Advertisment

‘ವಿರೋಶ್’ ಜೋಡಿಗೆ ಇವತ್ತು ಮದುವೆ.. ಉದಯಪುರದಲ್ಲಿ 2 ಸಂಪ್ರದಾಯಗಳಂತೆ ರಶ್ಮಿಕಾ-ವಿಜಯ್ ಕಲ್ಯಾಣ

ರಾಜಸ್ಥಾನದ ಉದಯಪುರದಲ್ಲಿ ಇಂದು ಎರಡೂ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಿಜಯ್-ರಶ್ಮಿಕಾ ಮದುವೆ ನಡೆಯಲಿದೆ. ವಿಶೇಷ ಎಂದರೆ, ಈ ವಿವಾಹ ಮಹೋತ್ಸವವು ಹಳೇ ಪದ್ಧತಿಯಂತೆ 'ಪ್ರೈಮಲ್ ವೆಡ್ಡಿಂಗ್ ಥೀಮ್​'ನಲ್ಲಿ (Primal Wedding Theme) ನಡೆಯುತ್ತಿರುವುದು ಎಲ್ಲರ ಗಮನ ಸೆಳೆದಿದೆ.

author-image
Ganesh Kerekuli
rashmika and vijay devarakonda (10)
Advertisment
  • 7 ವರ್ಷಗಳ ಡೇಟಿಂಗ್ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡ್ತಿರುವ ರಶ್ಮಿಕಾ-ವಿಜಯ್
  • ರಾಜಸ್ಥಾನದ ಉದಯಪುರದಲ್ಲಿ ತೆಲುಗು-ಕೊಡವ ಸಂಪ್ರದಾಯದಂತೆ ವಿವಾಹ
  • ಹೈದರಾಬಾದ್ ಮತ್ತು ಮುಂಬೈನಲ್ಲಿ ಅದ್ಧೂರಿ ಆರತಕ್ಷತೆಗೆ (ರಿಸೆಪ್ಷನ್) ಪ್ಲಾನ್

ಟಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಇಂದು (ಫೆಬ್ರವರಿ 26) ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸತತ 7 ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ (ಡೇಟಿಂಗ್) ಈ 'ವಿರೋಶ್' ಜೋಡಿ ಕೊನೆಗೂ ಹಸೆಮಣೆ ಏರುತ್ತಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

Advertisment

ರಾಜಸ್ಥಾನದ ಉದಯಪುರದಲ್ಲಿ ಇಂದು ಎರಡೂ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಿಜಯ್-ರಶ್ಮಿಕಾ ಮದುವೆ ನಡೆಯಲಿದೆ. ವಿಶೇಷ ಎಂದರೆ, ಈ ವಿವಾಹ ಮಹೋತ್ಸವವು ಹಳೇ ಪದ್ಧತಿಯಂತೆ 'ಪ್ರೈಮಲ್ ವೆಡ್ಡಿಂಗ್ ಥೀಮ್​'ನಲ್ಲಿ (Primal Wedding Theme) ನಡೆಯುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಎರಡು ಸಂಪ್ರದಾಯಗಳಂತೆ ನಡೆಯಲಿದೆ ಮದುವೆ!

ಭಿನ್ನ ಸಂಸ್ಕೃತಿಯ ಹಿನ್ನೆಲೆಯಿಂದ ಬಂದಿರುವ ಈ ಜೋಡಿಯು ಎರಡೂ ಸಂಪ್ರದಾಯಗಳಿಗೆ ಗೌರವ ನೀಡುತ್ತಿದ್ದಾರೆ. ಇಂದು ಎರಡು ಸಂಪ್ರದಾಯಗಳಂತೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ವಿವಾಹ ನೆರವೇರಲಿದೆ.

ಇದನ್ನೂ ಓದಿ:ಸೂರ್ಯಕುಮಾರ್ ಪಡೆಗೆ ಆಗ್ತಿರೋ ಹಿನ್ನಡೆ ಎಲ್ಲಿ..? ಹೇಗಿದೆ ತಂಡದ ಮೇಲೆ ಒತ್ತಡ?

Advertisment

rashmika and vijay devarakonda (9)

ಮೊದಲಿಗೆ ಇಂದು ಬೆಳಗ್ಗೆ 10 ಗಂಟೆಗೆ ವಿಜಯ್ ಅವರ ಕಡೆಯ ಪದ್ಧತಿಯಂತೆ, ಅಂದರೆ ತೆಲುಗು ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನಡೆಯಲಿವೆ. ತದನಂತರ ಮಧ್ಯಾಹ್ನದ ವೇಳೆಗೆ ರಶ್ಮಿಕಾ ಅವರ ಮೂಲ ಸಂಪ್ರದಾಯವಾದ ಕೊಡವ ಪದ್ಧತಿಯಂತೆಯೂ ಈ ಜೋಡಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡಲಿದೆ.

ಅದ್ಧೂರಿ ರಿಸೆಪ್ಷನ್ ಪ್ಲಾನ್

ರಾಜಸ್ಥಾನದಲ್ಲಿ ಆಪ್ತರಿಗಾಗಿ ಮಾತ್ರ ಮದುವೆ ನಡೆಯುತ್ತಿದ್ದು, ಮದುವೆಯ ಬಳಿಕ ಚಿತ್ರರಂಗದ ಗಣ್ಯರಿಗಾಗಿ ಎರಡು ಕಡೆಗಳಲ್ಲಿ ಅದ್ಧೂರಿ ಆರತಕ್ಷತೆ (ರಿಸೆಪ್ಶನ್​) ಕಾರ್ಯಕ್ರಮಗಳನ್ನು ಆಯೋಜಿಸಲು ರಶ್ಮಿಕಾ-ವಿಜಯ್ ಜೋಡಿ ಪ್ಲಾನ್ ಮಾಡಿಕೊಂಡಿದೆ. ಹೈದರಾಬಾದ್​ನಲ್ಲಿ ಒಂದು ಹಾಗೂ ಮುಂಬೈನಲ್ಲಿ ಮತ್ತೊಂದು ರಿಸೆಪ್ಶನ್ ನಡೆಯಲಿದೆ.

ಮುಂಬರುವ ಮಾರ್ಚ್ 4ರಂದು ಹೈದರಾಬಾದ್​ನಲ್ಲಿ ಮೊದಲ ರಿಸೆಪ್ಶನ್ ನಡೆಯಲಿದ್ದು, ದಕ್ಷಿಣ ಭಾರತದ ಖ್ಯಾತ ನಟ-ನಟಿಯರು, ನಿರ್ದೇಶಕರು ಈ ಆರತಕ್ಷತೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭಕೋರಲಿದ್ದಾರೆ. ಆನಂತರ ಬಾಲಿವುಡ್ ಮಂದಿಗಾಗಿ ಮುಂಬೈನಲ್ಲಿ ಪಾರ್ಟಿ ಆಯೋಜಿಸುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿ ಮಿಂಚುತ್ತಿರುವ ವಿಜಯ್ ಹಾಗೂ ರಶ್ಮಿಕಾ ಮದುವೆಯ ಫೋಟೋಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ. 

Advertisment

ಇದನ್ನೂ ಓದಿ: ಸೆಮಿಸ್​​ ಪ್ರವೇಶಕ್ಕೆ ಇಂಡಿಯಾ ಏನ್ ಮಾಡಬೇಕು? ಜಿಂಬಾಬ್ವೆ ಎದುರು ಟಾರ್ಗೆಟ್​ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

vijay deverakonda rashmika mandanna
Advertisment
Advertisment
Advertisment