/newsfirstlive-kannada/media/media_files/2025/09/16/nupur-bora-3-2025-09-16-12-06-11.jpg)
ಆದಾಯಕ್ಕೂ ಮೀರಿ ಹಣ ಗಳಿಸಿದ ಆರೋಪದ ಮೇಲೆ ಅಸ್ಸಾಂ ಸಿವಿಲ್ ಸರ್ವೀಸ್ (ACS)ನ ಮಹಿಳಾ ಅಧಿಕಾರಿಯನ್ನ ಪೊಲೀಸರು ಬಂಧಿಸಿದ್ದಾರೆ.
ಮುಖ್ಯಮಂತ್ರಿಗಳ ವಿಶೇಷ ವಿಜಿಲೆನ್ಸ್ ಸೆಲ್ ನೇತೃತ್ವದ ತಂಡ ಗುವಾಹಟಿಯಲ್ಲಿರುವ ಮಹಿಳಾ ಅಧಿಕಾರಿ ನುಪುರ್ ಬೋರಾ (Nupur Bora) ನಿವಾಸದ ಮೇಲೆ ದಾಳಿ ಮಾಡಿತ್ತು. ಈ ವೇಳೆ 92 ಲಕ್ಷ ರೂಪಾಯಿ ಹಣ ಹಾಗೂ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಸೀಜ್ ಮಾಡಿದ್ದಾರೆ. ಜೊತೆಗೆ ಅವರ ಬಾಡಿಗೆ ಮನೆಯಲ್ಲಿ 10 ಲಕ್ಷ ರೂಪಾಯಿ ಹಣವನ್ನ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬೆಳ್ಳಿ ಗೊಂಬೆಯಾದ ಮಾನ್ಸಿ ಜೋಶಿ.. ಮಿರಮಿರ ಮಿಂಚಿದ ಚೆಂದುಳ್ಳಿ -Photos
ನುಪುರ್ ಬೋರಾ ಅವರು ಮೂಲತಃ ಗೋಲಘಾಟ್ನವರು. ಇವರು 2019ರಲ್ಲಿ ಎಸಿಎಸ್ಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಕಮ್ರುಪ್ ಜಿಲ್ಲೆಯ ಗೊರೊಮುರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಪ್ರೀತಿಗಾಗಿ 600 ಕಿಮೀ ದೂರ ಸುತ್ತಿದಳು.. ಪ್ರಿಯಕರನ ಭೇಟಿ ಬೆನ್ನಲ್ಲೇ ದುರಂತ ಅಂತ್ಯ ಕಂಡಳು..
ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಪ್ರಕರಣದ ಬಗ್ಗೆ ಮಾತನಾಡಿ.. ಕಳೆದ ಆರು ತಿಂಗಳಿನಿಂದ ಅವರ ವಿರುದ್ಧ ನಿರಂತರ ದೂರು ಬರುತ್ತಿತ್ತು. ಹೀಗಾಗಿ ನಮ್ಮ ಅಧಿಕಾರಿಗಳು ಅವರ ಕೆಲಸದ ಮೇಲೆ ನಿಗಾ ಇಟ್ಟಿದ್ದರು. ಅವರ ಅಧಿಕಾರದಲ್ಲಿ ಭೂ-ವ್ಯವಹಾರಗಳ ಬಗ್ಗೆ ವಿವಾದಗಳು ಇದ್ದವು. ಈ ಬಗ್ಗೆ ದೂರು ದಾಖಲಾಗುತ್ತಿದ್ದವು ಎಂದಿದ್ದಾರೆ.
ಇದನ್ನೂ ಓದಿ:ಕೇರಳಕ್ಕೆ ಮೆದುಳು ತಿನ್ನುವ ರಕ್ಕಸ ಎಂಟ್ರಿ.. 7 ತಿಂಗಳಲ್ಲಿ ಅಮೀಬಾಗೆ 17 ಬಲಿ!
ಬರ್ಪೇಟಾ ರೆವಿನ್ಯೂ ವ್ಯಾಪ್ತಿಯ ಹಿಂದೂ ಭೂಮಿಯನ್ನ ಶಂಕಿತ ವ್ಯಕ್ತಿಗಳ ಹೆಸರಿಗೆ ಹಣ ಪಡೆದು ವರ್ಗಾವಣೆ ಮಾಡಿದ ಆರೋಪ ಇತ್ತು. ಇದೀಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ನಾವು ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ:ಬೆಳ್ಳಿ ಗೊಂಬೆಯಾದ ಮಾನ್ಸಿ ಜೋಶಿ.. ಮಿರಮಿರ ಮಿಂಚಿದ ಚೆಂದುಳ್ಳಿ -Photos
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ