/newsfirstlive-kannada/media/media_files/2025/12/30/rashmika-2025-12-30-11-52-03.jpg)
ಕಳೆದ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳ ವಲಯದಲ್ಲಿ ಹರಿದಾಡುತ್ತಿದ್ದ ದೊಡ್ಡ ವದಂತಿಗೆ ಈಗ ಅಧಿಕೃತ ತೆರೆ ಬಿದ್ದಿದೆ. ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ‘ವಿರೋಶ್’ (ViRosh) ಎಂದು ಕರೆಯುತ್ತಾರೆ. ದೀರ್ಘಕಾಲದ ಗುಸುಗುಸು ಸುದ್ದಿಗಳ ನಂತರ, ಈ ಜೋಡಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.
ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಜೋಡಿ
ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಜಂಟಿ ಪ್ರಕಟಣೆ ಹೊರಡಿಸಿರುವ ವಿಜಯ್ ಮತ್ತು ರಶ್ಮಿಕಾ, ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ನಮ್ಮನ್ನು ಇಷ್ಟೊಂದು ಪ್ರೀತಿಯಿಂದ ನಡೆಸಿಕೊಂಡಿದ್ದಕ್ಕೆ ಮತ್ತು ನಮಗೆ ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದಗಳು’ (Thank you for holding us with so much love) ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್‌ಗಳು ಹರಿದುಬಂದಿವೆ.
ಹಲವು ವರ್ಷಗಳ ಗುಟ್ಟು ಈಗ ರಟ್ಟು!
‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಈ ಜೋಡಿಯ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಅಂದಿನಿಂದಲೇ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ರಜೆ ದಿನಗಳಲ್ಲಿ ವಿದೇಶ ಪ್ರವಾಸಕ್ಕೆ ಒಟ್ಟಿಗೆ ಹೋಗುವುದು ಮತ್ತು ಇಬ್ಬರೂ ಒಂದೇ ರೀತಿಯ ಹಿನ್ನೆಲೆಯ ಫೋಟೋಗಳನ್ನು ಹಂಚಿಕೊಳ್ಳುವುದು ಈ ವದಂತಿಗಳಿಗೆ ಪುಷ್ಟಿ ನೀಡಿದ್ದವು. ಆದರೆ ಈ ಬಗ್ಗೆ ಇಬ್ಬರೂ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ.
/newsfirstlive-kannada/media/post_attachments/photo/imgsize-23456,msid-128683169/screenshot-2026-02-22-221717-662218.jpg)
ಅಭಿಮಾನಿಗಳ ಸಂಭ್ರಮ
ಸದ್ಯ ವಿರೋಶ್ ಮದುವೆಯ ಸುದ್ದಿಯನ್ನು ಕೇಳಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ದಕ್ಷಿಣ ಭಾರತದ ಚಿತ್ರರಂಗದ ಈ ಕ್ಯೂಟ್ ಜೋಡಿ ಸಪ್ತಪದಿ ತುಳಿಯುವುದನ್ನು ನೋಡಲು ಎಲ್ಲರೂ ಕಾತುರರಾಗಿದ್ದಾರೆ. ಮದುವೆ ಯಾವ ದಿನಾಂಕದಂದು ಮತ್ತು ಎಲ್ಲಿ ನಡೆಯಲಿದೆ ಎಂಬ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಸಿನಿಮಾ ರಂಗದ ಗಣ್ಯರು ಮತ್ತು ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳ ಸುರಿಮಳೆಗರೆಯುತ್ತಿದ್ದಾರೆ.
ಇದನ್ನೂ ಓದಿ: ಹಸೆಮಣೆ ಏರಲು ಉದಯಪುರಕ್ಕೆ ಬಂದ ನಟಿ ರಶ್ಮಿಕಾ ಮಂದಣ್ಣ- ನಟ ವಿಜಯ ದೇವರಕೊಂಡ : ಇಬ್ಬರ ಎಂಟ್ರಿ ಹೇಗಿತ್ತು? ಇಲ್ಲಿವೆ ಪೋಟೋಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us