/newsfirstlive-kannada/media/media_files/2026/02/26/rashmika-mandanna-and-vijay-devarakonda-2026-02-26-12-16-56.jpg)
ಟಾಲಿವುಡ್‌ನ ಮೋಸ್ಟ್ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣರ ಬಹುನಿರೀಕ್ಷಿತ ವಿವಾಹ ಮಹೋತ್ಸವ ರಾಜಸ್ಥಾನದ ಉದಯಪುರದಲ್ಲಿ ಅದ್ಧೂರಿಯಾಗಿ ನೆರವೇರುತ್ತಿದೆ. ಈಗಾಗಲೇ ಪ್ರೀ-ವೆಡ್ಡಿಂಗ್ ಕಾರ್ಯಕ್ರಮಗಳು ಅದ್ದೂರಿಯಾಗಿ ಮುಗಿದಿದೆ. ಈ ರಾಯಲ್ ವೆಡ್ಡಿಂಗ್‌ಗೆ ಯಾರೆಲ್ಲಾ ಬಂದಿದ್ದಾರೆ? ಊಟದ ಮೆನುವಿನಲ್ಲಿ ಏನೇನಿದೆ?
ಮದುವೆಗೆ ಬಂದಿರೋ ಅತಿಥಿಗಳು ಯಾರು?
ಮದುವೆಗೂ ಮುನ್ನ ಫೆ.25ರ ರಾತ್ರಿ ನಡೆದ ಸಂಗೀತ ಹಾಗೂ ನೈಟ್ ಪಾರ್ಟಿಯಲ್ಲಿ ವಿಜಯ್ ಮತ್ತು ರಶ್ಮಿಕಾ ಅವರ ಅತ್ಯಾಪ್ತರು ಮಾತ್ರ ಭಾಗಿಯಾಗಿದ್ದಾರೆ. ಟಾಲಿವುಡ್ ನಿರ್ದೇಶಕರಾದ ತರುಣ್ ಭಾಸ್ಕರ್, ಶಿವ ನಿರ್ವಾಣ, ವಂಶಿ ಪೈಡಿಪಲ್ಲಿ, ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗ ಸೇರಿದಂತೆ ಹಲವರು ವಿಜಯ್ ಕಡೆಯಿಂದ ಭಾಗಿಯಾಗಿದ್ದಾರೆ. ರಶ್ಮಿಕಾ ಅವರ ಆಪ್ತ ಸ್ನೇಹಿತರಾದ ನಟ ರಾಹುಲ್ ರವೀಂದ್ರನ್, ನಟಿ ಆಶಿಕಾ ರಂಗನಾಥ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಉದಯಪುರಕ್ಕೆ ತೆರಳಿ ಮದುವೆ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’ ಜೋಡಿ: ಉದಯಪುರದಲ್ಲಿ ಶ್ರೀವಲ್ಲಿ ವಿವಾಹ..!
/filters:format(webp)/newsfirstlive-kannada/media/media_files/2025/12/30/rashmika-2025-12-30-11-52-03.jpg)
ಎರಡು ಸಂಪ್ರದಾಯ.. ಡಬಲ್ ಧಮಾಕಾ!
ಬೆಳಗ್ಗೆ 9 ರಿಂದ 10 ಗಂಟೆಯ ಶುಭ ಮುಹೂರ್ತದಲ್ಲಿ ವೇದ ಮಂತ್ರಗಳ ಘೋಷದೊಂದಿಗೆ ಅಪ್ಪಟ ತೆಲುಗು (ಹಿಂದೂ) ಸಂಪ್ರದಾಯದಂತೆ ವಿಜಯ್-ರಶ್ಮಿಕಾ ಮದುವೆ ನೆರವೇರಿದೆ. ರೇಷ್ಮೆ ವಸ್ತ್ರಗಳಲ್ಲಿ ಈ ಜೋಡಿ ಕಂಗೊಳಿಸಿದೆ. ಸಂಜೆ ರಶ್ಮಿಕಾ ಅವರ ಮೂಲ ಸಂಪ್ರದಾಯವಾದ 'ಕೊಡವ' (ಕೂರ್ಗ್ ಶೈಲಿ) ಪದ್ಧತಿಯಂತೆಯೂ ಮತ್ತೊಮ್ಮೆ ಮದುವೆ ಶಾಸ್ತ್ರಗಳು ನಡೆಯಲಿವೆ. ಕೊಡವ ಶೈಲಿಯ ಸಾಂಪ್ರದಾಯಿಕ ಉಡುಗೆಯಲ್ಲಿ ಈ ಜೋಡಿ ಮಿಂಚಲಿದ್ದು, ಎರಡು ಕುಟುಂಬಗಳ ಸಂಸ್ಕೃತಿಗೆ ಗೌರವ ನೀಡುವ ನಿಟ್ಟಿನಲ್ಲಿ ಈ 'ಡಬಲ್ ವೆಡ್ಡಿಂಗ್' ಪ್ಲಾನ್ ಮಾಡಲಾಗಿದೆ.
ಇದನ್ನೂ ಓದಿ: ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಹಗರಣದ ಮಾಸ್ಟರ್ ಮೈಂಡ್ ಯಾರೆಂದು ಬಹಿರಂಗ: ಆರೋಪಿಗಳ ಬಂಧನ
/filters:format(webp)/newsfirstlive-kannada/media/media_files/2026/02/26/rashmika-mandanna-12-2026-02-26-11-24-30.jpg)
ಬಾಯೂರಿಸುವ ಭೋಜನ..
ಮದುವೆ ಎಂದ ತಕ್ಷಣ ಮೊದಲು ನೆನಪಾಗುವುದೇ ಊಟ. ಈ ರಾಯಲ್ ವೆಡ್ಡಿಂಗ್‌ನ ಫುಡ್ ಮೆನು ಕೂಡ ಅದೇ ರೇಂಜ್‌ನಲ್ಲಿದೆ. ಎರಡು ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಖಾದ್ಯಗಳು ಇಲ್ಲಿವೆ:
ತೆಲಂಗಾಣ ಸ್ಪೆಷಲ್: ಪಕ್ಕಾ ತೆಲಂಗಾಣ ಶೈಲಿಯ ಮಟನ್ ಬಿರಿಯಾನಿ ಹಾಗೂ ವಿವಿಧ ಚಿಕನ್ ಖಾದ್ಯಗಳು.
ಕರ್ನಾಟಕ ಸ್ಪೆಷಲ್: ಕರುನಾಡಿನ ಫೇಮಸ್ ಬಿಸಿಬೇಳೆ ಬಾತ್.
ಕೂರ್ಗ್ ಸ್ಪೆಷಲ್: ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ವಿಶೇಷವಾದ 'ಪೋರ್ಕ್ ಕರಿ' ಯನ್ನು ಅತಿಥಿಗಳಿಗೆ ಬಡಿಸಲಾಗುತ್ತಿದೆ ಎನ್ನಲಾಗಿದೆ. ಇದರ ಜೊತೆಗೆ ಟಾಲಿವುಡ್ ಸೆಲೆಬ್ರಿಟಿಗಳಿಗಾಗಿ ಕಾಂಟಿನೆಂಟಲ್ ಹಾಗೂ ಸ್ಥಳೀಯ ಖಾದ್ಯಗಳ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಐಷಾರಾಮಿ ರೆಸಾರ್ಟ್, ಬಿಗಿ ಭದ್ರತೆ!
ಉದಯಪುರದಿಂದ 25 ಕಿ.ಮೀ ದೂರದಲ್ಲಿರುವ ಅತ್ಯಂತ ವಿಶೇಷವಾದ ‘ಐಟಿಸಿ ಮೆಮೆಂಟೋಸ್’ (ITC Mementos) ರೆಸಾರ್ಟ್‌ನಲ್ಲಿ ವಿರೋಶ್ ಮದುವೆ ನಡೆಯುತ್ತಿದೆ. ಈ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಇಡೀ ರೆಸಾರ್ಟ್ ಅನ್ನು ಬುಕ್ ಮಾಡಲಾಗಿದ್ದು, ಇಲ್ಲಿನ ಒಂದು ಕೊಠಡಿಯ ಒಂದು ರಾತ್ರಿಯ ಬಾಡಿಗೆಯೇ ಬರೋಬ್ಬರಿ 20 ಸಾವಿರದಿಂದ 70 ಸಾವಿರ ರೂಪಾಯಿಗಳಷ್ಟಿದೆ!
ಖಾಸಗಿ ಹೆಲಿಪ್ಯಾಡ್ ಹೊಂದಿರುವ ಈ ರೆಸಾರ್ಟ್ ಸುತ್ತಲೂ ಹಾಗೂ ಉದಯಪುರ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಮದುವೆಯಲ್ಲಿ ಪ್ರತಿಯೊಂದು ಸಣ್ಣ ವಿಚಾರದ ಬಗ್ಗೆಯೂ ಕಾಳಜಿ ವಹಿಸಲಾಗಿದ್ದು, ಅತಿಥಿಗಳಿಗೆ ನೀಡುವ ನ್ಯಾಪ್‌ಕಿನ್‌ಗಳ ಮೇಲೂ ‘VIROSH’ ಎಂದು ಎಂಬ್ರಾಯ್ಡರಿ ಮಾಡಿಸಲಾಗಿದೆ.
ಹೈದರಾಬಾದ್‌ನಲ್ಲಿ ಗ್ರ್ಯಾಂಡ್ ರಿಸೆಪ್ಷನ್
ಉದಯಪುರದಲ್ಲಿ ಆಪ್ತರಿಗಾಗಿ ಮಾತ್ರ ಮದುವೆ ನಡೆಯುತ್ತಿದ್ದು, ಮುಂಬರುವ ಮಾರ್ಚ್ 4ರಂದು ಹೈದರಾಬಾದ್‌ನ ಖ್ಯಾತ ‘ತಾಜ್ ಕೃಷ್ಣ’ ಹೋಟೆಲ್‌ನಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಹಾಗೂ ವಿಐಪಿಗಳಿಗಾಗಿ ಅದ್ಧೂರಿ ಆರತಕ್ಷತೆ (ರಿಸೆಪ್ಷನ್) ಕಾರ್ಯಕ್ರಮ ಆಯೋಜಿಸಲಾಗಿದೆ.
ಇದನ್ನೂ ಓದಿ: ರಶ್ಮಿಕಾ ವಿಜಯ್ ಉದಯಪುರ ವಿವಾಹ : ರಶ್ಮಿಕಾ- ವಿಜಯ ದೇವರಕೊಂಡ ಈಗ ವಿವಾಹಿತರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us