/newsfirstlive-kannada/media/media_files/2025/10/06/mango_leaf_tea-2025-10-06-18-43-52.jpg)
ಮಾವಿನ ಎಲೆಗಳಿಗೆ ನಮ್ಮ ಸಂಪ್ರದಾಯದಲ್ಲಿ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಹಬ್ಬ-ಹರಿದಿನಗಳಲ್ಲಿ, ಶುಭಕಾರ್ಯಗಳಲ್ಲಿ ಹಾಗೂ ವಿಶೇಷ ಪೂಜಾ ದಿನಗಳಲ್ಲಿ ಮಾವಿನ ಎಲೆಗಳಿಂದ ತೋರಣ ಮಾಡಿ ಬಾಗಿಲಿಗೆ ಕಟ್ಟಲಾಗುತ್ತದೆ. ಇದೇ ಎಲೆಗಳಲ್ಲಿ ಅನೇಕ ಔಷಧ ಗುಣಗಳು ಇವೆ. ಆಯುರ್ವೇದದಲ್ಲಿ ಸಂಪ್ರದಾಯ ವೈದ್ಯರು ಈ ಮಾವಿನ ಎಲೆಗಳನ್ನು ಅನೇಕ ವಿಧಗಳಲ್ಲಿ ಉಪಯೋಗ ಮಾಡಿದ್ದಾರೆ. ಹಾಗೇ ಈ ಎಲೆಗಳಿಂದ ತಯಾರಿಸಿ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಉಪಯೋಗಗಳು ಇವೆ.
ಮಾವಿನ ಎಲೆಗಳಲ್ಲಿ ಮ್ಯಾಂಗಿಫೆರಿನ್ (mangiferin), ಕ್ಯಾಟೆಚಿನ್‌ಗಳು, ಕ್ವೆರ್ಸೆಟಿನ್ (catechins) ನಂತಹ ಪಾಲಿಫಿನೋಲಿಕ್ (polyphenolic) ಸಂಯುಕ್ತಗಳಿಂದ ಸಮೃದ್ಧವಾಗಿವೆ. ಇವು ಮೆದುಳನ್ನು ಆಕ್ಸಿಡೇಟಿವ್​ ಒತ್ತಡದಿಂದ ರಕ್ಷಣೆ ಮಾಡುತ್ತವೆ. ಜ್ಞಾಪಕ ಶಕ್ತಿ ಕುಂದುವುದು, ಮಾನಸಿಕ ಸಮಸ್ಯೆ, ಅಲ್ಜಿಮರಸ್​ನಂತಹ ದೀರ್ಘಕಾಲದ ಕಾಯಿಲೆಗಳು ಮೆದುಳಿಗೆ ಬರುತ್ತವೆ. ಇಂತಹವುಗಳಿಂದ ಮಾವಿನ ಎಲೆಗಳು ರಕ್ಷಣೆ ನೀಡುತ್ತವೆ.
ಪಾಲಿಫಿನೋಲಿಕ್ ಸಂಯುಕ್ತಗಳು ಮೆದುಳಿನಲ್ಲಿ ಇರುವ ಸೂಕ್ಷ್ಮವಾದ ಊರಿಯೂತವನ್ನು ಶಾಂತಗೊಳಿಸಲು ಸಹಾಯ ಮಾಡುತ್ತವೆ. ಮಾವಿನ ಎಲೆಗಳಲ್ಲಿರುವ ಈ ಗುಣಲಕ್ಷಣಗಳನ್ನು ನರಮಂಡಲ ಆರೋಗ್ಯ ಮತ್ತು ಕಾರ್ಯವನ್ನು ಇವು ಬೆಂಬಲಿಸುತ್ತವೆ ಎಂದು ಅಧ್ಯಯನಗಳು ಹೇಳುತ್ತವೆ.
2024ರಲ್ಲಿ ಒಬ್ಬ ವಯಸ್ಕನ ಮೇಲೆ ಈ ಅಧ್ಯಯನ ಮಾಡಲಾಗಿದೆ. ಇದರಲ್ಲಿ 300 ಮಿಲಿ ಗ್ರಾಂ ಮಾವಿನ ಎಲೆಯ ಟೀ ಅನ್ನು ನೀಡಿ ಪರೀಕ್ಷೆ ಮಾಡಲಾಯಿತು. ಈ ಫಲಿತಾಂಶವು ಮೆದುಳಿನ ಕ್ರಿಯೆ ಮೇಲೆ ಅದ್ಭುತ ಪರಿಣಾಮ ತೋರಿಸಿದೆ. 2025ರಲ್ಲಿ ಯುವಕರ ಮೇಲೆ ಮತ್ತೊಂದು ಅಧ್ಯಯನ ನಡೆಸಲಾಗಿದ್ದು ಮಾವಿನ ಎಲೆಗಳ ಸಾರವನ್ನು ಕಡಿಮೆ ಪ್ರಮಾಣದಲ್ಲಿ ನೀಡಲಾಯಿತು. ಆಗ ಯುವಕರು ವೇಗವಾದ ಸಂಸ್ಕರಣೆ, ಚೇತನಯುಕ್ತ ಮಾನಸಿಕ ನಮ್ಯತೆ ಗೊಂದಲದ ಭಾವನೆಗಳನ್ನು ಕಡಿಮೆ ಮಾಡಿರುವುದು ಅಧ್ಯಯನದಿಂದ ಗೊತ್ತಾಗಿದೆ.
ಮಾವಿನ ಎಲೆಗಳು ಮೆದುಳಿನ ಆರೋಗ್ಯವನ್ನು ಹೆಚ್ಚಿಸುವುದಲ್ಲದೇ ಮೆದುಳಿನ ಕೆಲಸನವನ್ನು ಚುರುಕುಗೊಳಿಸುತ್ತವೆ. ಇತ್ತೀಚಿನ ಸಂಶೋಧನೆಗಳು ಮಾವಿನ ಎಲೆಗಳು ದೇಹಕ್ಕೆ ನೈಸರ್ಗಿಕ ಶಕ್ತಿ ಒದಸುತ್ತದೆ ಎನ್ನುತ್ತವೆ. ಆಯುರ್ವೇದಲ್ಲಿ ಮಧುಮೇಹ ನಿವಾರಣೆಗೆ ಮಾವಿನ ಎಲೆಗಳನ್ನು ಹೆಚ್ಚು ಕಾಲ ಉಪಯೋಗ ಮಾಡಿದ್ದಾರೆ. ಎಲೆಗಳಲ್ಲಿ ಆಂಟಿಆಕ್ಸಿಡೆಂಟಲ್ ಅಧಿಕವಾಗಿರುತ್ತದೆ. ಇವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್​​ ಅನ್ನು ಕಡಿಮೆ ಮಾಡುವ ಮೂಲಕ ಹೃದಯವನ್ನು ರಕ್ಷಿಸುತ್ತವೆ.
ಇದನ್ನೂ ಓದಿ:ಚಾಕೋಲೆಟ್​ಗಿಂತ ಬಿಸ್ಕತ್ತು​ಗಳು ನಮ್ಮ ಆರೋಗ್ಯಕ್ಕೆ ತುಂಬಾ ಡೇಂಜರ್.. ಹುಷಾರ್..!
ಮಾವಿನ ಎಲೆ ಚಹಾ; ಫ್ರೆಶ್ ಆಗಿರುವ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸುವುದರಿಂದ ಆರೋಗ್ಯಕ್ಕೆ ಉತ್ತಮ ಉಪಯೋಗಗಳನ್ನು ಪಡೆಯಬಹುದು. ಮಾವಿನ ಎಲೆ ಚಹಾ ಮಾಡಲು 4 ರಿಂದ 5 ಎಳೆದಾದ ಮಾವಿನ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು 1-2 ಗ್ಲಾಸ್​ ನೀರಿನಲ್ಲಿ 10 ನಿಮಿಷ ಕುದಿಸಬೇಕು. ಪಾತ್ರೆ ಮೇಲೆ ಮುಚ್ಚಿ 5 ನಿಮಿಷ ಹಾಗೇ ಬಿಡಬೇಕು. ಬಳಿಕ ನಿಂಬೆ ಅಥವಾ ಜೇನುತುಪ್ಪದೊಂದಿಗೆ ಕುಡಿಯಬಹುದು.
ಇದು ಬೇಡ ಎಂದರೆ ಮಾವಿನ ಎಲೆಗಳ ಪುಡಿಯನ್ನು ಉಗುರು ಬೆಚ್ಚಗಿನ ನೀರಿನ ಜೊತೆಗೆ ತೆಗೆದುಕೊಳ್ಳಬಹುದು. ಈ ಎಲ್ಲವನ್ನು ಮಿತವಾಗಿ ತೆಗೆದುಕೊಳ್ಳಬೇಕು. ಒಂದು ವೇಳೆ ಅನಾರೋಗ್ಯದಿಂದ ಇದ್ದರೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೇ ವೈದ್ಯರ ಸಲಹೆ ಪಡೆದು ತೆಗೆದುಕೊಳ್ಳಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ