Advertisment

ಕೇರಳಕ್ಕೆ ಮೆದುಳು ತಿನ್ನುವ ರಕ್ಕಸ ಎಂಟ್ರಿ.. 7 ತಿಂಗಳಲ್ಲಿ ಅಮೀಬಾಗೆ 17 ಬಲಿ!

ಕೇರಳಕ್ಕೆ ಮೆದುಳು ತಿನ್ನುವ ರಕ್ಕಸನ ಆತಂಕ ಕಾಡ್ತಿದೆ. ಅಮೀಬಾ ಎಂಬ ಮಾರಕ ಸೋಂಕು ಕೇರಳಕ್ಕೆ ತಲೆನೋವಾಗಿ ಪರಿಣಮಿಸಿದ್ದು, 7 ತಿಂಗಳಿನಲ್ಲಿ 17 ಮಂದಿಯನ್ನು ಬಲಿ ಪಡೆದುಕೊಂಡಿದೆ. ಈ ತಿಂಗಳಲ್ಲೇ 7 ಪ್ರಕರಣಗಳು ವರದಿಯಾಗಿದ್ದು ಭೀತಿ ಸೃಷ್ಟಿಸಿದೆ.

author-image
Ganesh Kerekuli
amoeba cases (1)
Advertisment
  • ಕೇರಳದಲ್ಲಿ ಮತ್ತೆ ಹೊಸ ರೋಗದ ಹಾವಳಿ!
  • 67 ಮಂದಿಗೆ ಮೆದುಳು ತಿನ್ನುವ ಅಮೀಬಾ ಸೋಂಕು
  • ಯಾರಲ್ಲಿ ಈ ಸೋಂಕು ಕಾಣಿಸಿಕೊಳ್ತಿದೆ..?

ಕೇರಳಕ್ಕೆ ಮೆದುಳು ತಿನ್ನುವ ರಕ್ಕಸನ ಆತಂಕ ಕಾಡ್ತಿದೆ. ಅಮೀಬಾ ಎಂಬ ಮಾರಕ ಸೋಂಕು ಕೇರಳಕ್ಕೆ ತಲೆನೋವಾಗಿ ಪರಿಣಮಿಸಿದ್ದು, 7 ತಿಂಗಳಿನಲ್ಲಿ 17 ಮಂದಿಯನ್ನು ಬಲಿ ಪಡೆದುಕೊಂಡಿದೆ. ಈ ತಿಂಗಳಲ್ಲೇ 7 ಪ್ರಕರಣಗಳು ವರದಿಯಾಗಿದ್ದು ಭೀತಿ ಸೃಷ್ಟಿಸಿದೆ.

Advertisment

ಹೊಸ ರೋಗದ ಹಾವಳಿ!

ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್‌.. ಅತೀ ಅಪರೂಪ, ಅದರಲ್ಲೂ ಅಪಾಯಕಾರಿ ಮೆದುಳಿನ ಸೋಂಕು.. ಈ ವೈರಸ್​ನ ಹೊಸ ಪ್ರಕರಣ ಪತ್ತೆಯಾಗಿದ್ದು, ತಿರುವನಂತಪುರಂನಲ್ಲಿ 17 ವರ್ಷದ ಬಾಲಕನಿಗೆ ಸೋಂಕು ತಗುಲಿದೆ. ಈ ವರ್ಷ ಇಲ್ಲಿವರೆಗೆ 17 ಜನ ಸಾವನ್ನಪ್ಪಿದ್ರೆ ಒಟ್ಟು 67 ಜನ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಒಳಪಟ್ಟಿದ್ದಾರೆ ಅಂತ ಆರೋಗ್ಯ ಇಲಾಖೆ ದೃಢಪಡಿಸಿದೆ. 

ಇದನ್ನೂ ಓದಿ:ಜ್ವಾಲಾ ಗುಟ್ಟಾರಿಂದ ಉದಾತ್ತ ಕಾರ್ಯ: 30 ಲೀಟರ್ ಎದೆ ಹಾಲು ದಾನ ಮಾಡಿದ ಜ್ವಾಲಾಗುಟ್ಟಾ

amoeba cases

ಮೆದುಳು ತಿನ್ನುವ ಅಮೀಬಾ ಆತಂಕ!

  • ನೀರಿನ ಕೊಳ, ಕೆರೆ, ಈಜುಕೊಳಗಳಲ್ಲಿ ಇಳಿದವರಲ್ಲಿ ಸೋಂಕು ಪತ್ತೆ
  • ಕಲುಷಿತ ನೀರು ಮೂಗಿನ ಮೂಲಕ ದೇಹ ಪ್ರವೇಶಿಸಿ ಮೆದುಳು ತಲುಪುತ್ತಿದೆ
  • ನೀರಿನ ಮೂಲಕ್ಕೆ ಒಡ್ಡಿಕೊಳ್ಳದ ಮಗು, ಇತರರು ಸೋಂಕಿಗೆ ತುತ್ತಾಗಿದ್ದು ಆತಂಕ
  • ಸೆಪ್ಟೆಂಬರ್ 12ರಂದು 2 ಹೊಸ ಕೇಸ್​, ಈ ತಿಂಗಳು 19 ಪ್ರಕರಣ, 7 ಮಂದಿ ಸಾವು
  • ಸೋಂಕಿತ ಬಾಲಕ ಹಿಂದಿನ ದಿನ ಸ್ನೇಹಿತರೊಂದಿಗೆ ಈಜುಕೊಳದಲ್ಲಿ ಸ್ನಾನ
  • ಆರೋಗ್ಯ ಇಲಾಖೆ ಈಜುಕೊಳ ಮುಚ್ಚಿ ಪರೀಕ್ಷೆಗಾಗಿ ನೀರಿನ ಮಾದರಿ ಸಂಗ್ರಹ
  • ನೀರಿನ ಸುರಕ್ಷತೆ, ನೈರ್ಮಲ್ಯದ ಬಗ್ಗೆ ಜಾಗರೂಕರಾಗಿರಲು ವೀಣಾ ಜಾರ್ಜ್​ ಸಲಹೆ
  • ಹಸು-ಎಮ್ಮೆ ಸ್ನಾನ ಮಾಡುವ ಜಲಮೂಲ, ಕಲುಷಿತ ನೀರಲ್ಲಿ ಸ್ನಾನ ಬೇಡ
  • ಮನೆಗಳ ನೀರಿನ ಸಂಗ್ರಹಣಾ ಸೌಲಭ್ಯಗಳನ್ನು ಸ್ವಚ್ಛವಾಗಿಡಬೇಕು
  • ಅಮೀಬಾ ನಿಮ್ಮ ಮೂಗಿನ ಮೂಲಕ ನಿಮ್ಮ ಮೆದುಳನ್ನು ಪ್ರವೇಶಿಸುತ್ತದೆ
  • ನೀರು ನಿಮ್ಮ ಮೂಗಿಗೆ ಪ್ರವೇಶಿಸದಂತೆ ನೋಡಿಕೊಳ್ಳಿ ಎಂದು ಸಲಹೆ
Advertisment

ಸೋಂಕುಗಳ ಸಂಖ್ಯೆ ಹೆಚ್ಚಾಗಿದ್ದರೂ ಕೇರಳದಲ್ಲಿ ಸೋಂಕಿನಿಂದ ಮರಣ ಪ್ರಮಾಣವು ಜಾಗತಿಕ ಅಂಕಿ ಅಂಶಕ್ಕಿಂತ ಕಡಿಮೆ ಇದೆ. ಈ ನಡುವೆಯೂ ರೋಗ ತಡೆಯುವುದು ಅಥವಾ ಗುಣಪಡಿಸುವ ಅಂಶಗಳ ಬಗ್ಗೆ ಸ್ಪಷ್ಟತೆ ಸಿಗದ ಕಾರಣ ಆತಂಕ ಮನೆಮಾಡಿದೆ.

ಇದನ್ನೂ ಓದಿ:ಪಾಸಿಟೀವ್​ ವಿಷಯದೊಂದಿಗೆ ದಿನ ಆರಂಭಿಸಿ.. ಆರೋಗ್ಯಕ್ಕಾಗಿ ಈ ಟಿಪ್ಸ್​ ಫಾಲೋ ಮಾಡಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

amoeba amoeba cases brain-eating amoeba
Advertisment
Advertisment
Advertisment