/newsfirstlive-kannada/media/media_files/2025/10/15/davanagere-cough-syrup-2025-10-15-08-48-19.jpg)
ದಾವಣಗೆರೆ: ಕೆಮ್ಮು ಸಿರಪ್‌ನಿಂದ (Cough syrup) ಮಕ್ಕಳ ಸರಣಿ ಸಾವು ಮಧ್ಯೆ ಮತ್ತೊಂದು ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮಾದಕ ವ್ಯಸನಿಗಳು ನಶೆಗಾಗಿ ಕೆಮ್ಮು ಸಿರಪ್ ಬಳಕೆ ಮಾಡ್ತಿರೋದು ಪತ್ತೆಯಾಗಿದೆ.
ದಾವಣಗೆರೆ ಎಸ್‌ಪಿ ಕಚೇರಿಯ ಮಾದಕ ದ್ರವ್ಯ ನಿಗ್ರಹ ಪಡೆಯು ವಿಶೇಷ ಕಾರ್ಯಾಚರಣೆ ನಡೆಸಿ ಐವರನ್ನ ಬಂಧಿಸಿದೆ. ದಾವಣಗೆರೆಯ ದೇವರಾಜ ಅರಸು ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಅಕ್ರಮವಾಗಿ ಕೆಮ್ಮು ಸಿರಪ್ ಮಾರಾಟ ಮಾಡ್ತಿದ್ದವರನ್ನು ಅರೆಸ್ಟ್ ಮಾಡಿದೆ.
ಇದನ್ನೂ ಓದಿ: ವಿಂಡೀಸ್​​​ ವಿರುದ್ಧ ಸರಣಿ ಗೆಲುವು.. ಟೀಂ ಇಂಡಿಯಾಗೆ 5 ಸಿಹಿ ಸುದ್ದಿ..!
ದಾವಣಗೆರೆ SPS ನಗರದ ಶಿವಕುಮಾರ್ (38), ಮೆಹಬೂಬ್ ನಗರದ ಅಜಿಮುದ್ದೀನ್ (37), ದೇವರಾಜ ಅರಸ ಬಡಾವಣೆಯ ಮಹಮದ್ ಶಾರೀಕ್, ಹೊನ್ನೆಬಾಗಿ ನಿವಾಸಿ ಸೈಯ್ಯದ್ ಬಾಬು, ಚನ್ನಗಿರಿಯ ಆಟೋಬಾಬು (48) ಬಂಧಿತ ಆರೋಪಿಗಳು.
ವಿವಿಧ ಕಂಪನಿಯ 100mlನ 400 ಕೆಮ್ಮು ಸಿರಪ್, ಮಾತ್ರೆಗಳು ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೇರೆಯವರ ಬಳಿ ಮೆಡಿಕಲ್ ಲೈಸೆನ್ಸ್ ಖರೀದಿಸಿದ್ದ ಶಿವಕುಮಾರ್, ಆ ಲೈಸೆನ್ಸ್ ಹೆಸರಲ್ಲಿ ಹೊರರಾಜ್ಯದಿಂದ ಕೆಮ್ಮು ಸಿರಪ್ ತರಿಸುತ್ತಿದ್ದ. ಯುವಕರು, ದಿನಗೂಲಿ ಕಾರ್ಮಿಕರನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡ್ತಿದ್ದರು. ಬಸವ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಇದನ್ನೂ ಓದಿ: ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಭೇಟಿ.. ಈಗ ಹೇಗಿದೆ ದರ್ಶನ್​ಗೆ ಸವಲತ್ತು..?
ವೈದ್ಯರ ಪ್ರಿಸ್ಕ್ರಿಪ್ಶನ್ ಇಲ್ಲದೇ ಈ ಕೆಮ್ಮು ಸಿರಪ್ ಮಾರಾಟ ಮಾಡುವಂತಿಲ್ಲ. ಆದರೆ ಇವರು ಯುವಸಮೂಹ, ವ್ಯಸನಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡ್ತಿದ್ದರು. 70 ರೂಪಾಯಿಯ ಒಂದು ಸಿರಪ್​​ಗೆ 300 ರಿಂದ 500 ರೂಪಾಯಿವರೆಗೂ ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ: ನಿಮ್ಮ ಮಗುವಿನ ಹೆಸರಲ್ಲಿ instagram ಖಾತೆ ಇದ್ಯಾ? ಹೊಸ ಗೈಡ್​ಲೈನ್ಸ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ