/newsfirstlive-kannada/media/media_files/2025/11/06/rajinikanth_173th_movie_kamal_haasan-2025-11-06-09-20-10.jpg)
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯ ಅಂದರೆ ಅಲ್ಲಿ ಸ್ಟೈಲ್, ಡ್ಯಾನ್ಸ್, ಮಾಸ್ ಡೈಲಾಗ್​, ಪ್ರೀತಿ, ಪ್ರೇಮಾ ಎಲ್ಲ ಸಿನಿಮಾದಲ್ಲಿ ತುಂಬಿ ತುಳುಕುತ್ತಿರುತ್ತದೆ. ಇಳಿ ವಯಸ್ಸಲ್ಲೂ ರಜನಿಕಾಂತ್ ಯಂಗ್​ಸ್ಟರ್​ನಂತೆ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಾರೆ. ರಜನಿಕಾಂತ್ ಜೊತೆ ದಿಗ್ಗಜ ಕಮಲ್ ಹಾಸನ್​ ಜೋಡಿಯಾದ್ರೆ ಹೇಗಿರುತ್ತೆ?. ಆಹಾ.. ಸೂಪರೋ.. ಸೂಪರ್​ ಅಲ್ವಾ. ಫ್ಯಾನ್ಸ್​ ಆಸೆ ಈಡೇರಿಸುವುದಕ್ಕೆ ಈ ಇಬ್ಬರು ಲೆಜೆಂಡರಿಗಳು ಸೇರಿ ಅದ್ಭುತವಾದ ಪ್ರಾಜೆಕ್ಟ್​ಗೆ ಕೈಹಾಕಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಗನ್ ಕಮಲ್ ಹಾಸನ್ ಅವರು ಸಿನಿಪ್ರೇಮಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಲೈವಾ ರಜನಿಕಾಂತ್ ಅವರ ಮುಂದಿನ 173ನೇ ಮೂವಿಯನ್ನು ಘೋಷಣೆ ಮಾಡಲಾಗಿದೆ. ವಿಶೇಷ ಏನೆಂದರೆ ಈ ಸಿನಿಮಾಕ್ಕೆ ಕಮಲ್ ಹಾಸನ್ ಅವರು ಬಂಡವಾಳ ಅಂದರೆ ಹಣ ಹೂಡಿಕೆ ಮಾಡುತ್ತಿದ್ದಾರೆ.
ಕಮಲ್ ಹಾಸನ್ ಅವರು ತಮ್ಮದೇ ಆದ ಸಿನಿಮಾ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ ಕಂಪನಿ ಮೂಲಕ ರಜನಿಕಾಂತ್ ಅವರ 173ನೇ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಇದನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಈ ಬಿಗ್ ಬಜೆಟ್ ಮೂವಿಗೆ ಡೈರೆಕ್ಟರ್ ಯಾರು ಎನ್ನುವ ಕೂತುಹಲಕ್ಕೂ ಉತ್ತರ ಇಲ್ಲಿದೆ.
/filters:format(webp)/newsfirstlive-kannada/media/post_attachments/wp-content/uploads/2024/12/RAJANIKANTH.jpg)
ರಜನಿಕಾಂತ್ ಸಿನಿಮಾಗೆ ನಿರ್ದೇಶಕ ಯಾರು?
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟಿ ಖುಷ್ಬು ಸುಂದರ್ ಅವರ ಗಂಡ ಸಿ.ಸುಂದರ್ ತಲೈವಾಗೆ 173ನೇ ಮೂವಿ ನಿರ್ದೇಶನ ಮಾಡಲಿದ್ದಾರೆ. ನಿರ್ದೇಶಕ ಸಿ.ಸುಂದರ್ ಅವರು, ರಜನಿಕಾಂತ್​ಗೆ ಈ ಹಿಂದೆ ಸೂಪರ್ ಹಿಟ್​ ಮೂವಿ ಕೊಟ್ಟವರು. ಅದೇ ಅರುಣಾಚಲಂ ಎಂಬ ಸೂಪರ್ ಹಿಟ್ ಚಿತ್ರ ಕೊಟ್ಟ ಡೈರೆಕ್ಟರೇ ಪಿ.ಸುಂದರ್​ ಅವರು. ರಜನಿಗೆ ಮಾತ್ರವಲ್ಲ, ಕಮಲ್ ಹಾಸನ್​ಗೂ ಅನ್ಬೆ ಶಿವಂ ಎಂಬ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದರು.
ಸಿನಿಮಾ ಯಾವಾಗ ರಿಲೀಸ್?
ಸಿ ಸುಂದರ್ ನಿರ್ದೇಶನ ಮಾಡಲಿರುವ, ಕಮಲ್ ಹಾಸನ್​ ಸಂಸ್ಥೆ ನಿರ್ಮಾಣ ಮಾಡಲಿರುವ ರಜನಿಕಾಂತ್ ಅವರ ನಟಿಸಲಿರುವ ಸಿನಿಮಾ 2027ಕ್ಕೆ ರಿಲೀಸ್ ಅಗಲಿದೆ. ಅದು 2027ರ ಪೊಂಗಲ್ ಹಬ್ಬಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಅಂದುಕೊಂಡಂತೆ ಸಿನಿಮಾದ ಎಲ್ಲ ಕಾರ್ಯಗಳು ಪೂರ್ಣವಾದರೆ ಪೊಂಗಲ್​ಗೆ ರಜನಿಕಾಂತ್ ಅಭಿಮಾನಿಗಳ ಸಂಭ್ರಮ ದೊಡ್ಡದಾಗಿರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us