/newsfirstlive-kannada/media/media_files/2025/09/16/yash-mother-puspa-2025-09-16-13-14-32.jpg)
ಕಲಾವಿದರಿಗೆ ಪೇಮೆಂಟ್ ಮಾಡದೇ ಮೋಸ ಮಾಡಿದ್ದಾರೆ ಎಂಬ ಆರೋಪ ಕೊತ್ತಲವಾಡಿ (Kothalavadi movie) ಚಿತ್ರದ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ (Pushpa Arunkumar) ವಿರುದ್ಧ ಕೇಳಿಬಂದಿದೆ. ಶ್ರೀರಾಜ್ ನಿರ್ದೇಶನದ ಈ ಚಿತ್ರವು ಕಳೆದ ಆಗಸ್ಟ್ 1 ರಂದು ಬಿಡುಗಡೆ ಆಗಿದ್ದು, ಇದೀಗ ಒಟಿಟಿಯಲ್ಲಿದೆ.
ಏನಿದು ಆರೋಪ..?
ಚಿತ್ರದಲ್ಲಿ ನಟಿಸಿರುವ ಸಹ ಕಲಾವಿದ ಮಹೇಶ್ ಗುರು ಅನ್ನೋರು ಗಂಭೀರ ಆರೋಪ ಮಾಡಿದ್ದಾರೆ. ರಂಗಭೂಮಿ ಕಲಾವಿದನಾಗಿರುವ ಮಹೇಶ್ ನೋವಿನ ಮಾತುಗಳು ಹೀಗಿವೆ..
ನಮಸ್ತೆ,
ನಾನೊಬ್ಬ ರಂಗಭೂಮಿ ಬಡ ಕಲಾವಿದ. ಸಿನಿಮಾ ಮತ್ತು ಹಲವು ಸೀರಿಯಲ್ಗಳಲ್ಲಿ ನಟಿಸುತ್ತಿದ್ದೇನೆ. ವಿಷಯ ಏನೆಂದರೆ ಆಗಸ್ಟ್ 1 ರಂದು ಕೊತ್ತಲವಾಡಿ ಎಂಬ ಸಿನಿಮಾ ರಿಲೀಸ್ ಆಗಿದೆ. ಅದು ನಮ್ಮ PA ಪ್ರೊಡೆಕ್ಷನ್ನ ಮೊದಲ ಚಿತ್ರ. ಅದರ ಮಾಲೀಕರು ಪುಷ್ಪ ಮೇಡಂ. ಈ ಸಿನಿಮಾದಲ್ಲಿ ನಿರ್ದೇಶಕರಾಗಿ ಶ್ರೀರಾಜ್ ಅಂತಾ. ಹೀರೋ ಪೃಥ್ವಿ ಅಂಬರ್ ಸರ್. ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಸರ್ ಅವರ ಸಹನಟನಾಗಿ ನಾನು ಅಭಿನಯಿಸಿದ್ದೇನೆ..
ಈ ಸಿನಿಮಾಗಾಗಿ ನಾನು ಮೂರು ತಿಂಗಳ ಕಾಲ ಸತತವಾಗಿ ಕೆಲಸ ಮಾಡಿದ್ದೇನೆ. ಈ ಚಿತ್ರಕ್ಕೆ ನಾನು ಸೆಲೆಕ್ಟ್ ಆಗಿದ್ದು, ನಿರ್ದೇಶಕರ ಕಡೆಯಿಂದ. ಪ್ರೊಡೆಕ್ಷನ್ ಕಡೆಯಿಂದಾಗಲಿ, ಮ್ಯಾನೇಜರ್ ಕಡೆಯಿಂದಾಗಲಿ ನಾನು ಬಂದಿಲ್ಲ. ನೇರವಾಗಿ ನಿರ್ದೇಶಕರು ನಮಗೆ ಒಂದು ಪ್ಯಾಕೇಜ್ ಮಾತನ್ನಾಡಿದ್ದರು. ತಿಂಗಳಿಗೆ ಇಷ್ಟು ಹಣ ಹಾಗೂ ದಿನಕ್ಕೆ ಕನ್ವಿನ್ಸ್ ಕೂಡ ಇರುತ್ತದೆ ಎಂದಿದ್ದರು. ನಾವು ಖುಷಿಯಿಂದ ಒಪ್ಪಿಕೊಂಡೆವು. ಸಿನಿಮಾ ಮುಹೂರ್ತ ಕೂಡ ಆಯಿತು. ಈ ವೇಳೆ ಪೇಮೆಮಟ್ ಕೇಳಿದೇವು. ನಿರ್ದೇಶಕರ ಜೊತೆ ಮಾತನ್ನಾಡುವಾಗ ಮೂಹರ್ತದ ಬಳಿಕ ಒಂದು ಅಡ್ವಾನ್ಸ್ ಮಾಡಿಸ್ತೇನೆ ಅಂದಿದ್ದರು.
ಹಾಗಾಗಿ ಮುಹೂರ್ತದ ವೇಳೆ ಕೇಳಿದಾಗ ಪ್ರೊಡೆಕ್ಷನ್ ಕಡೆಯಿಂದ ಫಂಡ್ ಬಂದಿಲ್ಲ. ಬಂದ ಕೂಡಲೇ ಮಾಡಿಸ್ತೇನೆ ಎಂದಿದ್ದರು. ನಂತರ, ಸಿನಿಮಾದ ಶೋಟಿಂಗ್ನ ಎರಡು ಶೆಡ್ಯೂಲ್ಗಳು ಮುಗಿದವು. ಸಾಂಗು, ಫೈಟಿಂಗ್ ಎಲ್ಲಾ ಮುಗೀತು. ಹಣ ಕೇಳಿದ್ವಿ, ಇನ್ನೂ ಬಂದಿಲ್ಲ ಎಂದು ಹೇಳ್ತಾನೆ ಉಳಿದರು. ಕೊನೆಗೆ ಚಿತ್ರ ಡಬ್ಬಿಂಗ್ ಹಂತಕ್ಕೆ ಬಂತು. ಆಗ ನಮ್ಮ ಬಳಿ ಕರೆದು ಕೆಲಸ ಮಾಡಿಸಿಕೊಂಡರು. ಆಗಲೂ ಪೇಮೆಂಟ್ ನೀಡುವಂತೆ ಕೇಳಿಕೊಂಡೆವು. ಆಗ ನಿರ್ದೇಶಕರು ಆಗಲೂ ಕೂಡ ಇನ್ನೂ ಫಂಡ್ ಹಾಕಿಲ್ಲ ಎಂದು ಸಮಜಾಯಿಸಿ ನೀಡಿದರು.
ಕೊನೆಗೆ ನಮ್ಮ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಸಿನಿಮಾ ಟೀಸರ್, ಪ್ರೆಸ್ಮೀಟ್, ಸಿನಿಮಾ ಪ್ರಚಾರ ಎಲ್ಲವೂ ನಡೆಯಿತು. ಅದ್ಯಾವುದಕ್ಕೂ ನಮ್ಮನ್ನ ಕರೆಯಲಿಲ್ಲ. ಕೊನೆಗೆ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಯಿತು. ಈಗ ಓಟಿಟಿಯಲ್ಲಿದೆ. ನಾವು ಚಿತ್ರಕ್ಕಾಗಿ ಮೂರು ತಿಂಗಳ ಕೆಲಸ ಮಾಡಿದ್ದೇವೆ. ಇಲ್ಲಿಯವರೆಗೂ ನಮಗೆ ಪೇಮೆಂಟ್ ಮಾಡಿಲ್ಲ. ಈ ಸಮಸ್ಯೆಯನ್ನ ಯಾರಿಗೆ ಹೇಳಬೇಕು ಅನ್ನೋದು ಗೊತ್ತಾಗಲಿಲ್ಲ. ನೇರವಾಗಿ ನಿರ್ಮಾಪಕರ ಸಂಪರ್ಕ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ವಿಡಿಯೋ ಮಾಡುತ್ತಿದ್ದೇನೆ. ಆದಷ್ಟು ಬೇಗ ನಮ್ಮ ಪ್ರಡ್ಯೂಸರ್ ಮೇಡಂ ಪುಷ್ಪಾ ಅವರಿಗೆ ತಲುಪಲಿ. ನಮ್ಮ ಹಣ ಸಿಗಲಿ. ಎಲ್ಲರಿಗೂ ಧನ್ಯವಾದ.
ಮಹೇಶ್ ಗುರು, ರಂಗಭೂಮಿ ಕಲಾವಿದ
ಇದನ್ನೂ ಓದಿ:ಕೆಲಸಕ್ಕೆ ಸೇರಿದ್ದು 2019ರಲ್ಲಿ.. ಈ ಅಧಿಕಾರಿ ನಿವಾಸದಲ್ಲಿ 2 ಕೋಟಿ ಹಣ, ಚಿನ್ನಾಭರಣ ಸೀಜ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ