/newsfirstlive-kannada/media/media_files/2025/08/20/rajinikanth_kamal_haasan-2025-08-20-14-44-47.jpg)
ದಕ್ಷಿಣ ಭಾರತದ ಸೂಪರ್ ಸ್ಟಾರ್ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು 46 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಲೆಜೆಂಡರಿ ಹೀರೋಗಳು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ಈ ಸಿನಿಮಾವನ್ನು ಲೋಕೇಶ್ ಕನಕರಾಜ್ ಅವರು ನಿರ್ದೇಶನನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗನಾಯಗನ್ ಕಮಲ್ ಹಾಸನ್ ಅವರಿಗೆ ಈಗಾಗಲೇ 70 ವರ್ಷಗಳು ದಾಟಿದ್ದರೂ ಗ್ಯಾಂಗ್ಸ್ಟರ್ಗಳಾಗಿ ಸಿನಿಮಾದಲ್ಲಿ ಮಿಂಚಲಿದ್ದಾರಂತೆ. ಈ ಕುರಿತು ಸಿನಿಮಾ ಸ್ಕ್ರೀಪ್ಟ್ ಅನ್ನು ಕೊರೊನಾಗಿಂತ ಮೊದಲೇ ಸಿದ್ಧವಾಗಿತ್ತು. ಆದರೆ ಇಷ್ಟು ದಿನ ಈ ಸ್ಕ್ರೀಪ್ಟ್ ಅನ್ನು ಹಾಗೇ ಇಡಲಾಗಿತ್ತು. ಈಗ ಮತ್ತೆ ಇದು ಮುನ್ನೆಲೆಗೆ ಬಂದಿದ್ದು ಹೆಸರಿಡದ ಸಿನಿಮಾ ಮತ್ತೊಂದು ಹಂತಕ್ಕೆ ಹೋಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇದನ್ನೂ ಓದಿ:T20 World Cup Final; ಸೂರ್ಯಕುಮಾರ್ ಕ್ಯಾಚ್ ಬಗ್ಗೆ ರಾಯುಡು ವಿವಾದಾತ್ಮಕ ಹೇಳಿಕೆ!
ದಿಗ್ಗಜ ನಟರು ಅಭಿನಯಿಸಲಿದ್ದಾರೆ ಎನ್ನುವ ಸಿನಿಮಾ ಇನ್ನು ಮಾತುಕತೆಯಲ್ಲಿದೆ. ಇದರ ನಡುವೆ ಲೋಕೇಶ್ ಕನಕರಾಜ್ ಅವರು ಕಾರ್ತಿ ಜೊತೆ ಖೈದಿ-2 ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರ ಮುಂಬರುವ ದೊಡ್ಡ ಪ್ರಾಜೆಕ್ಟ್ ಇದಾಗಿದ್ದು, ಹೀಗಾಗಿ ಅವರಿಗಾಗಿ ನಿರ್ದೇಶಕರು ಇನ್ನಷ್ಟು ಕಾಯಬೇಕಾಗಿದೆ ಎಂದು ಹೇಲಾಗುತ್ತಿದೆ.
ಈ ಹಿಂದೆ ರಜನಿಕಾಂತ್ ಹಾಗೂ ಕಮಲ್ ಹಾಸನ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಜನರ ಮನ ಗೆದ್ದಿದ್ದರು. ಆದರೆ ಈ ದಿಗ್ಗಜ ನಟರು 1979ರಲ್ಲಿ ರಿಲೀಸ್ ಆದಂತಹ ಅಲಾವುದ್ದೀನುಮ್ ಅಲ್ಭೂತ ವಿಲಕ್ಕುಮ್ (Alauddinum Albhuta Vilakkum) ಎನ್ನುವ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರು ಸೇರಿ ಒಟ್ಟಿಗೆ ಯಾವುದೇ ಸಿನಿಮಾದಲ್ಲಿ ಮತ್ತೆ ಅಭಿನಯ ಮಾಡಿರಲಿಲ್ಲ. ಸದ್ಯ 46 ವರ್ಷಗಳ ಬಳಿಕ ರಜನಿ-ಕಮಲ್ ಸ್ಕ್ರೀನ್ ಶೇರ್ ಮಾಡುತ್ತಾರೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ