/newsfirstlive-kannada/media/media_files/2025/09/27/health-2-2025-09-27-14-45-41.jpg)
ಈಗ ನಮ್ಮ ನಿತ್ಯ ಜೀವನದಲ್ಲಿ ಬಿಸ್ಕತ್ತು ಜೊತೆ ಅವಿನಾಭಾವ ಸಂಬಂಧ ಹೊಂದಿದ್ದೇವೆ ಎನ್ನಬಹುದು. ಬಹುತೇಕ ಜನರ ದಿನಚರಿ ಆರಂಭವಾಗುವುದೇ ಟೀ, ಬಿಸ್ಕತ್ತು​ಗಳಿಂದ. ಏಕೆಂದರೆ ಮನೆಯಲ್ಲಿ ಮಕ್ಕಳಿಗೂ ಸೇರಿದಂತೆ ಹಿರಿಯರು ಕೂಡ ಬಿಸ್ಕತ್ತು ತಿನ್ನುವುದು ಸಾಮಾನ್ಯವಾಗಿದೆ. ಇದು ನಿತ್ಯದ ಹವ್ಯಾಸಗಳಲ್ಲಿ ಒಂದಾಗಿದೆ. ಆದರೆ ಈ ಬಿಸ್ಕತ್ತು​ಗಳು ನಮ್ಮ ಹಲ್ಲುಗಳಿಗೆ ಎಷ್ಟು ಮಾರಕ ಎನ್ನುವ ಮಾಹಿತಿ ಈ ಕೆಳಗೆ ನೀಡಲಾಗಿದೆ. ​
ದಂತ ವೈದ್ಯರ ಪ್ರಕಾರ ಗ್ಲೂಕೋಸ್ ಬಿಸ್ಕತ್ತು​ಗಳು ಚಾಕೋಲೆಟ್​​ಗಿಂತ ಮಾರಕವಾಗಿವೆ. ಇದು ವ್ಯಕ್ತಿಯು ಬಿಸ್ಕತ್ತು​ಗಳನ್ನು ಹೇಗೆ ಸೇವಿಸುತ್ತಾರೆ ಹಾಗೂ ಅದರ ವಿನ್ಯಾಸ (texture) ಮೇಲೆ ಅವಲಂಬಿತವಾಗಿದೆ.
ಯಾಕೆ ಗ್ಲೂಕೋಸ್ ಬಿಸ್ಕತ್ತು​ಗಳು ಮಾರಕ..?
ಅಂಟಿಕೊಳ್ಳುವಿಕೆ ಮತ್ತು ಸಮಯ: ಗ್ಲೂಕೋಸ್ ಬಿಸ್ಕತ್ತುಗಳು ಜಿಗುಟಾಗಿರುತ್ತವೆ. ಅವುಗಳು ಅಂಟಾಗಿ ಪೇಸ್ಟ್​ ರೀತಿ ಆಗುವ ಕಾರಣ ಇದು ಹಲ್ಲುಗಳ ನಡುವಿನ ಬಿರುಕುಗಳಲ್ಲಿ ಮತ್ತು ಒಸಡುಗಳ ಉದ್ದಕ್ಕೂ ಸುಲಭವಾಗಿ ಸಿಲುಕಿಕೊಳ್ಳುತ್ತದೆ. ಇದು ಬಾಯಲ್ಲಿ ಸಕ್ಕರೆಯ ದೀರ್ಘಕಾಲ ಉಳಿಯಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ನೀವು ಆರೋಗ್ಯವಾಗಿರಬೇಕಾ.. ಹಾಗಾದ್ರೆ ಊಟ ಆದ್ಮೇಲೆ ಯಾರೂ ಹೀಗೆ ಮಾಡಬೇಡಿ..!
ಬ್ಯಾಕ್ಟೀರಿಯಾದ ಕ್ರಿಯೆ: ಬಾಯಲ್ಲಿರುವ ಬ್ಯಾಕ್ಟೀರಿಯಾಗಳು ಸಕ್ಕರೆಯನ್ನು ತಿಂದು, ಹಲ್ಲಿನ ದಂತಕವಚದ ಮೇಲೆ ದಾಳಿ ಮಾಡುವ ಆಮ್ಲಗಳನ್ನು ಉತ್ಪಾದಿಸುತ್ತವೆ. ದೀರ್ಘಕಾಲದ ಆಮ್ಲ ದಾಳಿಯು ದಂತಕ್ಷಯ ಮತ್ತು ಕ್ಯಾವಿಟಿಯನ್ನು ಉಂಟುಮಾಡುತ್ತವೆ. ಇದರಿಂದ ನಮ್ಮ ಹಲ್ಲುಗಳು ಹುಳುಕು ಆಗುವುದು, ನೋವಾಗುವುದು ಸೇರಿದಂತೆ ಇತರೆ ಸಮಸ್ಯೆಗಳು ಎದುರಾಗುತ್ತವೆ.
ಕಾರ್ಬೋಹೈಡ್ರೇಟ್‌ಗಳು ಮತ್ತು ಪಿಷ್ಟಗಳು: ಸಕ್ಕರೆ ಪ್ರಮುಖ ಅಂಶವಾಗಿದ್ದರೂ, ಬಿಸ್ಕತ್ತುಗಳಲ್ಲಿರುವ ಫರ್ಮಂಟೆಬಲ್ ಕಾರ್ಬೋಹೈಡ್ರೇಟ್‌ಗಳು ಮತ್ತು ಪಿಷ್ಟಗಳು ಸಹ ಆಮ್ಲ ಉತ್ಪಾದನೆಗೆ ಸಹಾಯ ಮಾಡುತ್ತವೆ. ಇದು ಹಲ್ಲುಗಳಿಗೆ ಅಪಾಯವನ್ನು ತಂದೊಡ್ಡುತ್ತವೆ.
ಬಿಸ್ಕತ್ತು​ಗಳು ಹೆಚ್ಚಾಗಿ ಸಕ್ಕರೆ ಅಂಶಗಳನ್ನು ಒಳಗೊಂಡಿರುವುದರಿಂದ ಬ್ಯಾಕ್ಟೀರಿಯಾಗಳಿಗೆ ಆಹಾರ ಸಿಕ್ಕಂತಾಗುತ್ತದೆ. ಇದರಿಂದಾಗಿ ಹಲ್ಲುಗಳ ಅರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ವೈದ್ಯರು ಹೆಚ್ಚು ಬಿಸ್ಕೇಟ್​ಗಳನ್ನು ತಿನ್ನುವುದರಿಂದ ದೂರವಿರಿ ಎಂದು ಯಾವಾಗಲೂ ಸಲಹೆ ನೀಡುತ್ತಲೇ ಇರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ