Advertisment

ಕಾಂತಾರ ದೈವಕ್ಕೆ ಅಪಮಾನ ಮಾಡಿದ ದೀಪಿಕಾ ಪತಿ ರಣವೀರ್ ಸಿಂಗ್..!

ಕಾಂತಾರ ಸಿನಿಮಾ ಮೂಲಕ ತುಳುನಾಡಿಗರ ದೈವಾರಾಧನೆ ಬಗ್ಗೆ ದೇಶದ ಮೂಲೆಮೂಲೆಗೂ ಹರಡಿದ್ದು ಇತಿಹಾಸ. ಪ್ಯಾನ್ ಇಂಡಿಯಾ ಫೇಮ್ ರಿಷಬ್ ಶೆಟ್ಟಿ ನಟನೆಗೆ ತಲೆತೂಗದವರಿಲ್ಲ. ಆದ್ರೆ, ಬಾಲಿವುಡ್ ನಟ ರಣವೀರ್ ಸಿಂಗ್​ ಕಾಂತಾರದಲ್ಲಿ ರಿಷಭ್ ಶೆಟ್ಟಿಯ ನಟನೆಯನ್ನೇ ಅಪಹಾಸ್ಯ ಮಾಡಿದ್ದು ಕರಾವಳಿಗರ ಆಕ್ರೋಶ ಭುಗಿಲೆದ್ದಿದೆ

author-image
Ganesh Kerekuli
Ranveer singh (1)
Advertisment
  • IFFI ವೇದಿಕೆ ಮೇಲೆ ಅಣಕ.. ರಿಷಭ್ ಶೆಟ್ಟಿಗೂ ಅವಮಾನ
  • ರಣವೀರ್​ ವಿರುದ್ಧ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ
  • ಅದು ಘೋಸ್ಟ್ ಅಲ್ಲ.. ಗಾಡ್ ಅಂತ ನೆಟ್ಟಿಗರು ತಿರುಗೇಟು

ಕಾಂತಾರ ಸಿನಿಮಾ ಮೂಲಕ ತುಳುನಾಡಿಗರ ದೈವಾರಾಧನೆ ಬಗ್ಗೆ ದೇಶದ ಮೂಲೆಮೂಲೆಗೂ ಹರಡಿದ್ದು ಇತಿಹಾಸ. ಇಡೀ ಭಾರತೀಯ ಚಿತ್ರರಂಗವೇ ಕಾಂತಾರದತ್ತ ತಿರುಗಿ ನೋಡುವಂತೆ ಆಗಿದೆ.. ಪ್ಯಾನ್ ಇಂಡಿಯಾ ಫೇಮ್ ರಿಷಬ್ ಶೆಟ್ಟಿ  ನಟನೆಗೆ ತಲೆತೂಗದವರಿಲ್ಲ. ಆದ್ರೆ, ಬಾಲಿವುಡ್ ನಟ ರಣವೀರ್ ಸಿಂಗ್​ ಕಾಂತಾರದಲ್ಲಿ ರಿಷಭ್ ಶೆಟ್ಟಿಯ ನಟನೆಯನ್ನೇ ಅಪಹಾಸ್ಯ ಮಾಡಿದ್ದು ಕರಾವಳಿಗರ ಆಕ್ರೋಶ ಭುಗಿಲೆದ್ದಿದೆ.

Advertisment

ದೈವಾರಾಧನೆ.. ಕರಾವಳಿಯ ಜನಪದ ಸಂಸ್ಕೃತಿ.. ವಿಶಿಷ್ಟ ಸಂಪ್ರದಾಯ.. ದೈವರಾಧನೆಯಿಂದಲೇ ಅರಳಿದ್ದು ರಿಷಭ್ ಶೆಟ್ಟಿಯ ಕಾಂತಾರಾ ಸಿನಿಮಾ..  ಡಿವೈನ್ ಸ್ಟಾರ್ ನಟನೆ, ಕಾಂತಾರ ಅಬ್ಬರ ಪ್ಯಾನ್ ಇಂಡಿಯಾ ಸ್ಟಾರ್ ಮಾಡಿಬಿಟ್ಟಿದೆ. ಇಡೀ ಭಾರತೀಯ ಚಿತ್ರರಂಗವೇ ಕಾಂತಾರದ ದೈವನಂಬಿಕೆಯನ್ನು ಒಪ್ಪಿ ಅಪ್ಪಿದೆ.. ಹೀಗಿರುವಾಗ ಬಾಲಿವುಡ್ ನಟ ರಣವೀರ್ ಸಿಂಗ್, ಕಾಂತಾರದಲ್ಲಿ ರಿಷಭ್ ಶೆಟ್ಟಿ ನಟನೆಯನ್ನೇ ಅಣಕಿಸಿರೋದು ಸಂಚಲನಕ್ಕೆ ಕಾರಣ ಆಗಿದೆ.

ಇದನ್ನೂ ಓದಿ:ಮಂಡ್ಯದ ಭೂ ವರಾಹಸ್ವಾಮಿ ದೇವರ ಮೊರೆ ಹೋದ ಡಿಸಿಎಂ ಡಿ.ಕೆ.ಶಿವಕುಮಾರ್ : ಹೋಮಕ್ಕೆ ಪೂರ್ಣಾಹುತಿ ಅರ್ಪಿಸಿದ ಡಿಕೆಶಿ ದಂಪತಿ

Ranveer singh

ಕರಾವಳಿಗರ ಅಸ್ಮಿತೆ ದೈವಾರಾಧನೆಯನ್ನೇ ಬಾಲಿವುಡ್ ನಟ ರಣವೀರ್ ಸಿಂಗ್ ಅಣಕಿಸಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದ ವೇದಿಕೆ ಮೇಲೆ ರಿಷಬ್ ಶೆಟ್ಟಿ ಅನುಕರಿಸಿ ಚಾವುಂಡಿ ದೈವ ಆವಾಹನೆ ಬಗ್ಗೆ ಅಸಹ್ಯವಾಗಿ ನಟಿಸಿ ವ್ಯಂಗ್ಯ ಮಾಡಿದ್ದಾರೆ. ಕಾಂತಾರ ಚಾಪ್ಟರ್-1 ಚಿತ್ರವನ್ನ ಕೊಂಡಾಡಿದ ರಣವೀರ್ ಸಿಂಗ್, ರಿಷಬ್ ಶೆಟ್ರು ಕೊನೆಯಲ್ಲಿ ಅಭಿನಯಿಸಿದ ರೀತಿಯಲ್ಲೇ ಕಣ್ಣು ಮೇಲೆ ಮಾಡಿ ನಾಲಿಗೆ ಹೊರಗೆ ತೆಗೆದು ನಟಿಸಿದ್ದಾರೆ.. ಇನ್ನು ಕಾಂತಾರ ದೈವಕ್ಕೆ ದೆವ್ವ ಅಂತ ಕರೆದಿರೋ ರಣವೀರ್ ಸಿಂಗ್ ದೈವಾರಾಧನೆಯ ನಂಬಿಕೆಗಳಿಗೆ ಯಾವುದೇ ಗೌರವವಿಲ್ಲದೇ ಟೀಕೆ ಮಾಡಿದ್ದಾರೆ.

Advertisment

ಇದನ್ನೂ ಓದಿ: ಇವತ್ತು ಮೊದಲ ODI ಮ್ಯಾಚ್​​.. ಟೀಂ ಇಂಡಿಯಾದ ಬಲಿಷ್ಠ ಪ್ಲೇಯಿಂಗ್​-11..!

ನಟಿ ದೀಪಿಕಾ ಪಡುಕೋಣೆ ಪತಿಯಾಗಿರೋ ರಣವೀರ್​​ ಸಿಂಗ್​ ಹೇಳಿ ಹೇಳಿ ಕರಾವಳಿಯ ಅಳಿಯ.. ದೈವಗಳ ನಾಡು ಕರಾವಳಿ ಅಳಿಯನಿಂದಲೇ ತುಳುನಾಡು ದೈವದ ಬಗ್ಗೆ ಅವಮಾನ ಆಗಿದ್ದು ಕರಾವಳಿಗರ ಕಣ್ಣು ಕೆರಳಿಸಿದೆ. ನಟ ರಣವೀರ್ ಸಿಂಗ್​ಗೆ​​​​ ದೆವ್ವಕ್ಕೂ, ದೈವಕ್ಕೂ ಇರುವ ವ್ಯತ್ಯಾಸವೇ ಗೊತ್ತಿಲ್ಲ ಅಂತ ಕೆಲವರು ಜಾಲತಾಣದಲ್ಲಿ ಹಿಗ್ಗಾ-ಮುಗ್ಗಾ ಜಾಡಿಸಿದ್ದಾರೆ. ಚಾವುಂಡಿ ದೇವಿಯೇ ಹೊರತು ದೆವ್ವ ಅಲ್ಲ.. ದೊಡ್ಡ ವೇದಿಕೆಯಲ್ಲಿ ಹೀಗೆ ಅಪಹಾಸ್ಯ ಮಾಡುವುದು ಎಷ್ಟು ಸರಿ ಅಂತ ಮತ್ತಷ್ಟು ಮಂದಿ ಪ್ರಶ್ನಿಸಿದ್ದಾರೆ.

ಸ್ಟೇಜ್ ಮೇಲೆ ನಟ ರಣವೀರ್​​ ಸಿಂಗ್ ದೈವದ ಬಗ್ಗೆ ಅಣಕಿಸುವಾಗ ವೀಕ್ಷಕರಾಗಿ ಕುಳಿತಿದ್ದ ನಟ ರಿಷಭ್ ಶೆಟ್ಟಿ ನಗುತ್ತಿರುತ್ತಾರೆ. ಇದರರ್ಥ ಏನು ಅನ್ನೋದು ಸ್ವತಃ ರಿಷಬ್ ಶೆಟ್ಟಿಯೇ ಪ್ರತಿಕ್ರಿಯೆ ಕೊಟ್ಟಾಗ ಕ್ಲಾರಿಟಿ ಸಿಗಲಿದೆ. ಅದೇನೇ ಇರಲಿ, ಎಕ್ಸೈಟ್​​​ಮೆಂಟ್​​​​​​ನಲ್ಲೋ ಅಥವಾ ಮಾತನಾಡುವ ಭರದಲ್ಲೋ ಈ ರೀತಿ ಅಂತ ಹೇಳೋದು ಸರಿಯಲ್ಲ. ಖ್ಯಾತ ಬಾಲಿವುಡ್​​ ನಟನಾಗಿ ರಣವೀರ್ ಸಿಂಗ್​, ಖ್ಯಾತಿ ಹಾಗೂ ಹಣಕ್ಕಾಗಿ ಈ ಮಟ್ಟಕ್ಕೆ ಇಳಿದಿದ್ದು ಮಾತ್ರ ನಿಜಕ್ಕೂ ನಾಚಿಕೆಗೇಡಿನ ಸಂಗತಿ.

Advertisment

ಇದನ್ನೂ ಓದಿ:ಸ್ಯಾಂಡಲ್​ವುಡ್​ನ ಹಿರಿಯ ನಟ ಉಮೇಶ್ ನಿಧನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ranveer Singh Kantara review Kantara Chapter1 Kantara Movie
Advertisment
Advertisment
Advertisment