Advertisment

IND vs ZIM : ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ; ಪ್ಲೇಯಿಂಗ್ 11ಗೆ ಸಂಜು ಕಂಬ್ಯಾಕ್..?

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲುಂಡು ಕಂಗೆಟ್ಟಿರುವ ಟೀಮ್ ಇಂಡಿಯಾ, ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ (ICC T20 World Cup 2026) ಸೂಪರ್-8 ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿಂದು ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.

author-image
Ganesh Kerekuli
sanju samson (1)
Advertisment
  • ಚೆಪಾಕ್ ಕ್ರೀಡಾಂಗಣದಲ್ಲಿ ಭಾರತ vs ಜಿಂಬಾಬ್ವೆ ಸೂಪರ್-8 ಕದನ
  • ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಗೆಲುವು ಅನಿವಾರ್ಯ
  • ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್‌ಗೆ ಒಲಿಯಲಿದ್ಯಾ ಚಾನ್ಸ್?

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಹೀನಾಯ ಸೋಲುಂಡು ಕಂಗೆಟ್ಟಿರುವ ಟೀಮ್ ಇಂಡಿಯಾ, ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ (ICC T20 World Cup 2026) ಸೂಪರ್-8 ಹಂತದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿಂದು ಜಿಂಬಾಬ್ವೆ ತಂಡವನ್ನು ಎದುರಿಸಲಿದೆ.

Advertisment

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ಇಂದು ಪಂದ್ಯ ನಡೆಯಲಿದೆ. ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ಕೂಡ ಕಳೆದ ಪಂದ್ಯದಲ್ಲಿ ಸೋಲುಂಡಿದ್ದು, ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಗೆಲುವು ಅನಿವಾರ್ಯವಾಗಿದೆ. ಇವತ್ತು ಸೋತ ತಂಡದ ಸೆಮಿಫೈನಲ್ ಕನಸು ಬಹುತೇಕ ಭಗ್ನವಾಗಲಿದೆ. ಹೀಗಾಗಿ ಒತ್ತಡದಲ್ಲಿರುವ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ (Playing XI) ಇಂದು ಪ್ರಮುಖ ಬದಲಾವಣೆಗಳಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಸೂರ್ಯಕುಮಾರ್ ಪಡೆಗೆ ಆಗ್ತಿರೋ ಹಿನ್ನಡೆ ಎಲ್ಲಿ..? ಹೇಗಿದೆ ತಂಡದ ಮೇಲೆ ಒತ್ತಡ?

ಸುಂದರ್ ಔಟ್, ಅಕ್ಷರ್ ಇನ್!

ಪ್ಲೇಯಿಂಗ್ 11ರಲ್ಲಿ ಬಹುಮುಖ್ಯ ಬದಲಾವಣೆಯಾಗಿ ವಾಷಿಂಗ್ಟನ್ ಸುಂದರ್ ಬದಲಿಗೆ ಅಕ್ಷರ್ ಪಟೇಲ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕಳೆದ ಎರಡು ಪಂದ್ಯಗಳಲ್ಲಿ ಸುಂದರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ 2 ಓವರ್ ಬೌಲ್ ಮಾಡಿ ವಿಕೆಟ್ ಪಡೆಯದೆ ನಿರಾಸೆ ಮೂಡಿಸಿದ್ದರಲ್ಲದೆ, 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಕೇವಲ 11 ರನ್ ಗಳಿಸಿದ್ದರು. ಹೀಗಾಗಿ ಚೆಪಾಕ್‌ನ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ನಿಖರ ದಾಳಿ ನಡೆಸಬಲ್ಲ ಹಾಗೂ ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟಿಂಗ್ ಮಾಡಬಲ್ಲ ಅಕ್ಷರ್ ಪಟೇಲ್ ಅವರನ್ನು ಆಡಿಸುವ ಸಾಧ್ಯತೆ ದಟ್ಟವಾಗಿದೆ.

Advertisment

ಸ್ಯಾಮ್ಸನ್‌ಗೆ ಸಿಗುತ್ತಾ ಚಾನ್ಸ್?

ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಹಲವು ಗೊಂದಲಗಳಿವೆ. ಯುವ ಬ್ಯಾಟರ್ ತಿಲಕ್ ವರ್ಮಾ ರನ್ ಕಲೆಹಾಕುತ್ತಿದ್ದರೂ ಸ್ಟ್ರೈಕ್ ರೇಟ್ ತಂಡಕ್ಕೆ ತಲೆನೋವಾಗಿದೆ. ಸೂಪರ್-8 ನಂತಹ ಮಹತ್ವದ ಹಂತದಲ್ಲಿ ವೇಗದ ಬ್ಯಾಟಿಂಗ್ ಬಹಳ ಮುಖ್ಯ. ಫಿನಿಶರ್ ಪಾತ್ರದಲ್ಲಿ ರಿಂಕು ಸಿಂಗ್ ಸಂಪೂರ್ಣ ವಿಫಲರಾಗಿದ್ದಾರೆ (6, 1, 11*, 6*, 0). ಇದರಿಂದ ಡೆತ್ ಓವರ್‌ಗಳಲ್ಲಿ ರನ್ ವೇಗಕ್ಕೆ ಬ್ರೇಕ್ ಬೀಳುತ್ತಿದೆ. ಆರಂಭಿಕನಾಗಿ ಅಭಿಷೇಕ್ ಶರ್ಮಾ ಬಿರುಸಿನ ಆರಂಭ ಒದಗಿಸುತ್ತಿದ್ದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಪರದಾಡ್ತಿದ್ದಾರೆ. 

ಇದನ್ನೂ ಓದಿ: ‘ವಿರೋಶ್’ ಜೋಡಿಗೆ ಇವತ್ತು ಮದುವೆ.. ಉದಯಪುರದಲ್ಲಿ 2 ಸಂಪ್ರದಾಯಗಳಂತೆ ರಶ್ಮಿಕಾ-ವಿಜಯ್ ಕಲ್ಯಾಣ

ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ನಿಯಂತ್ರಣ ಸಾಧಿಸಲು ಸಂಜು ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. 3, 4 ಅಥವಾ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಸಂಜು, ಸ್ಪಿನ್ನರ್‌ಗಳನ್ನು ಅತ್ಯುತ್ತಮವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಇದು ಚೆನ್ನೈ ಪಿಚ್‌ನಲ್ಲಿ ಭಾರತಕ್ಕೆ ನೆರವಾಗಲಿದೆ.

Advertisment

ಕುಲದೀಪ್ ಯಾದವ್ ಎಂಟ್ರಿ?

ಚೆಪಾಕ್ ಪಿಚ್ ಪಂದ್ಯ ಸಾಗಿದಂತೆ ನಿಧಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಪಿನ್ ವಿಭಾಗವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಮಣಿಕಟ್ಟಿನ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಮ್ಯಾನೇಜ್ಮೆಂಟ್ ಒಲವು ತೋರಿದೆ. ಕುಲದೀಪ್ ಆಡುವ ಬಳಗದಲ್ಲಿ ಸ್ಥಾನ ಪಡೆದರೆ, ಹೆಚ್ಚುವರಿ ಬೌಲರ್ ಕೋಟಾದಡಿ ರಿಂಕು ಸಿಂಗ್ ಅಥವಾ ತಿಲಕ್ ವರ್ಮಾ ಬೆಂಚ್ ಕಾಯಬೇಕಾಗುತ್ತದೆ. ಒಟ್ಟಿನಲ್ಲಿ ಜಿಂಬಾಬ್ವೆ ವಿರುದ್ಧ ಯಾವುದೇ ಪ್ರಯೋಗಗಳಿಗೆ ಕೈಹಾಕದೆ, ಫಾರ್ಮ್ ಹಾಗೂ ಪಿಚ್ ಪರಿಸ್ಥಿತಿಯನ್ನು ಅರಿತು ಪಕ್ಕಾ ಲೆಕ್ಕಾಚಾರದೊಂದಿಗೆ ಭಾರತ ತಂಡ ಕಣಕ್ಕಿಳಿಯಬೇಕಿದೆ.

ಇದನ್ನೂ ಓದಿ: ಕೊನೆಯ ಬಾರಿಗೆ ‘I love you Amma’ ಎಂದು ಮೆಸೇಜ್​- ಖ್ಯಾತ ಯೂಟ್ಯೂಬರ್​ ದುರಂತ ಅಂತ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

India vs Zimbabwe T20 WORLD CUP 2026
Advertisment
Advertisment
Advertisment