ಖ್ಯಾತ ಬಾಡಿ ಬಿಲ್ಡರ್, Tiger​- 3 ಸಿನಿಮಾದಲ್ಲಿ ನಟಿಸಿದ್ದ ವರಿಂದರ್ ಸಿಂಗ್ ಇನ್ನಿಲ್ಲ.. ಏನಾಗಿತ್ತು?

ಟೈಗರ್​- 3 ಅಲ್ಲದೇ ಪಾಲಿವುಡ್​ನ ಕಬ್ಬಡ್ಡಿ ಅಗೇನ್ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಇಂದು ಹೃದಯ ಸ್ತಂಭನದಿಂದ ವರಿಂದರ್ ಸಿಂಗ್ ಉಸಿರು ಚೆಲ್ಲಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ.

author-image
Bhimappa
Varinder_Singh
Advertisment

ಪಂಜಾಬ್​ನ ಖ್ಯಾತ ಬಾಡಿ ಬಿಲ್ಡರ್ ಹಾಗೂ ನಟ ವರಿಂದರ್ ಸಿಂಗ್ ಘುಮನ್ (47) ಅವರು ಕಾರ್ಡಿಕ್ ಅರೆಸ್ಟ್​ನಿಂದ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಪಂಜಾಬ್​ನ ಸಿನಿ ಕ್ಷೇತ್ರದವರು ಹಾಗೂ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. 

ಸಲ್ಮಾನ್ ಖಾನ್ ಅಭಿನಯದ ಟೈಗರ್​- 3 ಸಿನಿಮಾದಲ್ಲಿ ಅಭಿನಯಿಸಿದ್ದ ಖ್ಯಾತ ಬಾಡಿ ಬಿಲ್ಡರ್ ಹಾಗೂ ನಟ ವರಿಂದರ್ ಸಿಂಗ್ ಘುಮನ್ ಅವರು ಕಾರ್ಡಿಕ್ ಅರೆಸ್ಟ್​ನಿಂದ ಇಂದು ನಿಧನರಾಗಿದ್ದಾರೆ. ಟೈಗರ್​- 3 ಅಲ್ಲದೇ ಪಾಲಿವುಡ್​ನ ಕಬ್ಬಡ್ಡಿ ಅಗೇನ್ ಸಿನಿಮಾ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ಇಂದು ಹೃದಯ ಸ್ತಂಭನದಿಂದ ವರಿಂದರ್ ಸಿಂಗ್ ಉಸಿರು ಚೆಲ್ಲಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. 

ಇದನ್ನೂ ಓದಿ:7 ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್.. ಮಹತ್ವದ ದಾಖಲೆ ಬರೆದ ಯಂಗ್ ಓಪನರ್!​ ​

Varinder_Singh_Ghuman

ಪಂಜಾಬ್​ನ ಹಿರಿಯ ನಟರಾದ ನಿರ್ಮಾಲ್ ರಿಷಿ, ಸಿಂಗರ್ ಮಂಕಿರ್ತ್​ ಊಲಕ್, ಫಿಲ್ಮಮೇಕರ್ ಸುಖಿಮಿಂಧರ್ ಧಂಜಲ್ ಸೇರಿದಂತೆ ರಾಜಕೀಯ ನಾಯಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ವರಿಂದರ್ ಸಿಂಗ್ ಘುಮನ್ ಇನಿಲ್ಲ ಎನ್ನುವ ಸುದ್ದಿ ನಂಬಲು ಆಗುತ್ತಿಲ್ಲ ಎಂದು ಸಾಕಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. 

ವರಿಂದರ್ ಸಿಂಗ್ ಘುಮನ್ ಅವರು ಫಿಟ್ನೆಸ್ ಹಾಗೂ ದೇಹದಾರ್ಢ್ಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಹೀಗಾಗಿಯೆ ಎಲ್ಲೆಡೆ ಫೇಮಸ್ ಆಗಿದ್ದರು. ಅವರ ಬಾಡಿ ನೋಡಿಯೇ ಎಷ್ಟೋ ಜನ ಶಾಕ್ ಆಗುತ್ತಿದ್ದರು. ಅಷ್ಟೊಂದು ಆಕರ್ಷಣೆಯಾಗಿತ್ತು ಅವರ ದೇಹ. ಸದ್ಯ ಅವರು ಸಡನ್ ಕಾರ್ಡಿಕ್ ಅರೆಸ್ಟ್​ನಿಂದ ನಿಧನ ಹೊಂದಿರುವುದು ಎಲ್ಲರಿಗೂ ಭಾರೀ ಆಶ್ಚರ್ಯ ಮೂಡಿಸಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

bodybuilder Varinder Singh Ghuman
Advertisment