುತ್ತವೆ. ದೇಹದಲ್ಲಿ ರಕ್ತ ಹೆಚ್ಚು ಆಗಲು ಹಣ್ಣುಗಳ ಸೇವನೆ ಬಹುಮುಖ್ಯ. ಈಗೀಗ ಹಣ್ಣುಗಳ ಜ್ಯೂಸ್​​ ಕೂಡ ಜನರು ಹೆಚ್ಚು ಇಷ್ಟ ಪಡುತ್ತಿದ್ದಾರೆ. ಹಾಗಾದರೆ ನಮ್ಮ ಆರೋಗ್ಯಕ್ಕೆ ಹಣ್ಣುಗಳಿಂದಲೋ ಅಥವಾ ಹಣ್ಣಿನ ಜ್ಯೂಸ್​ನಿಂದಲೋ ಹೆಚ್ಚು ಬೆನಿಫಿಟ್ಸ್​ ಇರೋದು ಎನ್ನುವ ಮಾಹಿತಿ ಇಲ್ಲಿದೆ.
ವೈದ್ಯರು ರೋಗಿಗಳಿಗೆ ಸಲಹೆ ನೀಡುವಾಗ ಹಣ್ಣಿನ ಜ್ಯೂಸ್​ಗಿಂತ ಹೆಚ್ಚು ಹಣ್ಣುಗಳನ್ನೇ ತಿನ್ನುವಂತೆ ಹೇಳುತ್ತಾರೆ. ಏಕೆಂದರೆ ಹಣ್ಣು ನೈಸರ್ಗಿಕವಾಗಿಯೇ ಆರೋಗ್ಯಕ್ಕೆ ಅತ್ಯುತ್ತಮವಾದದ್ದು. ಆದರೆ ಅದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಅಷ್ಟೇನೂ ಫಲಕಾರಿ ಆಗಿರುವುದಿಲ್ಲ. ಹಣ್ಣುಗಳು ಆರೋಗ್ಯಕ್ಕೆ ಹೇಗೆ ಉತ್ತಮ?.
ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಅಧಿಕ ಮಟ್ಟದ ಫೈಬರ್ ದೊರೆಯುತ್ತದೆ. ಫೈಬರ್ ಇರುವುದರಿಂದ ಅಜೀರ್ಣ, ಗ್ಯಾಸ್, ಮಲಬದ್ಧತೆ ನಿವಾರಣೆ ಆಗುತ್ತವೆ. ಜ್ಯೂಸ್ ಕುಡಿಯುವಾಗ ಪಾಕೆಟ್​ನಲ್ಲಿ ಬರುವಂತವುಗಳನ್ನ ಸೇವನೆ ಮಾಡಲೇಬಾರದು. ಏಕೆಂದರೆ ಅದಕ್ಕೆ ಯಾವ ಸಕ್ಕರೆ, ಯಾವ ನೀರು ಬಳಕೆ ಮಾಡಿರುತ್ತಾರೆ ಎನ್ನುವುದು ಸ್ಪಷ್ಟವಾಗಿ ಇರುವುದಿಲ್ಲ.
ಯಾವಾಗಲೇ ಆಗಲಿ ಹಣ್ಣನ್ನು ನೀರಿನ ಜೊತೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದಾಗ ಅದರ ನಾರಿನಂಶ ಹಾಗೂ ಪೋಷಕಾಂಶಗಳು ನಾಶ ಹೊಂದುತ್ತವೆ. ಹೀಗಾಗಿ ಕರುಳಿನ ಆರೋಗ್ಯ ಕಾಪಾಡಬೇಕು ಎಂದರೆ ಹಣ್ಣನ್ನು ನೇರವಾಗಿ ಸೇವನೆ ಮಾಡುವುದು ಉತ್ತಮ.
ಇದನ್ನೂ ಓದಿ: ಮಾವಿನ ಎಲೆಗಳ ಚಹಾ.. ನಿಮ್ಮ ಮೆದುಳಿನ ಆರೋಗ್ಯಕ್ಕೆ ಬೆಸ್ಟ್ ಆಯ್ಕೆ ಅಂದ್ರೆ ಟೀ..!
ಹಣ್ಣು ತಿನ್ನುವುದರಿಂದ ದೇಹದ ತೂಕ ಕಡಿಮೆ ಆಗುತ್ತದೆ. ಕಡಿಮೆ ಕ್ಯಾಲೋರಿಗಳೊಂದಿಗೆ ತೃಪ್ತಿಯನ್ನು ನೀಡುತ್ತದೆ. ಜ್ಯೂಸ್​ನಲ್ಲಿ ಸಕ್ಕರೆ ಸೇರಿಸಿದರೆ ಅದು ಆರೋಗ್ಯದ ಮೇಲೆ ಪರಿಣಾಮಕಾರಿ ಆಗುತ್ತದೆ. ಈ ಜ್ಯೂಸ್​ನಿಂದ ಹೊಟ್ಟೆ ಹಸಿಯುತ್ತದೆ.
ಹಣ್ಣುಗಳಲ್ಲಿ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಹಾಗೂ ಫೈಟೊಕೆಮಿಕಲ್ಸ್​ ಇರುತ್ತವೆ. ಹಣ್ಣುಗಳನ್ನ ತಿನ್ನುವುದರಿಂದ ಇವೆಲ್ಲಾ ನಮಗೆ ಲಭ್ಯವಾಗುತ್ತವೆ. ಹಣ್ಣನ್ನ ಜ್ಯೂಸ್ ಮಾಡಿದರೆ ಇವುಗಳು ನಾಶ ಹೊಂದುತ್ತವೆ. ಇದರಿಂದ ಯಾವಾಗಲೇ ಆಗಲಿ ಹಣ್ಣಿನ ಜ್ಯೂಸ್ ಮಾಡುವುದಕ್ಕಿಂತ ಹಣ್ಣನ್ನೇ ನೇರವಾಗಿ ತಿನ್ನುವುದು ರೂಢಿಸಿಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ