/newsfirstlive-kannada/media/media_files/2025/10/10/yashasvi_jaiswal_new-2025-10-10-18-18-54.jpg)
ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಯಂಗ್ ಓಪನರ್​ ಯಶಸ್ವಿ ಜೈಸ್ವಾಲ್​ ಮಿಂಚಿನ ಸೆಂಚುರಿ ಬಾರಿಸಿದ್ದಾರೆ. ಯುವ ಬ್ಯಾಟರ್ ಶತಕ ಬಾರಿಸಿದ್ದೇ ಬಾರಿಸಿದ್ದು ದಾಖಲೆಯ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.
ಭಾರತ ತಂಡದಲ್ಲಿ ಮೋಸ್ಟ್​ ಟ್ಯಾಲೆಂಟೆಡ್​ ಹಾಗೂ ಭರವಸೆಯ ಓಪನರ್​ ಎಂದರೆ ಅದು ಯಶಸ್ವಿ ಜೈಸ್ವಾಲ್​. ಸದ್ಯ ವೆಸ್ಟ್​ ಇಂಡೀಸ್ ಜೊತೆ ದೆಹಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 173 ರನ್ ಬಾರಿಸಿ ನಾಳೆಗೆ ಕ್ರೀಸ್​ ಕಾಯ್ದುಕೊಂಡಿದ್ದಾರೆ. ಕಿರಿಯ ವಯಸ್ಸಿಗೆ ಓಪನಿಂಗ್ ಬ್ಯಾಟಿಂಗ್​​ನಲ್ಲಿ 7 ಸೆಂಚುರಿ ಬಾರಿಸೋ ಮೂಲಕ ರೆಕಾರ್ಡ್​ ಮಾಡಿದ್ದಾರೆ. 23 ವರ್ಷಕ್ಕೆ 7 ಶತಕಗಳನ್ನು ಸಿಡಿಸಿ ಈ ದಾಖಲೆ ಮಾಡಿದ 2ನೇ ಭಾರತೀಯ ಆಟಗಾರ ಆಗಿದ್ದಾರೆ.
ಇದನ್ನೂ ಓದಿ:ರೋಹಿತ್ ಶರ್ಮಾ ಐಷಾರಾಮಿ Tesla ಕಾರು ಖರೀದಿ.. ಎಲಾನ್​ ಮಸ್ಕ್​ ಗಮನ ಸೆಳೆದ ವಿಡಿಯೋ
ವಿರಾಟ್ ಕೊಹ್ಲಿ, ಸುನಿಲ್ ಗವಸ್ಕಾರ್​ ಅಂತಹ ಲೆಜೆಂಡರಿ ಬ್ಯಾಟರ್​ಗಳ ದಾಖಲೆ ಹಿಂದಿಕ್ಕಿರುವ ಯಶಸ್ವಿ ಜೈಸ್ವಾಲ್ ಸಚಿನ್ ತೆಂಡೂಲ್ಕರ್​ ನಂತರ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. 23 ವರ್ಷಕ್ಕೆ ಸಚಿನ್​ ತೆಂಡೂಲ್ಕರ್ ಅವರು 11 ಸೆಂಚುರಿಗಳನ್ನು ಸಿಡಿಸಿದ್ದರು. ಇನ್ನು ಡಾನ್ ಬ್ರಾಡ್ಮನ್ ಅವರು 12 ಶತಕ ಸಿಡಿಸಿ ಈಗಲೂ ಮೊದಲ ಸ್ಥಾನದಲ್ಲಿ ಇದ್ದಾರೆ. ಸರ್ ಗಾರ್ಫಿಲ್ಸ್​ ಸೋಬರ್ಸ್ 9 ಶತಕಗಳನ್ನು ಬಾರಿಸಿ 3ನೇ ಸ್ಥಾನದಲ್ಲಿದ್ದಾರೆ. ಇದರಲ್ಲಿ ಸಚಿನ್ ಹಾಗೂ ಜೈಸ್ವಾಲ್ ಮಾತ್ರ 23 ವರ್ಷಕ್ಕೆ 7 ಸೆಂಚುರಿ ಬಾರಿಸಿದ ಭಾರತೀಯರು ಆಗಿದ್ದಾರೆ.
ಸದ್ಯ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಓಪನರ್ ಆಗಿ ಕ್ರೀಸ್​ ಆಗಮಿಸಿದ ಯಶಸ್ವಿ ಜೈಸ್ವಾಲ್ ಅವರು ಭರ್ಜರಿ ಶತಕ ಸಿಡಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಯಶಸ್ವಿ ಜೊತೆ ಓಪನರ್​ ಕೆ.ಎಲ್ ರಾಹುಲ್ 38 ರನ್​ಗೆ ವಿಕೆಟ್​ ಒಪ್ಪಿಸಿದರೆ, ಸಾಯಿ ಸುದರ್ಶನ್ ಅಮೋಘ ಬ್ಯಾಟಿಂಗ್ ಮಾಡಿ 87 ರನ್​ ಗಳನ್ನು ಗಳಿಸಿ ಆಡುವಾಗ ಎಲ್​ಬಿಗೆ ಬಲಿಯಾದರು. ಇನ್ನು ಜೈಸ್ವಾಲ್​ 173, ಕ್ಯಾಪ್ಟನ್​ ಗಿಲ್ 20 ರನ್ ಗಳಿಸಿ ಕ್ರೀಸ್​ನಲ್ಲಿದ್ದು​ ಟೀಮ್ ಇಂಡಿಯಾ 2 ವಿಕೆಟ್​ಗೆ 318 ರನ್​ಗಳನ್ನು ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ