/newsfirstlive-kannada/media/media_files/2025/08/11/himanshi-narwal-2025-08-11-18-00-30.jpg)
ಈಗಂತೂ ಬಿಗ್ಬಾಸ್ದ್ದೇ ಹವಾ.. ವೀಕ್ಷಕರ ಚಿತ್ತ ಈಗ ಬಿಗ್ಬಾಸ್ ಮೇಲೆ ನೆಟ್ಟಿದೆ. ಈಗಾಗಲೇ ಕನ್ನಡ, ತೆಲುಗು ಸೇರಿ ಹಲವು ಭಾಷೆಗಳಲ್ಲಿ ಬಿಗ್ಬಾಸ್ ಶೋ ಆರಂಭಿಸಲು ತೆರೆಮರೆಯಿಂದ ಸಿದ್ಧತೆ ನಡೆಸಲಾಗುತ್ತಿದೆ. ಇದರ ಮಧ್ಯೆ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ 19 ಆಗಸ್ಟ್ 24ರಂದು ಗ್ರ್ಯಾಂಡ್ ಆಗಿ ಶುರುವಾಗುತ್ತಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ನ್ಯೂಸ್.. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ
ಸಾಮಾನ್ಯವಾಗಿ ಬಿಗ್ಬಾಸ್ ಶೋ ಶುರುವಾಗುವ ಮುನ್ನ ಕೆಲವೊಂದು ಹೆಸರುಗಳು ಹರಿದಾಡುತ್ತಲೇ ಇರುತ್ತವೆ. ಆದ್ರೆ ಇದೀಗ ಈ ಬಾರಿಯ ಹಿಂದಿ ಬಿಗ್ಬಾಸ್ ಸೀಸನ್ 19ಕ್ಕೆ ಹಿಮಾಂಶಿ ನರ್ವಾಲ್ ಹೋಗುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ.
ಹೌದು, ಹಿಮಾಂಶಿ ನರ್ವಾಲ್ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪತಿಯನ್ನು ಕಳೆದುಕೊಂಡವರು. ವಿನಯ್ ಮತ್ತು ಹಿಮಾಂಶಿ ಹನಿಮೂನ್‌ಗೆಂದುಕಾಶ್ಮೀರಕ್ಕೆ ಹೋದಾಗ ಭಯೋತ್ಪಾದಕರು ನೌಕಾಪಡೆಯ ಅಧಿಕಾರಿ ವಿನಯ್ನರ್ವಾಲ್ ಅವರನ್ನು ಗುಂಡಿಕ್ಕಿ ಕೊಂದಿದ್ದರು.
ಆದ್ರೆ, ಇದೀಗ ಭಯೋತ್ಪಾದಕರ ದಾಳಿಯಿಂದ ಹುತಾತ್ಮರಾದ ನೌಕಾಪಡೆಯ ಅಧಿಕಾರಿ ವಿನಯ್ನರ್ವಾಲ್ ಪತ್ನಿ ಬಿಗ್ಬಾಸ್ಗೆ ಹೋಗುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದ್ರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿದೆ. ಇದಕ್ಕೆಲ್ಲಾ ಆಗಸ್ಟ್ 24 ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ನಲ್ಲಿ ಅಸಲಿ ವಿಚಾರ ಬೆಳಕಿಗೆ ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ