/newsfirstlive-kannada/media/media_files/2026/02/13/ram-charan-1-2026-02-13-10-33-52.jpg)
ಟಾಲಿವುಡ್‌ನ ‘ಗ್ಲೋಬಲ್ ಸ್ಟಾರ್’ ರಾಮ್ ಚರಣ್ (Ram Charan) ಮತ್ತು ಪತ್ನಿ ಉಪಾಸನಾ ಕೊನಿಡೆಲ (Upasana) ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಮೆಗಾ ದಂಪತಿ ತಮ್ಮ ಮುದ್ದಾದ ಅವಳಿ ಮಕ್ಕಳಿಗೆ (Twins) ನಾಮಕರಣ ಮಾಡಿದ್ದು, ಮಕ್ಕಳ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪೋಷಕರು ಮತ್ತು ಸಂಪ್ರದಾಯದಂತೆ ಸುಂದರವಾದ ಹೆಸರುಗಳನ್ನು ಆಯ್ಕೆ ಮಾಡಿದ್ದಾರೆ.
ಇದನ್ನೂ ಓದಿ: ‘ಆನ್‌ಲೈನ್ ಜ್ಯೋತಿಷಿ’ ಮಾತು ಕೇಳಿ ಅಮ್ಮನಿಗೆ ಕೊಳ್ಳಿ ಇಟ್ಟ ಮಗಳು.. ತುಮಕೂರಲ್ಲಿ ಮೌಢ್ಯಕ್ಕೆ ಹೆತ್ತವಳು ಬಲಿ!
ಮಕ್ಕಳ ಹೆಸರೇನು?
ದಂಪತಿ ತಮ್ಮ ಗಂಡು ಮಗುವಿಗೆ ‘ಶಿವರಾಮ್’ (Shivram) ಎಂದು ಹೆಸರಿಟ್ಟರೆ, ಹೆಣ್ಣು ಮಗುವಿಗೆ ‘ಅನ್ವೀರಾ ದೇವಿ’ (Anveera Devi) ಎಂದು ನಾಮಕರಣ ಮಾಡಿದ್ದಾರೆ.
ಹೆಸರಿನ ವಿಶೇಷತೆ:
ಗಂಡು ಮಗುವಿನ ಹೆಸರು ‘ಶಿವರಾಮ್’, ಮೆಗಾಸ್ಟಾರ್ ಚಿರಂಜೀವಿ ಅವರ ಮೂಲ ಹೆಸರಾದ (ಶಿವಶಂಕರ ವರಪ್ರಸಾದ್) ‘ಶಿವ’ನ ಹೆಸರನ್ನು ಹಾಗೂ ರಾಮನ ಹೆಸರನ್ನು ಒಳಗೊಂಡಿದೆ ಎಂದು ಅಭಿಮಾನಿಗಳು ವಿಶ್ಲೇಷಿಸುತ್ತಿದ್ದಾರೆ. ಇನ್ನು ಮಗಳ ಹೆಸರು ‘ಅನ್ವೀರಾ ದೇವಿ’ ಕೂಡ ಶಕ್ತಿ ದೇವತೆಯ ಸಂಕೇತವಾಗಿ ವಿಶೇಷ ಅರ್ಥವನ್ನು ನೀಡುತ್ತದೆ.
ಮೆಗಾಸ್ಟಾರ್ ಚಿರಂಜೀವಿ ಅವರ ಮನೆಯಲ್ಲಿ ನಡೆದ ಅದ್ದೂರಿ ಹಾಗೂ ಸಾಂಪ್ರದಾಯಿಕ ಸಮಾರಂಭದಲ್ಲಿ ಈ ನಾಮಕರಣ ಶಾಸ್ತ್ರ ನೆರವೇರಿದೆ. ಕುಟುಂಬದ ಆಪ್ತರು ಮತ್ತು ಸ್ನೇಹಿತರು ಈ ಶುಭಕಾರ್ಯದಲ್ಲಿ ಭಾಗಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ರಾಮ್ ಚರಣ್ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಈ ಹಿಂದೆ (2023ರಲ್ಲಿ) ರಾಮ್ ಚರಣ್ ದಂಪತಿಗೆ ‘ಕ್ಲಿನ್ ಕಾರಾ’ (Klin Kaara) ಎಂಬ ಮಗಳು ಜನಿಸಿದ್ದಾಳೆ. ಇದೀಗ ಅವಳಿ ಮಕ್ಕಳ ಆಗಮನದೊಂದಿಗೆ ಮೆಗಾ ಕುಟುಂಬದಲ್ಲಿ ಸಂತಸ ಇಮ್ಮಡಿಯಾಗಿದೆ.
ಇದನ್ನೂ ಓದಿ: ನಡುರಸ್ತೆಯಲ್ಲೇ KSRTC ಬಸ್ ಸೀಜ್ ಮಾಡಿಸಿದ ಕೋರ್ಟ್; ಅಷ್ಟಕ್ಕೂ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us