/newsfirstlive-kannada/media/media_files/2026/02/13/hardik-pandya-15-2026-02-13-09-15-49.jpg)
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್​ ಅಬ್ಬರಿಸಿದ್ರು. ನಮಿಬಿಯಾ ಬೌಲಿಂಗ್ ದಾಳಿಯನ್ನ ಚಿಂದಿ ಉಡಾಯಿಸಿದ ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ, ಸಿಕ್ಸರ್​ಗಳ ಸುರಿಮಳೆ ಸುರಿಸಿದ್ರು.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಭರ್ಜರಿ ಸ್ಟಾರ್ಟ್ ನೀಡಿದ್ರು. 8 ಎಸೆತಗಳಲ್ಲಿ 3 ಸಿಕ್ಸರ್ 1 ಬೌಂಡ್ರಿ ಸಿಡಿಸಿದ ಸಂಜು ಸ್ಯಾಮ್ಸನ್ 22 ರನ್​ಗಳಿಸಿ ಔಟಾದ್ರು. ನಮಿಬಿಯಾ ಬೌಲರ್​ಗಳನ್ನ ಮನಬಂದಂತೆ ದಂಡಿಸಿದ ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು.
ಕೇವಲ 24 ಎಸೆತಗಳಲ್ಲಿ 61 ರನ್​ ಚಚ್ಚಿದ ಕಿಶನ್, 5 ಬೌಂಡ್ರಿ-6 ಸಿಕ್ಸರ್ ಸಿಡಿಸಿ ಹೋರಾಟ ಮುಗಿಸಿದ್ರು. ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಒಂದು ಸಿಕ್ಸರ್ ಸಿಡಿಸಿ ಸೂರ್ಯ, ಸೈಲೆಂಟಾದ್ರು. ತಿಲಕ್ ವರ್ಮಾ 21 ಎಸೆತಗಳಲ್ಲಿ 25 ರನ್​ಗಳಿಸಿ, ಪೆವಿಲಿಯನ್ ಸೇರಿಕೊಂಡ್ರು.
/filters:format(webp)/newsfirstlive-kannada/media/media_files/2026/02/13/hardik-pandya-17-2026-02-13-09-18-33.jpg)
ನಂಬರ್ ಫೈವ್ ಬ್ಯಾಟರ್ ಆಗಿ ಹಾರ್ದಿಕ್ ಪಾಂಡ್ಯ, ವಂಡ್​ಫುಲ್ ಇನ್ನಿಂಗ್ಸ್ ಆಡಿದ್ರು. ಶಿವಂ ದುಬೆ ಜೊತೆಗೂಡಿದ ಪಾಂಡ್ಯ ಕೇವಲ 39 ಎಸೆತಗಳಲ್ಲಿ 81 ರನ್​​ ಕಲೆಹಾಕಿದ್ರು. ಕೊನೆಗೆ ಪಾಂಡ್ಯ 28 ಎಸೆತಗಳಲ್ಲಿ ತಲಾ 4 ಬೌಂಡ್ರಿ, ಮತ್ತು ಸಿಕ್ಸರ್ ಸಿಡಿಸಿ ಎರಾಸ್ಮಸ್​​​ ಬೌಲಿಂಗ್​ನಲ್ಲಿ ಔಟಾದ್ರು.
ಪಾಂಡ್ಯ ಔಟಾಗ್ತಿದಂತೆ 23 ರನ್​ಗಳಿಸಿದ ಶಿವಂ ದುಬೆ ರನ್​​ ಕದಿಯಲು ಹೋಗಿ ರನ್​ಔಟ್ ಆದ್ರು. ಅಕ್ಷರ್ ಪಟೇಲ್ ಮತ್ತು ರಿಂಕು ಸಿಂಗ್ ಸ್ಕೋರರ್ಸ್​ಗೆ ಹೆಚ್ಚು ಟಬ್ರಲ್ ಮಾಡಲಿಲ್ಲ. ಇಬ್ಬರೂ ಬಂದ ವೇಗದಲ್ಲೇ ವಾಪಸಾದ್ರು. ಅಂತಿಮವಾಗಿ ಟೀಮ್ ಇಂಡಿಯಾ ನಿಗಧಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 209 ರನ್​ಗಳಿಸಿತು. ನಮೀಬಿಯಾ ಪರ ನಾಯಕ ಎರಾಸ್ಮಸ್, 4 ವಿಕೆಟ್ ಪಡೆದು ಮಿಂಚಿದ್ರು.
ಭರ್ಜರಿ ಬ್ಯಾಟಿಂಗ್​ ನಡೆಸಿ ಫೀಲ್ಡಿಂಗ್​ಗಿಳಿದ ಟೀಮ್​ ಇಂಡಿಯಾ ಸೆಕೆಂಡ್​ ಹಾಫ್​​ನಲ್ಲೂ ದರ್ಬಾರ್​ ನಡೆಸ್ತು. ಇಂಡಿಯನ್​ ಬೌಲರ್​​ಗಳ ದಾಳಿಗೆ ನಮೀಬಿಯಾ ಸ್ಟನ್​ ಆಯ್ತು. ಬ್ಯಾಟ್​ ಹಿಡಿದು ಬಂದಷ್ಟೇ ವೇಗವಾಗಿ ಬ್ಯಾಟರ್ಸ್​ ಪೆವಿಲಿಯನ್​ ಪರೇಡ್​ ನಡೆಸಿದ್ರು. 210 ರನ್​ಗಳ ಟಾರ್ಗೆಟ್​ ಚೇಸಿಂಗ್​ಗಿಳಿದ ನಮೀಬಿಯಾ ತಂಡಕ್ಕೆ ಗುಡ್​ ಸ್ಟಾರ್ಟ್​ ಸಿಗಲಿಲ್ಲ. 3 ಬೌಂಡರಿ, 1 ಸಿಕ್ಸರ್​ ಸಿಡಿಸಿದ ಜಾನ್​​ ಫ್ರೈಲಿಂಕ್​​ ಮಿಂಚಿ ಮರೆಯಾದ್ರು. 22 ರನ್​ಗಳಿಸಿದ್ದ ವೇಳೆ ಫ್ರೈಲಿಂಗ್​ ಆರ್ಷ್​​ದೀಪ್​ ಸಿಂಗ್​ಗೆ ವಿಕೆಟ್​ ಒಪ್ಪಿಸಿದ್ರು.
ಇದನ್ನೂ ಓದಿ: ಹೊಸಕೋಟೆಯಲ್ಲಿ ಹೃದಯ ವಿದ್ರಾವಕ ದೃಶ್ಯ: ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಸ್ಥಳದಲ್ಲೇ 7 ಮಂದಿ ನಿಧನ..
/filters:format(webp)/newsfirstlive-kannada/media/media_files/2026/02/13/hardik-pandya-16-2026-02-13-09-18-14.jpg)
ಲಾರೆನ್​ ಸ್ಟೀನ್​ಕ್ಯಾಂಪ್​ ಅಬ್ಬರದ ಆಟವಾಡಿ 19 ಎಸೆತಗಳಲ್ಲಿ 29 ರನ್​ಗಳಿಸಿದ್ರು. ಆದ್ರೆ, ಅಬ್ಬರ ಹೆಚ್ಚು ಹೊತ್ತು ನಡೆಯಲಿಲ್ಲ. ವರುಣ್​ ಚಕ್ರವರ್ತಿಯ ಚಮಾತ್ಕಾರಕ್ಕೆ ಸ್ಟೀನ್​ಕ್ಯಾಂಪ್​ ಸ್ಟನ್ ಆಗಿ ನಿರ್ಗಮಿಸಿದ್ರು. ಸೆಟಲ್​ ಆಗೋ ಯತ್ನದಲ್ಲಿದ್ದ ಲಾಫ್ಟಿ ಈಟನ್​ ಕೂಡ ವರುಣ್​ ಚಕ್ರವರ್ತಿಯ ಮಿಸ್ಟ್ರಿ ಸ್ಪಿನ್​ ದಾಳಕ್ಕೆ ಅನ್​ಸೆಟಲ್​ ಆದ್ರು. 13 ರನ್​ಗಳಿಗೆ ಲಾಫ್ಟಿ ಈಟನ್​ ಔಟಾದ್ರೆ, ಬಳಿಕ ಕಣಕ್ಕಿಳಿದ ಜೆಜೆ ಸ್ಮಿತ್​ ಡಕೌಟ್​ ಆಗಿ ನಿರ್ಗಮಿಸಿದ್ರು.
2 ಭರ್ಜರಿ ಸಿಕ್ಸರ್​ ಸಿಡಿಸಿದ್ದ ನಾಯಕ ಜೆರಾರ್ಡ್​​ ಎರಾಸ್ಮಸ್​​, ಅಕ್ಷರ್​ ಪಟೇಲ್​ಗೆ ಶರಣಾದ್ರು. ನಂತರ ಬ್ಯಾಟಿಂಗ್​ಗೆ ಬಂದ ಮಲಾನ್​ ಕ್ರುಗರ್​ ಬೂಮ್ರಾ ಹಿಡಿದ ಅದ್ಭುತ ಕ್ಯಾಚ್​ಗೆ ಪೆವಿಲಿಯನ್​ ಸೇರಿದ್ರು. ರುಬೆನ್​ ಟ್ರಂಪಲ್​ಮ್ಯಾನ್​ ಬೂಮ್ರಾಗೆ ಬಲಿಯಾದ್ರು. 18ನೇ ಓವರ್​​ನಲ್ಲಿ ಹಾರ್ದಿಕ್​ ಪಾಂಡ್ಯ ಬೆನಾಡ್​ ಶೋಲ್ಜ್​, ಬೆನ್​ ಶಿಕಾಂಗೂಗೆ ಬ್ಯಾಕ್​ ಟು ಬ್ಯಾಕ್​ ಪೆವಿಲಿಯನ್​ ದಾರಿ ತೋರಿಸಿದ್ರು.
19ನೇ ಓವರ್​ನ 2ನೇ ಎಸೆತದಲ್ಲಿ ಶಿವಂ ದುಬೆ, ಝೇನ್​ ಗ್ರೀನ್​ನ ಕ್ಲೀನ್​ಬೋಲ್ಡ್​ ಮಾಡಿದ್ರು. ಇದ್ರೊಂದಿಗೆ ನಮೀಬಿಯಾ ಆಲೌಟ್​ ಆಯ್ತು. 116 ರನ್​ಗಳಿಗೆ ನಮೀಬಿಯಾ ಸರ್ವಪತನ ಕಂಡರೆ ಟೀಮ್​ ಇಂಡಿಯಾ 93 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಟೂರ್ನಿಯಲ್ಲಿ 2ನೇ ಪಂದ್ಯ ಗೆದ್ದ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಸತತ 10 ಪಂದ್ಯಗಳನ್ನ ಗೆದ್ದ ವಿಶಿಷ್ಠ ದಾಖಲೆ ಬರೆಯಿತು.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಕೊನೆಗೂ ಗುಡ್​ನ್ಯೂಸ್.. ಚಿನ್ನಸ್ವಾಮಿಯಲ್ಲೇ ಪಂದ್ಯಗಳು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us