T20 World Cup Final; ಸೂರ್ಯಕುಮಾರ್ ಕ್ಯಾಚ್ ಬಗ್ಗೆ ರಾಯುಡು ವಿವಾದಾತ್ಮಕ ಹೇಳಿಕೆ!

ಅಂಬಾಟಿ ರಾಯುಡು ಆಪ್​ ದಿ ಫೀಲ್ಡ್​ನಲ್ಲಿ ಸದ್ದು ಮಾಡಿದ್ದೇ ಹೆಚ್ಚು. ಕ್ರಿಕೆಟ್​ನಿಂದ ದೂರವಾಗಿದ್ದರೂ, ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಇದಕ್ಕೆ ಕಾರಣ ರಾಯುಡು ನೀಡೋ ವಿವಾದಾತ್ಮಕ ಹೇಳಿಕೆಗಳು.

author-image
Bhimappa
ambati_rayudu_SYRYA
Advertisment

ಪಬ್ಲಿಸಿಟಿಗಾಗಿ ಒಂದಿಲ್ಲೊಂದು ಪಬ್ಲಿಸಿಟಿ ಸ್ಟಂಟ್ಸ್​ ಮಾಡೋರನ್ನ ನಾವು ನೋಡಿದ್ದೇವೆ. ಕ್ರಿಕೆಟ್​ನಲ್ಲಿ ಅಂತಾ ಬಂದ್ರೆ ಅಂಬಾಟಿ ರಾಯುಡು ಈ ವಿಚಾರದಲ್ಲಿ ಮುಂದಿರ್ತಾರೆ. ಈ ರಾಯುಡು ತಿಳಿದು ಮಾತನಾಡ್ತಾರೋ, ಇಲ್ವೋ ತಲೆಕೆಟ್ಟು ಮಾತನಾಡ್ತಾರೋ ಅನ್ನೋದೆ ಅರ್ಥವಾಗಲ್ಲ. 

ಅಂಬಾಟಿ ರಾಯುಡು ಆನ್​ ಫೀಲ್ಡ್​ನಲ್ಲಿ ಸದ್ದು ಮಾಡಿದಕ್ಕಿಂತ. ಆಪ್​ ದಿ ಫೀಲ್ಡ್​ನಲ್ಲಿ ಸದ್ದು ಮಾಡಿದ್ದೇ ಹೆಚ್ಚು. ಕ್ರಿಕೆಟ್​ನಿಂದ ದೂರವಾಗಿದ್ರೂ, ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗ್ತಾನೇ ಇರ್ತಾರೆ. ಇದಕ್ಕೆ ಕಾರಣ ರಾಯುಡು ನೀಡೋ ವಿವಾದಾತ್ಮಕ ಹೇಳಿಕೆಗಳು. ಇದನ್ನ ಪಬ್ಲಿಸಿಟಿ ಸ್ಟಂಟ್ಸ್​ಗಾಗಿ ನೀಡ್ತಾರಾ..? ಇಲ್ಲ ಮೆಂಟಲ್ ಇಶ್ಯುಯಿಂದ ಹೇಳಿಕೆ ನೀಡ್ತಾರಾ ಅನ್ನೋದೆ ಅರ್ಥವಾಗಲ್ಲ. ಇದೀಗ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆದ್ರೆ, ಈ ಸಲ ರಾಯುಡು ನೀಡಿರುವ ಹೇಳಿಕೆ 2024ರ ಟಿ20 ವಿಶ್ವಕಪ್ ಫೈನಲ್ಸ್​ ಬಗ್ಗೆ. 

ambati_rayudu (2)

ಅದು ಕ್ಲೀನ್ ಕ್ಯಾಚ್ ಅಲ್ಲ.. ಬೌಂಡರಿ ಲೈನ್ ಹಿಂದಕ್ಕೆ ಸರಿದಿತ್ತು..!​​ 

2024ರ ಟಿ20 ವಿಶ್ವಕಪ್​ ಗೆಲುವಿಗೆ ಕಾರಣವಾಗಿದ್ದೆ ಸೂರ್ಯಕುಮಾರ್ ಹಿಡಿದಿದ್ದ ಈ ಕ್ಯಾಚ್​..! ಈ ಒಂದೇ ಒಂದು ಕ್ಯಾಚ್, ಟೀಮ್ ಇಂಡಿಯಾದ ಹಣೆಬರಹವನ್ನೇ ಬದಲಿಸಿತ್ತು. ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಿ ಟ್ರೋಫಿ ಗೆಲುವಿಗೆ ಕಾರಣವಾಯ್ತು. ಇದೆಲ್ಲಾ ಮುಗಿದು ಒಂದೂ ವರ್ಷಕ್ಕೂ ಅಧಿಕವಾಗಿದೆ. ಇದೀಗ ಮತ್ತೆ ಆ ಕ್ಯಾಚ್ ಕುರಿತು ಮಾತನಾಡಿರುವ ರಾಯುಡು, ಬೌಂಡರಿ ಲೈನ್​ ಹಿಂದೆ ಸರಿದಿತ್ತು. ಹೀಗಾಗಿ ಅದು ಸಿಕ್ಸರ್ ಎಂದಿದ್ದಾರೆ.

ವಿಶ್ವದ ಅನೇಕ ಕಾಮೆಂಟೇಟರ್ಸ್ ಅಲ್ಲಿದ್ದರು. ಬ್ರೇಕ್​​​ ವೇಳೆ ಏನಾಗುತ್ತೆ ಅಂದ್ರೆ, ಪ್ರಸಾರಕರಿಗೆ ಅನುಕೂಲವಾಗಲೆಂದು ಕುರ್ಚಿ, ಸ್ಕ್ರೀನ್ ಇಡ್ತಾರೆ. ಆ ಕಾರಣಕ್ಕಾಗಿ ಬೌಂಡರಿ ಗೆರೆಯನ್ನ ಸ್ವಲ್ಪ ಹಿಂದಕ್ಕೆ ಸರಿಸುತ್ತಾರೆ. ಕೆಲಸ ಮುಗಿದ ನಂತರವೂ ಗೆರೆ ಸರಿಪಡಿಸದ್ದರಿಂದ ಬೌಂಡರಿ ಹಿಂದಕ್ಕೆ ಸರಿದಿತ್ತು. ಸೂರ್ಯ ಕ್ಯಾಚ್ ಹಿಡಿದಿದ್ರು. ನಾವು ಮೇಲಿನಿಂದ ನೋಡಿದೆವು. ಬೌಂಡರಿ ಗೆರೆಗೆ ಅಂತರ ಇತ್ತು. ಅದು ಸಿಕ್ಸ್​ ಆಗಿತ್ತು. ಗೊತ್ತಿಲ್ಲ ಅದು ಸಿಕ್ಸರ್ ಆಗುತ್ತಿತ್ತೋ ಇಲ್ಲವೋ. ಬೌಂಡರಿ ಗೆರೆ ಸರಿಯಾದ ಜಾಗದಲ್ಲಿ ಇಟ್ಟಿದ್ದರೆ. ಸೂರ್ಯ ಒಳಗೆ ಓಡಿ ಬಂದು ಕ್ಯಾಚ್ ಹಿಡಿಯಬೇಕಿತ್ತು. ಅದು ದೇವರ ಪ್ಲಾನ್​, ವಿವಾದದ ಹೊರತಾಗಿಯೂ, ಆ ಕ್ಯಾಚ್ ನ್ಯಾಯಸಮ್ಮತವಾಗಿತ್ತು. ಕೊನೆಯಲ್ಲಿ, ದೇವರು ನಮ್ಮ ಜೊತೆ ಇದ್ದನು. 

ಅಂಬಾಟಿ ರಾಯುಡು, ಮಾಜಿ ಆಟಗಾರ

ಆರ್​ಸಿಬಿ ಬಗ್ಗೆ ಅಂಬಾಟಿ ರಾಯುಡು ವ್ಯಂಗ್ಯ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ, ಯಾವಾಗಲೂ ಉರಿದು ಬೀಳುವ ಅಂಬಾಟಿ ರಾಯುಡು, ಈಗ ಮತ್ತೆ ಆರ್​ಸಿಬಿ ಕುರಿತು ವ್ಯಂಗ್ಯವಾಡಿದ್ದಾರೆ. ಆರ್​ಸಿಬಿ 5 ಟ್ರೋಫಿ ಕ್ಲಬ್​​ಗೆ ಸೇರಬೇಕು ಅಂದ್ರೆ, 72 ವರ್ಷ ಆಗುತ್ತೆ ಎಂದು ಹೇಳಿದ್ದಾರೆ. 

ಅರ್​ಸಿಬಿ, ಮುಂಬೈ ಫೈನಲ್ ಆಡಬೇಕು ಮುಂಬೈ ಗೆಲ್ಲಬೇಕು. ಆರ್​ಸಿಬಿ ಅರ್ಥ ಮಾಡಿಕೊಳ್ಳಬೇಕಿದೆ. 5 ಟ್ರೋಫಿ ಗೆಲ್ಲುವುದು ಕಷ್ಟ. ಇದನ್ನ ಆರ್​ಸಿಬಿ ಅರಿಯಬೇಕಿದೆ. ನಾನು ಕಾಲೆಳೆಯುತ್ತೇನೆ ಅಷ್ಟೇ ಮತ್ತೇನಿಲ್ಲ. ಅವರು 5 ಟ್ರೋಫಿ ಗೆಲ್ಲಬೇಕಾದ್ರೆ. ಇನ್ನು 72 ವರ್ಷ ಆಗುತ್ತೆ. 

ಅಂಬಾಟಿ ರಾಯುಡು, ಮಾಜಿ ಆಟಗಾರ

ಅಪರೇಷನ್ ಸಿಂಧೂರ ಬಗ್ಗೆಯೂ ರಾಯುಡು ವಿವಾದ..!

ಆರ್​ಸಿಬಿ ಹಾಗೂ  ಟೀಮ್ ಇಂಡಿಯಾ ವಿಚಾರದಲ್ಲೇ ಅಲ್ಲ. ದೇಶದ ವಿಚಾರಕ್ಕೂ ರಾಯುಡು ವಿವಾದತ್ಮಾಕ ಹೇಳಿಕೆ ನೀಡಿದ್ದಿದೆ. ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿತ್ತು. ಆದ್ರೆ, ಅಂಬಾಟಿ ರಾಯುಡು, ತಮ್ಮ ಎಕ್ಸ್ ಖಾತೆಯಲ್ಲಿ ನಾವು ಕಣ್ಣಿಗೆ ಕಣ್ಣು ಎಂಬ ನೀತಿ ಅನುಸರಿಸಿದರೇ, ಇಡೀ ಜಗತ್ತೇ ಕುರುಡಾಗುತ್ತೆ ಎಂದಿದ್ದರು. ಆ ಮೂಲಕ ಪರೋಕ್ಷವಾಗಿ ಮುಯ್ಯಿಗೆ ಮುಯ್ಯಿ ಅನ್ನುವ ಬದಲು ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವ ಸಂದೇಶ ನೀಡಿದ್ದರು. ಇದು ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿತ್ತು.

ರಾಯುಡುಗೆ ಜೋಕರ್ ಎಂದಿದ್ದ ಕೆವಿನ್ ಪೀಟರ್ಸನ್..!

ಅದು 2024ರ ಐಪಿಎಲ್ ಫೈನಲ್​, ಈ ಫೈನಲ್​ ಪಂದ್ಯದಲ್ಲಿ ಕೆಕೆಆರ್​ ಹಾಗೂ ಸನ್ ರೈಸರ್ಸ್ ಮುಖಾಮುಖಿಯಾಗಿದ್ವು. ಈ ಪಂದ್ಯದ ಆರಂಭದಲ್ಲಿ ಸನ್ ರೈಸರ್ಸ್ ತಂಡವನ್ನು ಬೆಂಬಲಿಸುತ್ತಾ ಆರೆಂಜ್ ಕೋಟ್​ ಧರಿಸಿದಿದ್ದ ರಾಯುಡು, ಕೆಕೆಆರ್ ಗೆಲ್ಲುತ್ತಿದ್ದಂತೆ, ನೀಲಿ ಕೋಟ್ ಧರಿಸಿದರು. ಈ ವೇಳೆ ON AIRನಲ್ಲೇ ಕೆವಿನ್ ಪೀಟರ್ಸನ್, ರಾಯುಡುಗೆ ಜೋಕರ್​ ಎಂದಿದ್ದರು. ಆ ಮೂಲಕ ರಾಯುಡು ಗೋಸುಂಬೆ ಆಟಕ್ಕೆ ಟಾಂಗ್ ನೀಡಿದರು.

ಇದನ್ನೂ ಓದಿ: ದರ್ಶನ್ ಸೆಲೆಬ್ರಿಟಿಗಳಿಗೆ ಗುಡ್​ನ್ಯೂಸ್​.. ಡೆವಿಲ್ ಸಿನಿಮಾ ಫಸ್ಟ್ ಸಾಂಗ್​ ರಿಲೀಸ್​ಗೆ ಮುಹೂರ್ತ ಫಿಕ್ಸ್​

SYRYA_ROHIT

ಆನ್​​ಫೀಲ್ಡ್, ಆಫ್​ ಫೀಲ್ಡ್​ ಎಲ್ಲೆಡೆ ಕಿರಿಕ್ ರಾಯುಡು..!

ಕ್ರಿಕೆಟ್​​ನಿಂದ ದೂರವಾದ ಬಳಿಕ ಒಂದಿಲ್ಲೊಂದು ವಿವಾದ ಮಾಡಿಕೊಳ್ತಿರುವ ರಾಯುಡು, ಜೀವನದುದ್ದಕ್ಕೂ ಕಿರಿಕ್ ಮಾಡಿಕೊಂಡು ಸುದ್ದಿಯಾದವ್ರೇ. 2017ರಲ್ಲಿ ಹೈದ್ರಾಬಾದ್​ನಲ್ಲಿ ಬೆಳ್ಳಂಬೆಳಗ್ಗೆ ವಾಕಿಂಗ್​ ಮಾಡ್ತಿದ್ದ ಹಿರಿಯ ನಾಗರಿಕರೊಬ್ಬರು, ಬುದ್ದಿ ಮಾತು ಹೇಳಿದಕ್ಕೆ ದರ್ಪ ತೋರಿದ್ರು. ಹೊಡೆಯೋಕೆ ಹೋಗಿದ್ರು. 

ಮುಂಬೈ ಇಂಡಿಯನ್ಸ್​​ ಪರ ಆಡ್ತಿದ್ದಾಗ ಮಿಸ್​ ಫೀಲ್ಡ್​ ಮಾಡಿದ್ದ ರಾಯುಡು ಮೇಲೆ ಹರ್ಭಜನ್​ ಸಿಂಗ್​ ಅಸಮಾಧಾನ ವ್ಯಕ್ತಪಡಿಸಿದ್ರು. ಇದರಿಂದ ಸಿಟ್ಟಿಗೆದ್ದಿದ್ದ ರಾಯುಡು, ಮೈದಾನದಲ್ಲೇ ಜಗಳಕ್ಕೆ ನಿಂತಿದ್ದರು. ಅಂಪೈರ್​ಗಳ ಜೊತೆ ಸಹ ಆಟಗಾರರ ಜೊತೆ ಒಂದಿಲ್ಲೊಂದು ಕಿರಿಕ್ ಮಾಡಿಕೊಂಡಿದ್ದ ರಾಯುಡು, ಈಗ ಮತ್ತೆ ವಿವಾದಾತ್ಮಕವಾಗಿ ಮಾತನಾಡಿರುವುದರಲ್ಲಿ ಹೊಸದೇನಲ್ಲ ಬಿಡಿ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

World Cup
Advertisment