Advertisment

ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಭೇಟಿ.. ಈಗ ಹೇಗಿದೆ ದರ್ಶನ್​ಗೆ ಸವಲತ್ತು..?

ಜೈಲಿನಲ್ಲಿ ನಟ ದರ್ಶನ್​ಗೆ ಮತ್ತೆ ಬ್ಯಾಕ್​ಪೇನ್ ಬೆನ್ನುಬಿದ್ದಿದೆ.. ಜೈಲಾಧಿಕಾರಿಗಳಿಗೆ ದೂರು ನೀಡಿದ್ದ ಬೆನ್ನಲ್ಲೇ ಈಗ ಜೈಲಿನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ತಜ್ಞರು ಫಿಸಿಯೋಥೆರಪಿ ಮಾಡಿದ್ದಾರೆ. ಇದ್ರ ನಡುವೆ ಕೋರ್ಟ್​ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಕೆಲ ಪರಿಶೀಲನೆ ನಡೆಸಿದ್ದಾರೆ.

author-image
Ganesh Kerekuli
Darshan (6)

ಆರೋಪಿ ದರ್ಶನ್

Advertisment

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್​ಗೆ ಮತ್ತೆ ಬ್ಯಾಕ್​ಪೇನ್ ಬೆನ್ನುಬಿದ್ದಿದೆ.. ಜೈಲಾಧಿಕಾರಿಗಳಿಗೆ ದೂರು ನೀಡಿದ್ದ ಬೆನ್ನಲ್ಲೇ ಈಗ ಜೈಲಿನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದ್ದು, ತಜ್ಞರು ಫಿಸಿಯೋಥೆರಪಿ ಮಾಡಿದ್ದಾರೆ. ಇದ್ರ ನಡುವೆ ಕೋರ್ಟ್​ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಕೆಲ ಪರಿಶೀಲನೆ ನಡೆಸಿದ್ದಾರೆ.

Advertisment

ನಟ ದರ್ಶನ್​ಗೆ ಮತ್ತೆ ಬೆನ್ನುನೋವು ಬೆಂಬಿಡದೇ ಕಾಡ್ತಿದ್ಯಂತೆ.. ಸುಪ್ರೀಂ ಕೋರ್ಟ್​ ಬೇಲ್ ರದ್ದು ಮಾಡಿದ ಮೇಲೆ ಜೈಲು ಸೇರಿದ ದಾಸನಿಗೆ ಕಳೆದೊಂದು ವಾರದಿಂದ ಬೆನ್ನುನೋವು ಕಾಣಿಸಿಕೊಂಡಿದೆ.. ದರ್ಶನ್ ದೂರು ಬೆನ್ನಲ್ಲೇ ಜೈಲಾಧಿಕಾರಿಗಳು ಜೈಲಿನಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದು, C.V.ರಾಮನ್ ಆಸ್ಪತ್ರೆಯ ನಾಲ್ವರು ವೈದ್ಯರಿಂದ ಫಿಸಿಯೋಥೆರಪಿ ಟ್ರೀಟ್​​ಮೆಂಟ್ ಮಾಡಿದ್ದಾರೆ. ಜೈಲಿನಲ್ಲಿ ನೆಲದ ಮೇಲೆ ಮಲಗ್ತಿರೋದ್ರಿಂದ ಮತ್ತೆ ಮೊಣಕೈ ನೋವು ಶುರುವಾಗಿದ್ದು ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: 10th ಐಟಿಐ, ಡಿಪ್ಲೋಮಾ ಪಾಸ್​ ಆದವರಿಗೆ ISROದಲ್ಲಿ ಉದ್ಯೋಗಗಳು.. ಸಂಬಳ 44,900 ರೂಪಾಯಿ!

ಹಾಸಿಗೆ, ಹೊದಿಕೆ ಸೇರಿದಂತೆ ಇನ್ನಿತರ ಸವಲತ್ತುಗಳ ಕುರಿತು ದರ್ಶನ್​ ಪರ ವಕೀಲರು ಮೂರು ಅರ್ಜಿಗಳನ್ನ ಹಾಕಿದ್ರು. ಪ್ರತ್ಯೇಕ ಅರ್ಜಿಗಳನ್ನ ಸಲ್ಲಿಸಿ ಖುದ್ದು ನ್ಯಾಯಾಧೀಶರೇ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿ ಅಂತ ಮನವಿ ಮಾಡಿದ್ರು. ಈ ಅರ್ಜಿಗೆ ಅಧಿಕಾರಿಗಳ ಮೂಲಕ ಪರಿಶೀಲನೆಗೆ ಕೋರ್ಟ್​ ನಿರ್ದೇಶ‌ನ ನೀಡಿದೆ.

Advertisment

ಹೇಗಿದೆ ದರ್ಶನ್​ಗೆ ಸವಲತ್ತು? 

ಕೋರ್ಟ್ ಆದೇಶದ ಮೇರೆಗೆ ನಿನ್ನೆ ಮಧ್ಯಾಹ್ನ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವರದರಾಜು ತಂಡ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದರ್ಶನ್​ಗೆ ನಿಯಮಾವಳಿ ಅನುಸಾರ ಸೌಲಭ್ಯ ನೀಡಲಾಗಿದೆಯೆ? ಕೋರ್ಟ್ ಆದೇಶ ಹಾಗೂ ಜೈಲಿನ ಮ್ಯಾನ್ಯುಯಲ್ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ದರ್ಶನ್ ಬ್ಯಾರಕ್​ನಲ್ಲಿ ಪರಿಶೀಲನೆ ನಡೆಸಿದ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು, ನೀಡಿರುವ ಸವಲತ್ತುಗಳ ಕುರಿತು ಕೋರ್ಟ್​ಗೆ ವರದಿ ಸಲ್ಲಿಸಲಿದ್ದಾರೆ. ದರ್ಶನ್​ಗೆ ಸವಲತ್ತುಗಳನ್ನ ನೀಡುತ್ತಿಲ್ಲ ಎಂದು ದರ್ಶನ್​ ಪರ ವಕೀಲರು ಪ್ರತ್ಯೇಕ ಅರ್ಜಿ ಸಲ್ಲಿಸಿ ಖುದ್ದು ನ್ಯಾಯಾಧೀಶರೇ ಪರಿಶೀಲನೆ ಮಾಡಿ ಎಂದು ಮನವಿ ಮಾಡಿದ್ದರು. ದರ್ಶನ್ ಪರ ವಕೀಲರ ಅರ್ಜಿಗೆ ಅಧಿಕಾರಿಗಳ ಮೂಲಕ ಪರಿಶೀಲನೆಗೆ ನಿರ್ದೇಶ‌ನ ನೀಡಲಾಗಿದೆ. ಉಲ್ಲಂಘನೆ ಮಾಡಿ ಸವಲತ್ತುಗಳನ್ನ ನಿರಾಕರಿಸಲಾಗಿದೆಯೇ ಅಂತ ಪರಿಶೀಲಿಸಿದ್ದು, ಇದೇ ಅಕ್ಟೋಬರ್ 18 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ.

ಈ ಬಾರಿ ಬೆನ್ನು ನೋವೇ ಇರಲಿ.. ಏನೇ ನೆಪ ಹೇಳಲಿ.. ಅದೆಷ್ಟೇ ದೊಡ್ಡ ಆರೋಗ್ಯ ಸಮಸ್ಯೆ ಕಾಡಿದ್ರೂ ಸುಪ್ರೀಂ ಕೋರ್ಟ್​ ಮಾತ್ರ ಬೇಲ್​ ಕೊಡೋ ಚಾನ್ಸ್​ ದೂರಾದೂರ. ಸದ್ಯ ಪರಿಶೀಲನೆ ಮಾಡಿರೋ ಅಧಿಕಾರಿಗಳು ನೀಡೋ ವರದಿ ಮೇಲೆ ದರ್ಶನ್ ಸವಲತ್ತಿನ ಭವಿಷ್ಯ ನಿಂತಿದೆ. 

ಇದನ್ನೂ ಓದಿ:ಕರೆಕ್ಟ್​ ಆಗಿ ಈ 5 ಟಿಪ್ಸ್​ ಫಾಲೋ ಮಾಡಿದ್ರೆ ದೇಹದ ತೂಕ ಬೇಗನೇ ಇಳಿಸಬಹುದು.. ಹೇಗೆ?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pavitra Gowda Darshan in jail Actor Darshan
Advertisment
Advertisment
Advertisment