/newsfirstlive-kannada/media/media_files/2026/02/13/tumakuru-2026-02-13-09-43-15.jpg)
ತುಮಕೂರು: ಮೌಢ್ಯ ಮತ್ತು ಕಂದಾಚಾರ ಮನುಷ್ಯನ ವಿವೇಚನೆಯನ್ನು ಎಷ್ಟರಮಟ್ಟಿಗೆ ನಾಶಮಾಡಬಲ್ಲದು ಎಂಬುದಕ್ಕೆ ಕಲ್ಪತರು ನಾಡಿನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಆನ್‌ಲೈನ್ ಜ್ಯೋತಿಷಿಯೊಬ್ಬನ (Online Astrologer) ಮಾತು ನಂಬಿ, ಹೆತ್ತ ತಾಯಿಯನ್ನೇ ಮಗಳು ತೆಗೆದಿರುವ ಘಟನೆ ತುಮಕೂರು ತಾಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ.
ಪುಷ್ಪಾವತಿ (55) ಮೃತ ದುರ್ದೈವಿ ತಾಯಿ. ಇವರ ಸ್ವಂತ ಮಗಳು ಸುಚಿತ್ರಾ (33) ಈ ಘೋರ ಕೃತ್ಯ ಎಸಗಿದ ಆರೋಪಿ.
ತಂದೆಯ ನಿಧನಕ್ಕೆ ತಾಯಿ ಕಾರಣವೆಂದ ಜ್ಯೋತಿಷಿ!
ಇದನ್ನೂ ಓದಿ: ಹೊಸಕೋಟೆಯಲ್ಲಿ ಹೃದಯ ವಿದ್ರಾವಕ ದೃಶ್ಯ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಸ್ಥಳದಲ್ಲೇ 7 ಮಂದಿ ನಿಧನ..
ಆರೋಪಿ ಸುಚಿತ್ರಾ ತುಮಕೂರು ನಗರದ ಶ್ರೀನಗರದಲ್ಲಿ ಪತಿಯೊಂದಿಗೆ ವಾಸವಿದ್ದಳು. ಸುಮಾರು ಒಂದೂವರೆ ವರ್ಷದ ಹಿಂದೆ ಸುಚಿತ್ರಾಳ ತಂದೆ ಮೃತಪಟ್ಟಿದ್ದರು. ತಂದೆಯ ಅಗಲಿಕೆಗೆ ಕಾರಣ ಹುಡುಕಲು ಸುಚಿತ್ರಾ ಆನ್‌ಲೈನ್ ಮೂಲಕ ಜ್ಯೋತಿಷಿಯೊಬ್ಬರ ಸಂಪರ್ಕಿಸಿದ್ದಳು. ಈ ವೇಳೆ ಜ್ಯೋತಿಷಿ, "ನಿನ್ನ ತಂದೆಯ ನಿಧನಕ್ಕೆ ನಿನ್ನ ತಾಯಿಯೇ ಕಾರಣ. ಆಕೆ ಮಾಟ-ಮಂತ್ರ (Black Magic) ಮಾಡಿಸಿ ತಂದೆಯನ್ನ ಬಲಿಪಡೆದಿದ್ದಾಳೆ ಎಂದು ಸುಳ್ಳು ಹೇಳಿ ನಂಬಿಸಿದ್ದಳು ಎನ್ನಲಾಗಿದೆ.
ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ
ಜ್ಯೋತಿಷಿಯ ಮಾತನ್ನೇ ವೇದವಾಕ್ಯ ಎಂದು ನಂಬಿದ ಸುಚಿತ್ರಾ, ತಾಯಿಯ ಮೇಲೆ ದ್ವೇಷ ಬೆಳೆಸಿಕೊಂಡಿದ್ದಳು. ಇದೇ ದ್ವೇಷದ ಹಿನ್ನೆಲೆಯಲ್ಲಿ ತಾಯಿ ಪುಷ್ಪವತಿ ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದಾಗ, ತಲೆದಿಂಬಿನಿಂದ ಮುಖದ ಮೇಲೆ ಒತ್ತಿ ಉಸಿರುಗಟ್ಟಿಸಿ ಮುಗಿಸಿದ್ದಾಳೆ.
ನಾಟಕವಾಡಿ ಸಿಕ್ಕಿಬಿದ್ದ ಮಗಳು
ಬಳಿಕ ಯಾರಿಗೂ ಅನುಮಾನ ಬಾರದಂತೆ ಇದನ್ನು 'ಸಹಜ ಸಾವು' (Natural Death) ಎಂದು ಬಿಂಬಿಸಲು ಸುಚಿತ್ರಾ ಪ್ರಯತ್ನಿಸಿದ್ದಳು. ತಾಯಿ ಸಹಜವಾಗಿ ಮೃತಪಟ್ಟಿದ್ದಾಳೆ ಎಂದು ಸುಳ್ಳು ಹೇಳಿ, ಶೀಘ್ರವಾಗಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಸಿದ್ದಳು. ಆದರೆ, ಮೃತದೇಹದ ಸ್ಥಿತಿ ಮತ್ತು ಆ ಸಂದರ್ಭದಲ್ಲಿ ಸುಚಿತ್ರಾಳ ವರ್ತನೆಯನ್ನು ಕಂಡು ಗ್ರಾಮಸ್ಥರಿಗೆ ಬಲವಾದ ಅನುಮಾನ ಬಂದಿದೆ. ಕೂಡಲೇ ಗ್ರಾಮಸ್ಥರು ಕ್ಯಾತಸಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಿಗೆ ಬಂದಿದೆ. ಸದ್ಯ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ಮುಂದುವರೆದ ಗೆಲುವಿನ ಓಟ.. 93 ರನ್​ಗಳ ಭರ್ಜರಿ ಗೆಲುವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us