/newsfirstlive-kannada/media/media_files/2025/10/15/raghu-dixit-and-varijashree-venugopal-2025-10-15-09-35-31.jpg)
Raghu Dixit and Varijashree Venugopal: ಕನ್ನಡದ ಖ್ಯಾತ ಗಾಯಕಿ, ಗ್ರ್ಯಾಮಿ-ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಪ್ತಪದಿ ತುಳಿಯಲಿದ್ದಾರೆ.
ಇದೇ ಅಕ್ಟೋಬರ್ ತಿಂಗಳಲ್ಲಿ ಇಬ್ಬರ ವಿವಾಹ ಸಮಾರಂಭ ನೆರವೇರಲಿದೆ. ಇಬ್ಬರೂ ತುಂಬಾ ವರ್ಷಗಳ ಗೆಳೆಯರಾಗಿದ್ದು, ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾರ್ಯಕ್ರಮ ನೀಡಿದ್ದಾರೆ. ಟಗರು, ಡಾರ್ಲಿಂಗ್, ಆಚಾರ್ ಅಂಡ್ ಕೋ ಸೇರಿದಂತೆ ಹಲವು ಸಿನಿಮಾಗಳಿಗೆ ಹಾಡು ಹಾಡಿದ್ದಾರೆ.
ಇದನ್ನೂ ಓದಿ: ನಶೆಗಾಗಿ ಕೆಮ್ಮು ಸಿರಪ್ ಬಳಕೆ.. ದಾವಣಗೆರೆಯಲ್ಲಿ ಸಿಕ್ಕಿಬಿದ್ದ ಅತಿ ದೊಡ್ಡ ಜಾಲ..!
ಹೊಸ ಆರಂಭವು ಆಳವಾದ ನೆಲೆಯನ್ನು ನೀಡುತ್ತದೆ. ಸತ್ಯ ಹೇಳಬೇಕು ಅಂದರೆ ಇದು ಬರುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದುದ್ದಕ್ಕೂ ಒಂಟಿಯಾಗಿರಲು ನನ್ನನ್ನು ನಾನು ಸಿದ್ಧಪಡಿಸಿಕೊಂಡಿದ್ದೆ. ಆದರೆ ಜೀವನ ಬೇರೆಯದ್ದೇ ಪ್ಲಾನ್ ಹೊಂದಿತ್ತು. ನಮ್ಮಿಬ್ಬರ ಬಲವಾದ ಸ್ನೇಹ ಸ್ವಾಭಾವಿಕವಾಗಿ ಪ್ರೀತಿ, ಒಡನಾಟವಾಗಿ ವಿಕಸನಗೊಂಡಿತು. ನಾವು ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುತ್ತೇವೆ. ವಾರಿಜಶ್ರೀ ಪೋಷಕರ ಆಶೀರ್ವಾದದೊಂದಿಗೆ ಜೀವನದ ಈ ಹೊಸ ಅಧ್ಯಾಯ ಒಟ್ಟಿಗೆ ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ ಅಂತಾ ಮಾಧ್ಯಮವೊಂದು ವರದಿ ಮಾಡಿದೆ.
ಈ ಹಿಂದೆ ರಘು ದೀಕ್ಷಿತ್, ಕೊರಿಯೋಗ್ರಾಫರ್ ಹಾಗೂ ಡ್ಯಾನ್ಸರ್ ಆಗಿದ್ದ ಮಯೂರಿ ಉಪಾಧ್ಯ (Mayuri Upadhya) ರನ್ನು ಮದುವೆ ಆಗಿದ್ದರು. 2019ರಲ್ಲಿ ಇಬ್ಬರು ಡಿವೋರ್ಸ್ ಪಡೆದು ಬೇರೆ ಬೇರೆಯಾಗಿದ್ದಾರೆ.
ಇದನ್ನೂ ಓದಿ: ನಶೆಗಾಗಿ ಕೆಮ್ಮು ಸಿರಪ್ ಬಳಕೆ.. ದಾವಣಗೆರೆಯಲ್ಲಿ ಸಿಕ್ಕಿಬಿದ್ದ ಅತಿ ದೊಡ್ಡ ಜಾಲ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us