/newsfirstlive-kannada/media/media_files/2025/08/12/sushma-raj-kadabettu-2025-08-12-18-16-49.jpg)
ಪ್ಯಾಟೆ ಹುಡುಗಿ ಹಳ್ಳಿ ಲೈಫ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟ ಕರಾವಳಿ ಸುಂದರಿ ಸುಷ್ಮಾ ರಾಜ್ ಸಖತ್ ಖುಷಿಯಲ್ಲಿದ್ದಾರೆ. ಕನ್ನಡದ ಕೆಲ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ, ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದಿರುವ ನಟಿ ಸುಷ್ಮಾ ರಾಜ್ ಕಾಡಬೆಟ್ಟು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ಗೆ ಎಂಟ್ರಿ ಕೊಡ್ತಿದ್ದಾರಾ ಪಹಲ್ಗಾಮ್ ಸಂತ್ರಸ್ತೆ ಹಿಮಾಂಶಿ ನರ್ವಾಲ್? ಇದರ ಅಸಲಿಯತ್ತೇನು?
ಸುಷ್ಮಾ ರಾಜ್ ಅವರ ತಂದೆ ಸುಮಾರು 35 ವರ್ಷಗಳಿಂದ ಹುಲಿಕುಣಿತ ತರಬೇತಿ ನೀಡುತ್ತಿದ್ದರು. ತಂದೆಯಂತೆ ಮಗಳು ಸುಷ್ಮಾ ರಾಜ್ ಮಸ್ತ್ ಆಗಿ ಹುಲಿ ಡ್ಯಾನ್ಸ್ ಮಾಡುತ್ತಾರೆ. ನಟಿ ಸುಷ್ಮಾ ರಾಜ್ ಮೇ 2024ರಲ್ಲಿ ನಿಶಾನ್ ನರೇಂದ್ರ ಎಂಬುವವರನನ್ನು 10 ವರ್ಷಗಳಿಂದ ಪ್ರೀತಿಸಿದ ಮದುವೆ ಆಗಿದ್ದರು. ಸುಷ್ಮಾ ರಾಜ್ ಪತಿ ಜಿಮ್ ಟ್ರೈನರ್ ಆಗಿದ್ದಾರೆ. ಅಲ್ಲದೇ ಬಾಡಿ ಬಿಲ್ಡಿಂಗ್ನಲ್ಲಿ ಹೆಸರು ಮಾಡಿದ್ದಾರೆ.
ಸುಷ್ಮಾ ಅವರು ದುನಿಯಾ ವಿಜಯ್ ಅವರ ‘ಮಾಸ್ತಿಗುಡಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ‘ಹುಬ್ಬಳ್ಳಿ ಹುಡುಗ ಮಂಗಳೂರು ಹುಡ್ಗಿ’ ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ಹುಲಿ ಕುಣಿತದಲ್ಲಿಯೇ ಪಳಗಿರುವ ಸುಷ್ಮಾ ಅವರು ಸಾಕಷ್ಟು ಕಡೆ ಹುಲಿ ಕುಣಿತ ಪ್ರದರ್ಶನ ನೀಡಿದ್ದಾರೆ.
ಈಟಿವಿ ವಾಹಿನಿಯ ‘ಇಂಡಿಯನ್’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಟಾಪ್ 4 ಸ್ಥಾನ ಪಡೆದುಕೊಂಡಿದ್ದರು. ಮಾಡೆಲ್ ಆಗಿಯೂ ಅವರು ಕೆಲ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಿಟ್‌ನೆಸ್ ಟ್ರೇನಿಂಗ್ ಕೂಡ ನೀಡುತ್ತಾರೆ. ಅಷ್ಟೇ ಅಲ್ಲದೆ ಒಂದು ರಿಯಾಲಿಟಿ ಶೋ ನಿರೂಪಣೆ ಕೂಡ ಮಾಡಿದ್ದರು.
ಕರಾವಳಿಯ ಹೆಣ್ಣು ಹುಲಿ ಎಂದೇ ಹೆಸರು ಗಳಿಸಿರುವ ಸುಷ್ಮಾ ರಾಜ್ ಅವರು ಉಡುಪಿಯ ಅಶೋಕ್ ರಾಜ್-ರಾಧಾ ದಂಪತಿಯ ಪುತ್ರಿ ಇವರು. ಸದ್ಯ ಸುಷ್ಮಾ ರಾಜ್ ಹಾಗೂ ನಿಶಾನ್ ನರೇಂದ್ರ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಇದೇ ವಿಚಾರವನ್ನು ಸುಷ್ಮಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ