Advertisment

ತುಳು ನಾಡಿನ ದೈವದ ಅಣಕವಾಡಿದ್ದಕ್ಕೆ ಕ್ಷಮೆ ಕೇಳಿದ ರಣ್‌ವೀರ್‌ ಸಿಂಗ್‌..!

ತುಳು ನಾಡಿನ ದೈವದ ಬಗ್ಗೆ ಅಣಕವಾಡಿದ್ದಕ್ಕೆ ಕೊನೆಗೂ ರಣ್‌ವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ. ನಾನು ಯಾರ ಭಾವನೆಗಳಿಗಾದರೂ ಧಕ್ಕೆ ತಂದಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

author-image
Ganesh Kerekuli
Ranveer singh (2)
Advertisment

ತುಳು ನಾಡಿನ ದೈವದ ಬಗ್ಗೆ ಅಣಕವಾಡಿದ್ದಕ್ಕೆ ಕೊನೆಗೂ ರಣ್‌ವೀರ್ ಸಿಂಗ್ ಕ್ಷಮೆ ಕೇಳಿದ್ದಾರೆ. ನಾನು ಯಾರ ಭಾವನೆಗಳಿಗಾದರೂ ಧಕ್ಕೆ ತಂದಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. 

Advertisment

ರಿಷಬ್ ಶೆಟ್ಟಿ ಅವರ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ಅಲ್ಲದೆ, ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ನಾನು ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ. ಧಕ್ಕೆಯಾಗಿದ್ದರೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ರಣವೀರ್​ ಹೇಳಿದ್ದಾರೆ.

ಕ್ಷಮೆ ಕೇಳಿದ ರಣ್‌ವೀರ್‌ ಸಿಂಗ್‌

ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನ ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ನಟನಿಂದ ನಟನಿಗೆ, ಆ ನಿರ್ದಿಷ್ಟ ದೃಶ್ಯವನ್ನು ಅವರು ಮಾಡಿದ ರೀತಿಯಲ್ಲಿ ನಿರ್ವಹಿಸಲು ಎಷ್ಟು ಶ್ರಮ ತೆಗೆದುಕೊಳ್ಳುತ್ತದೆ ಎಂದು ನನಗೆ ತಿಳಿದಿದೆ. ಅದಕ್ಕಾಗಿ ಅವರ ಬಗ್ಗೆ ನನಗೆ ಅತೀವ ಮೆಚ್ಚುಗೆಯಿದೆ. 

ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ.

Advertisment

ಇದನ್ನೂ ಓದಿ: ಬಾ ಕಂದಾ ನಾನೇ ನಿನಗೆ ಕೆಲಸ ಕೊಡ್ತೇನೆ -ಧ್ರುವಂತ್ ವಿರುದ್ಧ ಜಾನ್ವಿ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kantara Movie Kantara review Kantara Chapter1 Ranveer Singh
Advertisment
Advertisment
Advertisment