Advertisment

ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’ ಜೋಡಿ: ಉದಯಪುರದಲ್ಲಿ ಶ್ರೀವಲ್ಲಿ ವಿವಾಹ..!

ಟಾಲಿವುಡ್‌ನ ಮೋಸ್ಟ್ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿಯವರೆಗೆ ‘ರೀಲ್ ಲೈಫ್’ನಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಜೋಡಿ, ‘ರಿಯಲ್ ಲೈಫ್’ನಲ್ಲೂ ಅಧಿಕೃತವಾಗಿ ಗಂಡ-ಹೆಂಡತಿಯಾಗಿದ್ದಾರೆ.

author-image
Ganesh Kerekuli
rashmika mandanna (11)
Advertisment

ಟಾಲಿವುಡ್‌ನ ಮೋಸ್ಟ್ ಕ್ಯೂಟ್ ಕಪಲ್ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಲ್ಲಿಯವರೆಗೆ ‘ರೀಲ್ ಲೈಫ್’ನಲ್ಲಿ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದ ಜೋಡಿ, ‘ರಿಯಲ್ ಲೈಫ್’ನಲ್ಲೂ ಅಧಿಕೃತವಾಗಿ ಗಂಡ-ಹೆಂಡತಿಯಾಗಿದ್ದಾರೆ.

Advertisment

ರಾಜಸ್ಥಾನದ ಉದಯಪುರದಲ್ಲಿ ಆಪ್ತರು, ಬಂಧು-ಮಿತ್ರರು ಹಾಗೂ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಈ ತಾರಾಜೋಡಿಯ ವಿವಾಹ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ.

10.10ಕ್ಕೆ ಮಾಂಗಲ್ಯ ಧಾರಣೆ

ಇಂದು ಬೆಳಗ್ಗೆ ಸರಿಯಾಗಿ 10 ಗಂಟೆ 10 ನಿಮಿಷಕ್ಕೆ ಹಿಂದೂ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನಡೆದಿವೆ. ವೇದ ಮಂತ್ರಗಳ ಪಠಣ ಹಾಗೂ ಮಂಗಳ ವಾದ್ಯಗಳ ಮೊಳಗುವಿಕೆಯ ನಡುವೆ ರಶ್ಮಿಕಾ ಕೊರಳಿಗೆ ವಿಜಯ್ ದೇವರಕೊಂಡ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ವಿಜಯ್ ಮತ್ತು ರಶ್ಮಿಕಾ ಜೋಡಿ ನೋಡಲು ಕಣ್ಣುಗಳೆರಡು ಸಾಲದು ಎಂಬಂತೆ ಕಂಗೊಳಿಸುತ್ತಿದ್ದರು. ಮದುವೆಯ ದಿರಿಸಿನಲ್ಲಿ ವಧು ರಶ್ಮಿಕಾ ಅವರ ಮುಖದಲ್ಲಿ ಮದುವೆಯ ಸಂಭ್ರಮ ಹಾಗೂ ಮಂದಹಾಸ ಎದ್ದು ಕಾಣುತ್ತಿತ್ತು.

ಸಂಜೆ ಕೊಡವ ಸಂಪ್ರದಾಯದಂತೆ ಮದುವೆ

ಈ ಹಿಂದೆಯೇ ನಿರ್ಧರಿಸಿದಂತೆ ಎರಡು ಸಂಸ್ಕೃತಿಗಳ ಪ್ರಕಾರ ಈ ಜೋಡಿಯ ಮದುವೆ ನಡೆಯುತ್ತಿದೆ. ಬೆಳಗ್ಗೆ ಹಿಂದೂ (ತೆಲುಗು) ಪದ್ಧತಿಯಂತೆ ಮದುವೆಯಾಗಿದ್ದು, ಸಂಜೆ 4.30ಕ್ಕೆ ರಶ್ಮಿಕಾ ಅವರ ಮೂಲವಾದ 'ಕೊಡವ ಸಂಪ್ರದಾಯ'ದಂತೆ ಮತ್ತೊಮ್ಮೆ ವಿವಾಹ ಕಾರ್ಯಕ್ರಮ ಜರುಗಲಿದೆ.

Advertisment

ಇದನ್ನೂ ಓದಿ:ಕೊನೆಯ ಬಾರಿಗೆ ‘I love you Amma’ ಎಂದು ಮೆಸೇಜ್​- ಖ್ಯಾತ ಯೂಟ್ಯೂಬರ್​ ದುರಂತ ಅಂತ್ಯ

rashmika and vijay devarakonda (10)

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಒಟ್ಟಾಗಿ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. 'ಗೀತಾ ಗೋವಿಂದಂ' ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದ ಈ ಜೋಡಿ, ಅದೇ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಆ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ತದನಂತರ 'ಡಿಯರ್ ಕಾಮ್ರೇಡ್' ಚಿತ್ರದಲ್ಲೂ ಇಬ್ಬರೂ ಮೋಡಿ ಮಾಡಿದ್ದರು.

ಬಹಳ ವರ್ಷಗಳಿಂದ ತಮ್ಮ ರಿಲೇಶನ್‌ಶಿಪ್‌ ಅನ್ನು ಜೋಡಿ ಸೀಕ್ರೆಟ್ ಆಗಿಯೇ ಇಟ್ಟುಕೊಂಡು ಬಂದಿತ್ತು. ಆದರೆ ಅಭಿಮಾನಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಕ್ಯೂಟ್ ಜೋಡಿ ಅಧಿಕೃತವಾಗಿ ಒಂದಾಗಿದ್ದು, ಅಭಿಮಾನಿಗಳ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾರಂಗದ ಗಣ್ಯರು, ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ವಿಜಯ್-ರಶ್ಮಿಕಾ ಜೋಡಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

Advertisment

ಇದನ್ನೂ ಓದಿ: IND vs ZIM : ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಪ್ಲೇಯಿಂಗ್ 11ಗೆ ಸಂಜು ಕಂಬ್ಯಾಕ್..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashmika Mandanna, vijay devarakonda rashmika mandanna
Advertisment
Advertisment
Advertisment